ಉಡುಪಿ : ಶುಕ್ರವಾರ ಸಂಜೆಯ ಹೊತ್ತಿಗೆ ಶ್ರೀಕೃಷ್ಣ ಮಠದ ಆನೆ ಸುಭದ್ರೆ ಸಿಟ್ಟು ಮಾಡಿಕೊಂಡು ಗಲಾಟೆ ಮಾಡುತ್ತಿದೆ ಎಂದು ಸಾರ್ವಜನಿಕರು ಕರೆಯೊಂದನ್ನು ಮಾಡಿದ್ದು ನಂತರ ಈ ವಿಷಯ ಶ್ರೀ ಕೃಷ್ಣ ಮಠದ ಆನೆ ಸುಭದ್ರೆ ತಪ್ಪಿಸಿಕೊಂಡಿದೆ ಎನ್ನುವ ಮಟ್ಟಿಗೆ ತಪ್ಪು ಸಂದೇಶಗಳು ರವಾನೆಯಾಯಿತು.ವರದಿಗಾಗರು ಕೂಡಾ ಈ ವಿಷಯದಿಂದ ಗಲಿಬಿಲಿಕೊಂಡು ಶ್ರೀ ಕೄಷ್ಣ ಮಠದ ಆನೆ ಇರುವ ಸ್ಥಳಕ್ಕೆ ಬಂದು ನೋಡಿದಾಗ ಮಾತ್ರ ಸುಭದ್ರೆ ಸ್ಥಳದಲ್ಲೇ ಭದ್ರವಾಗಿತ್ತು.
ಆಗಿದ್ದು ಇಷ್ಟೇ: ಆನೆಯ ಮಾವುತ ರಜೆ ಹಾಕಿದ ಕಾರಣ ಸುಭದ್ರೆಯನ್ನು ನೋಡಿಕೊಳ್ಳಲು ಪರ್ಯಾಯ ಮಾವುತ ಇರಲಿಲ್ಲ. ಈ ಸಂದರ್ಭ ಸಂಜೆಯ ಹೊತ್ತಿಗೆ ಆನೆಗೆ ಕಾಲಿನ ಸರಪಳಿಯೊಂದು ಸಿಕ್ಕಿ ಬಿದ್ದಿದ್ದು ಅದು ನೋವಿನ ಹಿನ್ನಲೆಯಲ್ಲಿ ಆನೆ ಸಿಟ್ಟುಗೊಂಡಿತ್ತು. ಅಲ್ಲದೇ ಸರಪಳಿಯನ್ನ ತೆಗೆಯಲು ಹರಸಾಹಸಪಟ್ಟಿದ್ದು ಈ ಸಂದರ್ಭದಲ್ಲಿ ಸರಪಳಿ ತುಂಡಾಗಿದ್ದು ಇದನ್ನ ಸ್ಥಳೀಯರು ಗಮನಿಸಿದ್ದಾರೆ. ಈ ವಿಷಯವನ್ನು ಕೆಲವರಿಗೆ ತಿಳಿಸಿದ ನಂತರ ವಿಷಯ ಗಾಳಿ ಸುದ್ದಿಯಾಗಿ ಪರಿವರ್ತನೆಗೊoಡು ಹಬ್ಬಿದೆ. ಈ ಹಿಂದೆ ಲಕ್ಷ್ಮೀಶ ಆನೆ ಉಡುಪಿಯಲ್ಲಿ ಧಾಂಧಲೆಯನ್ನು ಎಬ್ಬಿಸಿದ್ದರ ಹಿನ್ನಲೆಯಲ್ಲಿ ಈ ವಿಷಯ ಸಹಜವಾಗಿ ಆತಂಕಕ್ಕೆ ಕಾರಣವಾಗಿತ್ತು. ಶುಕ್ರವಾರ ಸಂಜೆಯ ಹೊತ್ತಿಗೆ ಶ್ರೀಕೃಷ್ಣ ಮಠದ ಆನೆ ಸುಭದ್ರೆ ಸಿಟ್ಟು ಮಾಡಿಕೊಂಡು ಗಲಾಟೆ ಮಾಡುತ್ತಿದೆ ಎಂದು ಸಾರ್ವಜನಿಕರು ಕರೆಯೊಂದನ್ನು ಮಾಡಿದ್ದು ನಂತರ ಈ ವಿಷಯ ಶ್ರೀ ಕೃಷ್ಣ ಮಠದ ಆನೆ ಸುಭದ್ರೆ ತಪ್ಪಿಸಿಕೊಂಡಿದೆ ಎನ್ನುವ ಮಟ್ಟಿಗೆ ತಪ್ಪು ಸಂದೇಶಗಳು ರವಾನೆಯಾಯಿತು. ವರದಿಗಾಗರು ಕೂಡಾ ಈ ವಿಷಯದಿಂದ ಗಲಿಬಿಲಿಕೊಂಡು ಶ್ರೀ ಕೃಷ್ಣ ಮಠದ ಆನೆ ಇರುವ ಸ್ಥಳಕ್ಕೆ ಬಂದು ನೋಡಿದಾಗ ಮಾತ್ರ ಸುಭದ್ರೆ ಸ್ಥಳದಲ್ಲೇ ಭದ್ರವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.