ಸೆಪ್ಟೆಂಬರ್ 30ರಂದು ಚೆನ್ನೈನ ಪ್ರೇಮ್ ಶಂಕರ್ ತಮ್ಮ 25ನೇ ಹುಟ್ಟುಹಬ್ಬವನ್ನು ವೆಬ್ಸೈಟ್ ಅನಾವರಣಗೊಳಿಸುವ ಮೂಲಕ ಆಚರಿಸಿದರು. ಅದರಲ್ಲೇನು ವಿಶೇಷ? ಇತ್ತೀಚಿನ ದಿನಗಳಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ವೆಬ್ಸೈಟ್ ವಿನ್ಯಾಸ ಮಾಡುವವರು, ಕೋಡಿಂಗ್ ಕಲಿಯುವವರು ಇದ್ದಾರೆ ಅಲ್ಲವೇ ಎಂದು ಯೋಚಿಸುತ್ತಿದ್ದೀರಾ? ಖಂಡಿತವಾಗಿಯೂ. ಆದರೆ ಪ್ರೇಮ್ ಶಂಕರ್ ಅತ್ಯಂತ ವಿಶೇಷ ವ್ಯಕ್ತಿ. ಯಾಕೆಂದರೆ ಅವರು ಆಟಿಸಂ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು ಒದ್ದಾಡುತ್ತಾರೆ, ಬುದ್ಧಿಶಕ್ತಿ ಉಪಯೋಗಿಸಿ ಮಾಡುವಂತಹ ಕೆಲಸಗಳು ಅವರಿಗೆ ಸವಾಲಿನದ್ದಾಗಿರುತ್ತದೆ. ಆದರೆ ಕರಕುಶಲ ವಸ್ತುಗಳು ಮತ್ತು ಇತ್ಯಾದಿ ಕೆಲಸಗಳನ್ನು ಅವರು ಮಾಡುತ್ತಾರೆ.
ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು ಪ್ರೇಮ್ ಅವರು ಯಶಸ್ವಿಯಾಗಿ ತಮ್ಮ ಗ್ರಾಹಕರಿಗೆ ಸಂವಾದಾತ್ಮಕ ವೆಬ್ಸೈಟ್ಗಳನ್ನು ಅಭಿವೃದ್ಧಿಪಡಿಸಲು HTML ಮತ್ತು CSS ನ ಸಂಕೀರ್ಣ ಕೋಡಿಂಗ್ ವ್ಯವಸ್ಥೆಗಳನ್ನು ಯಶಸ್ವಿಯಾಗಿ ಕಲಿತಿದ್ದಾರೆ.
ಪ್ರೇಮ್ ಅವರ ಸ್ಪೂರ್ತಿದಾಯಕ ಜೀವನ ಪಯಣ, ಕಲಿಯುವ ಉತ್ಸಾಹ ಮತ್ತು ಕೋಡಿಂಗ್ ಭಾಷೆಗಳನ್ನು ಕಲಿಯುವವರೆಗೆ ಪಟ್ಟು ಬಿಡದ ಹೋರಾಟ ಅವರಿಗೆ ಒಂದು ವರ್ಷದಲ್ಲಿ ಮುಖ್ಯವಾಹಿನಿಯ ವೃತ್ತಿಯನ್ನು ಪ್ರವೇಶಿಸಲು ಅನುವು ಮಾಡಿಕೊಟ್ಟಿತು.
“ಪ್ರೇಮ್ ಡೇಟಾ ಎಂಟ್ರಿ ಕಲಿತಿದ್ದಾರೆ ಮತ್ತು ನೇಯ್ಗೆ ಮತ್ತು ಪ್ಲೇಟ್ ತಯಾರಿಕೆಯಲ್ಲಿ ವೃತ್ತಿಪರ ತರಬೇತಿಯನ್ನು ಸಹ ಪೂರ್ಣಗೊಳಿಸಿದ್ದಾರೆ. ಆದರೆ ಸಮಸ್ಯೆಯ ಕಾರಣಗಳಿಗಾಗಿ ಅವರಿಗೆ ಎಂದಿಗೂ ಡೇಟಾ ಎಂಟ್ರಿಯಲ್ಲಿ ಕೆಲಸ ಸಿಗಲಿಲ್ಲ”ಎಂದು ಅವರ ತಾಯಿ ಮಂಗೈ ಹೇಳುತ್ತಾರೆ.
ಪ್ರೇಮ್ ಎಂಟು ವರ್ಷದವರೆಗೆ ಸಿಬಿಎಸ್ಇ ಬೋರ್ಡ್ ಶಾಲೆಯಲ್ಲಿ ಶಿಕ್ಷಣವನ್ನು ಪಡೆದರು. ನಂತರ ಅವರು ಶಿಕ್ಷಣವನ್ನು ಮೊಟಕುಗೊಳಿಸಿದರು. ನಂತರ ತಮ್ಮ 20 ನೇ ವಯಸ್ಸಿನಲ್ಲಿ ವಿಶೇಷ ಶಾಲೆಯಿಂದ ಹತ್ತನೇ ಮತ್ತು ಹನ್ನೆರಡನೇ ತರಗತಿಯನ್ನು ಮುಗಿಸಿದರು.
ಬಳಿಕ ಕಷ್ಟಪಟ್ಟು ಕೋಡಿಂಗ್ ಕಲಿತರು. ಒಂದು ವರ್ಷದ ತರಬೇತಿ ಮತ್ತು ಕಲಿಕೆಯ ನಂತರ, ಪ್ರೇಮ್ ಐದು ವೆಬ್ಸೈಟ್ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅದರಲ್ಲಿ ಅವರ ಸ್ವಂತ ಒಂದು ವೆಬ್ಸೈಟ್ ಸೇರಿದೆ.
ಪ್ರೇಮ್ಗೆ ಉತ್ತಮ ಮೆಮೊರಿ ಇದೆ, ಆದರೆ ಲಾಜಿಕ್ನಲ್ಲಿ ಆತ ದುರ್ಬಲವಾಗಿದ್ದಾನೆ. ಆದ್ದರಿಂದ, ನಾವು ಅವರ ಸಾಮರ್ಥ್ಯದ ಮೇಲೆ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಆರಂಭದಲ್ಲಿ, ಶುಭಾಶಯ ಪತ್ರಗಳು ಅಥವಾ ಇತರ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಲು ನಾವು ಹೇಳಿಕೊಟ್ಟೆವು. ಆದರೆ ಡಿಸೆಂಬರ್ 2019 ರಿಂದ ಪ್ರೇಮ್ ಕಂಪ್ಯೂಟರ್ ಕೋಡಿಂಗ್ ಬೇಸಿಕ್ಸ್ ಮತ್ತು ಭಾಷೆಗಳನ್ನು ಕಲಿಯಲು ಪ್ರಾರಂಭಿಸಿದರು” ಎಂದು ಮಂಗೈ ಹೇಳುತ್ತಾರೆ.
ಒಟ್ಟಿನಲ್ಲಿ ಪ್ರಯತ್ನವಿದ್ದರೆ ಯಾವುದೂ ಕೂಡ ಅಸಾಧ್ಯವಲ್ಲ ಎಂಬುದಕ್ಕೆ ಪ್ರೇಮ್ ಅವರ ಸಾಧನೆಯೇ ಉದಾಹರಣೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.