ಬೆಳ್ತಂಗಡಿ : ಪುತ್ತೂರು ತಾಲೂಕಿನ ಕಡಬ ವಲಯದ 802ನೇ ಮದ್ಯವರ್ಜನ ಶಿಬಿರ ಮತ್ತು ಕುಮುಟಾ ತಾಲೂಕಿನ ಹೆರವಟ್ಟಾದಲ್ಲಿ ನಡೆದ 826ನೇ ಮದ್ಯವರ್ಜನ ಶಿಬಿರದ ಪಾನಮುಕ್ತ ಸದಸ್ಯರು ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಶತದಿನೋತ್ಸವವನ್ನು ಶ್ರೀ ಮಂಜುನಾಥ ಸ್ವಾಮಿಯದರ್ಶನ ಮಾಡುವುದರ ಮೂಲಕ ಆಚರಿಸಿದರು. ನಂತರ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಭೇಟಿ ಮಾಡಿ ಆಶೀರ್ವಾದ ಪಡೆದರು.
ನವಜೀವನ ಸದಸ್ಯರನ್ನುದ್ದೇಶಿಸಿ ಮಾತನಾಡಿದಡಾ|ಹೆಗ್ಗಡೆ ಮದ್ಯಪಾನವನ್ನು ತ್ಯಜಿಸಿ ಹೊಸಜೀವನವನ್ನು ನಡೆಸಿದ್ದರ ಫಲವಾಗಿ ಕ್ಷೇತ್ರದ ಮಂಜುನಾಥನ ಅನುಗ್ರಹಕ್ಕೆ ನೀವು ಪಾತ್ರರಾಗಿರುತ್ತೀರಿ.ಪ್ರಕೃತಿಯ ನಿಯಮದ ಪ್ರಕಾರವೇ ಪ್ರಾಣಿ ಪಕ್ಷಿಗಳು ಜೀವನಕ್ರಮ ಅನುಸರಿಸುತ್ತದೆ.ಆದರೆ ಮನುಷ್ಯಅವೆಲ್ಲಕ್ಕಿಂತ ವಿಭಿನ್ನವಾಗಿ ಆಲೋಚನೆ ಮಾಡುತ್ತಾನೆ, ಜೀವಿಸುತ್ತಾನೆ, ಮನುಷ್ಯತನ್ನ ಇಂದ್ರಿಯಗಳಿಗೆ ದಾಸನಾಗಿ ದುಶ್ಚಟ ದುರಭ್ಯಾಸಗಳನ್ನು ರೂಡಿಸಿಕೊಂಡಿರುತ್ತಾನೆ. ಮನುಷ್ಯ ಪಂಚೆಂದ್ರಿಯಗಳನ್ನು ನಿಗ್ರಹಿಸಲು ಕಲಿಯಬೇಕು. ಕೆಟ್ಟದಕ್ಕೆ ಯಾವತ್ತೂ ಆಕರ್ಷಣೆ ಜಾಸ್ತಿ. ಆದುದರಿಂದ ಇಂದ್ರಿಯಗಳನ್ನು ಮನಸ್ಸಿನ ಮೂಲಕ ನಿಗ್ರಹಿಸಿ ಪರಿಶುದ್ದಜೀವನ ನಡೆಸಬೇಕು. ಮಹಿಳೆಯರು ಅಮಲುರೋಗಿಗಳ ಬಗ್ಗೆ ವಿಶೇಷ ಕಾಳಜಿವಹಿಸಿ ಪ್ರೀತಿಯಿಂದ ನಡೆದುಕೊಳ್ಳಬೇಕು, ತಪ್ಪುಗಳನ್ನು ತಿದ್ದಬೇಕು. ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ ಎಂದು ಆಶೀರ್ವದಿಸಿದರು.
ಸಭೆಯಲ್ಲಿ ಕುಮುಟಾದ 826ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಅಧ್ಯಕ್ಷರಾದ ಸಿ.ಆರ್.ನಾಯ್ಕ ಹಾಗೂ ಕಡಬದ 802ನೇ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಚಿದಾನಂದಗೌಡ ಶಿಬಿರದ ಅನುಭವವನ್ನು ಹಂಚಿದರು. ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ದೇವದಾಸ್ ಹೆಬ್ಬಾರ್ ಹಾಗೂ ಜನಜಾಗೃತಿ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಸ್, ಶಿಬಿರಾಧಿಕಾರಿ ನಂದಕುಮಾರ್, ಕಡಬ ಹಾಗೂ ಕುಮುಟಾ ವಲಯದ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ಕುಮುಟಾ ಹಾಗೂ ಕಡಬದ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು. ಶಿಬಿರಾಧಿಕಾರಿ ದಿವಾಕರ ಪೂಜಾರಿ ಸ್ವಾಗತಿಸಿ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. 140 ಮಂದಿ ನವಜೀವನ ಸದಸ್ಯರುಕುಟುಂಬ ಸಮೇತರಾಗಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.