ಸೋಶಿಯಲ್ ಮೀಡಿಯಾವೇ ಹಾಗೆ, ಕೆಲವೊಮ್ಮೆ ಅದು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ ಮತ್ತು ಕೆಲವೊಮ್ಮೆ ಅದು ನಕಾರಾತ್ಮಕತೆ ಹರಡುವಂತೆ ಮಾಡುತ್ತದೆ. ಆದರೆ ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆಯೇ ಅದರ ಪ್ರಯೋಜನ ಮತ್ತು ಅಪ್ರಯೋಜನ ನಿಂತಿದೆ. ಸೋಶಿಯಲ್ ಮೀಡಿಯಾದಿಂದ ಸಮಾಜದಲ್ಲಿ ಹಲವು ಬದಲಾವಣೆಗಳು ಆಗಿವೆ. ಅದರ ಉತ್ತಮ ಕಾರ್ಯಕ್ಕೆ ಒಂದು ಉದಾಹರಣೆಯೇ ಇತ್ತೀಚಿನ ಬಾಬಾ ಕಾ ಢಾಬಾ. ಒಂದು ರೂಪಾಯಿಯ ವ್ಯಾಪಾರವಿಲ್ಲದೆ ಪರಿತಪಿಸುತ್ತಿದ್ದ ಢಾಬಾ ನಡೆಸುತ್ತಿದ್ದ ವೃದ್ಧ ದಂಪತಿ ಇಂದು ಸೋಶಿಯಲ್ ಮೀಡಿಯಾ ಪ್ರಭಾವದಿಂದಾಗಿ ನೆಮ್ಮದಿ ಕಾಣುತ್ತಿದ್ದಾರೆ.
ನವದೆಹಲಿಯ ಮಾಲ್ವಿಯ ನಗರ್ ಪ್ರದೇಶದಲ್ಲಿ ಢಾಬಾ ನಡೆಸುತ್ತಿದ್ದ ವೃದ್ಧ ದಂಪತಿ ಇತ್ತೀಚಿನ ದಿನಗಳಲ್ಲಿ ತೀರಾ ಸಂಕಷ್ಟವನ್ನು ಎದುರಿಸುತ್ತಿದ್ದರು. ಅವರು ಮಾಡುತ್ತಿದ್ದ ರುಚಿ ರುಚಿಯಾದ ಅಡುಗೆಯನ್ನು ಸೇವಿಸಲು ಜನರೇ ಬರುತ್ತಿರಲಿಲ್ಲ. ಆದಾಯವಿಲ್ಲದೆ ವೃದ್ಧ ದಂಪತಿಗೆ ಜೀವನ ನಡೆಸುವುದೇ ದುಸ್ತರವಾಗಿತ್ತು. ಇಂತಹ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಈ ದಂಪತಿಯ ಕಷ್ಟಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಈ ವಿಡಿಯೋದಲ್ಲಿ ದಂಪತಿ ತಮ್ಮ ಕಷ್ಟವನ್ನು ಹೇಳಿಕೊಂಡು ಕಣ್ಣೀರು ಸುರಿಸಿದ್ದಾರೆ. ತುಂಬಾ ರುಚಿಯಾದ ಸ್ವಾದಿಷ್ಟ ಆಹಾರಗಳನ್ನು ಮಾಡಿಟ್ಟು ಗ್ರಾಹಕರಿಗಾಗಿ ಕಾದರೂ ಯಾರೊಬ್ಬರೂ ತಮ್ಮ ಬಳಿಗೆ ಬರುತ್ತಿಲ್ಲ ಎನ್ನುವ ಅಳಲನ್ನು ತೋಡಿಕೊಂಡಿದ್ದಾರೆ.
ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದೇ ತಡ ಸಾವಿರಾರು ಜನರು ವಿಡಿಯೋ ನೋಡಿ ದಂಪತಿಯ ಕಷ್ಟಕ್ಕೆ ಮರುಗಿದ್ದಾರೆ. ವೃದ್ಧ ದಂಪತಿಗೆ ನೆರವು ನೀಡಲು ನೂರಾರು ಜನ ಮುಂದಾಗಿದ್ದಾರೆ. ಅವರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿದ್ದಾರೆ. ಮಾತ್ರವಲ್ಲ, ವಿಡಿಯೋ ವೈರಲ್ ಆದ ಬಳಿಕದಿಂದ ಇವರ ಢಾಬಾಗೆ ಭಾರಿ ಸಂಖ್ಯೆಯಲ್ಲಿ ಗ್ರಾಹಕರೂ ಬರುತ್ತಿದ್ದಾರೆ.
ಹೀಗೆ ಸಾಮಾಜಿಕ ಜಾಲತಾಣದ ಪ್ರಭಾವದಿಂದಾಗಿ ವೃದ್ಧ ದಂಪತಿಯ ಬದುಕು ಈಗ ಹಸನಾಗಿದೆ. ಅವರಂತೆಯೇ ಕೊರೋನಾ ಕಾರಣದಿಂದಾಗಿ ಭಾರಿ ಸಂಖ್ಯೆಯ ಬೀದಿಬದಿ ವ್ಯಾಪಾರಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರೆಲ್ಲರಿಗೂ ಸ್ಥಿತಿವಂತರು ನೆರವು ನೀಡಲು ಮುಂದಾಗಬೇಕಾದ ಅವಶ್ಯಕತೆ ಇದೆ. ನೆರವಿನ ಅಗತ್ಯ ಇರುವವರನ್ನು ಮತ್ತು ನೆರವು ನೀಡಲು ಬಯಸುವವರನ್ನು ಸಂಪರ್ಕಿಸುವ ಕೊಂಡಿಯಾಗಿ ಸಾಮಾಜಿಕ ಜಾಲತಾಣಗಳು ಕಾರ್ಯನಿರ್ವಹಿಸಬೇಕಾಗಿರುವುದು ಇಂದಿನ ಅನಿವಾರ್ಯತೆ ಆಗಿದೆ.
When we talk about Make in India and #vocalforlocal it’s our responsibility to help such vendors and small business.
If you live in Malviya nagar or nearby please try to eat here sometimes, it will only help this 80 year old sitting with his wife to earn some money & not begging pic.twitter.com/KwewheeePY
— Ashutosh🇮🇳 (@iashutosh23) October 7, 2020
I’ve decided to be their waiter for tomorrow as I’m sure a lot of people will pour in after their video went viral and the old couple might struggle in serving the food to all. And then I’ll see how else we all can help them collectively.
Any placard suggestions for tomorrow? https://t.co/uyIHL6GdAe
— Madhur (@ThePlacardGuy) October 7, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.