ತ್ರಿಂಬಕೇಶ್ವರ ದಕ್ಷಿಣಮುಖಿ ಹನುಮಾನ್ ದೇವಸ್ಥಾನದ ಮಹಂತ್ ಕಲ್ಪವೃಕ್ಷ ಗಿರಿ ಮಹಾರಾಜ್ (70), ಅವರ ಸಹಚರ ಮಹಂತ್ ಸುಶೀಲ್ ಗಿರಿ ಮಹಾರಾಜ್ (35) ಮತ್ತು ಅವರ ಚಾಲಕ ನಿಲೇಶ್ ತೆಲ್ಗಡೆ (30) ಅವರ ಘೋರ ಹತ್ಯೆಯ ಪ್ರಕರಣ ನಡೆಯಿತು. ಏಪ್ರಿಲ್ 16, 2020 ರಂದು ಮಹಾರಾಷ್ಟ್ರದ ಪಾಲಘರ್ ಜಿಲ್ಲೆಯ ಗಡಚಿಂಚಲೆ ಗ್ರಾಮದಲ್ಲಿ ಈ ಮೂವರನ್ನು ಅತ್ಯಂತ ಕ್ರೂರವಾಗಿ ಕೊಲ್ಲಲಾಯಿತು. ಇಬ್ಬರೂ ಸಂತರು ವಾರಣಾಸಿಯ ಶ್ರೀ ಪಂಚ ದಶನಾಮ ಅಖಾಡಾಕ್ಕೆ ಸೇರಿದವರಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಗಿಯಾದ ಅಪರಾಧಿಗಳನ್ನು 2020 ರ ಏಪ್ರಿಲ್ 17 ರಂದು ಬಂಧಿಸಲಾಯಿತು. ಈ ಘಟನೆಯ ವಿಡಿಯೋಗಳು ಏಪ್ರಿಲ್ 19 ರಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದರ ನಂತರವೇ ಈ ವಿಧ್ವಂಸಕ ಕೃತ್ಯದ ಬಗ್ಗೆ ನಮಗೆಲ್ಲಾ ತಿಳಿದಿದ್ದು. ಯಾವುದೇ ಸೂಕ್ಷ್ಮಮತಿಯುಳ್ಳ ವ್ಯಕ್ತಿಯು ಆ ವೀಡಿಯೊಗಳನ್ನು ನೋಡಿದರೆ ಅವನು ಅಘಾತಕ್ಕೊಳಗಾಗುತ್ತಾನೆ ಮತ್ತು ಎದೆಗುಂದುತ್ತಾನೆ. ಆದರೆ ಆಶ್ಚರ್ಯಕರ ಸಂಗತಿಯೆಂದರೆ, ಸದಾ ಮೇಣದಬತ್ತಿ –ಪೋಸ್ಟರ್ ಹಿಡಿದುಕೊಂಡು ರಸ್ತೆಗಳಲ್ಲಿ ಹುಯಿಲೆಬ್ಬಿಸುವ ಉದಾರವಾದಿಗಳು, ಎಡಪಂಥೀಯರು, ಇಸ್ಲಾಮಿಕ್ ಮತ್ತು ಜೆ.ಎನ್. ಯು. ಗ್ಯಾಂಗ್ ಎಲ್ಲಿಯೂ ಕಾಣಿಸುತ್ತಿಲ್ಲಾ. ಈ ಘಟನೆ ಒಂದು ನಿರ್ದಿಷ್ಟ ಸಮುದಾಯದೊಂದಿಗೆ ಅಥವಾ ಅದೇ ಗ್ಯಾಂಗ್ನ ಯಾರೊಂದಿಗಾದರೂ ನಡೆದಿದ್ದರೆ, ಇಂದು ಎಷ್ಟು ಕೋಲಾಹಲ ಸಂಭವಿಸುತ್ತದೆ ಎಂದು ಯೋಚಿಸಿ. ಇಷ್ಟೇ ಅಲ್ಲದೇ ಮಹಾರಾಷ್ಟ್ರದಲ್ಲಿ ಈಗೇನಾದರೂ ಬಿಜೆಪಿ ಸರ್ಕಾರವಿದ್ದಿದ್ದರೆ ಅವರ ಅಳಲಿಗೆ ಯಾವ ಸೀಮೆಯೂ ಇರುತ್ತಿರಲಿಲ್ಲ. ಆದರೆ, ಇಲ್ಲಿ ಪೈಶಾಚಿಕತೆಗೆ ಬಲಿಪಶುಗಳಾದವರು ಕಾಷಾಯ ವಸ್ತ್ರ ಧರಿಸಿದ ಸಾಧುಗಳು. ಹೀಗಾಗಿ ಅವರ ಆತ್ಮಸಾಕ್ಷಿಯನ್ನು ಏಕೆ ಜಾಗೃತಗೊಳ್ಳಬೇಕು?
ಈ ಘಟನೆಯನ್ನು ವಿರೋಧಿಸುವ ಮತ್ತು ಖಂಡಿಸುವವರಿಗೆ ಈ ಘಟನೆಗೆ ಸಂಬಂಧಿಸಿದ ಕೆಲವು ಪ್ರಮುಖ ಸಂಗತಿಗಳನ್ನು ಗಮನಕ್ಕೆ ತರುವುದು ಕೂಡ ಅಷ್ಟೇ ಮುಖ್ಯ ಮತ್ತು ಅವಶ್ಯಕ. ಮಹಾರಾಷ್ಟ್ರದ ಪಾಲಘರ್ ಜಿಲ್ಲೆಯಲ್ಲಿ ಕೊಂಕಣ, ವಾರ್ಲಿ ಮತ್ತು ಠಾಕೂರ್ ಬುಡಕಟ್ಟು ಜನರು ಹೆಚ್ಚಾಗಿ ವಾಸಿಸುವ ಕೆಲವು ಪ್ರದೇಶಗಳು ಇವೆ. ಅಭಿವೃದ್ಧಿಯಿಂದ ವಂಚಿತರಾದ ಈ ದೂರದ ಹಳ್ಳಿಗಳಲ್ಲಿ ಹಲವಾರು ವರ್ಷಗಳಿಂದ ಕ್ರಿಶ್ಚಿಯನ್ ಮಿಷನರಿಗಳು ಮತ್ತು ಎಡಪಂಥೀಯರು ತಮ್ಮ ಪ್ರಭಾವದ ಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಎಡಪಂಥೀಯ ಮತ್ತು ಮಿಷನರಿ ಪ್ರಭಾವವುಳ್ಳ ಬುಡಕಟ್ಟು ಪ್ರದೇಶಗಳಲ್ಲಿ, ಮತಾಂತರಗೊಂಡ ಬುಡಕಟ್ಟು ಸಮುದಾಯದ ಜನರಿಂದ ಪ್ರತ್ಯೇಕ ಧಾರ್ಮಿಕ ಸಂಹಿತೆಯ ಬೇಡಿಕೆ ಇದೆ ಎಂದು ನಮಗೆ ತಿಳಿದಿರಲಿ. ಅವರ ಗುರುತು ಹಿಂದೂಗಳಿಗಿಂತ ಭಿನ್ನವಾಗಿದೆ ಎಂದು ಪದೇ ಪದೇ ಹೇಳುವ ಮೂಲಕ ಅವರನ್ನು ಪ್ರಚೋದಿಸಲಾಗುತ್ತದೆ.
ಭಾರತದಲ್ಲಿ ಬ್ರಿಟಿಷ್ ಆಡಳಿತದ ಸಮಯದಲ್ಲಿ ಅವರ ವಿಭಜಕ ರಾಜಕೀಯದಿಂದಾಗಿ, 1871-1951 ರ ಅವಧಿಯಲ್ಲಿ ಬುಡಕಟ್ಟು ಜನಾಂಗದ ಜನಗಣತಿಯಲ್ಲಿ ಸರ್ನಾ ಎಂಬ ಪ್ರತ್ಯೇಕ ಧಾರ್ಮಿಕ ಕೋಡ್ ಅನ್ನು ಸೇರಿಸಲಾಗುತ್ತಿತ್ತು. 1951 ರಲ್ಲಿ ಸ್ವಾತಂತ್ರ್ಯದ ನಂತರ ಈ ಕೋಡ್ ಅನ್ನು ಜನಗಣತಿಯಿಂದ ತೆಗೆದುಹಾಕಲಾಯಿತು. ಆದಾಗ್ಯೂ, ಎಡಪಂಥೀಯ ಕ್ರಿಶ್ಚಿಯನ್ ಸಂಚುಕೋರರು ಬುಡಕಟ್ಟು ಜನಾಂಗದವರು ಅಥವಾ ಸ್ಥಳೀಯ ಜನರಂತಹ ಬುಡಕಟ್ಟು ಜನಾಂಗದವರಲ್ಲಿ ಪ್ರತ್ಯೇಕತೆಯ ಭಾವವನ್ನು ಮೂಡಿಸಲು ದಣಿವರಿಯದ ಪ್ರಯತ್ನಗಳನ್ನು ಮಾಡಿದ್ದಾರೆ. ಇದರ ಪರಿಣಾಮವಾಗಿ, ಬುಡಕಟ್ಟು ಜನಾಂಗದ ಕೆಲವು ಮತಾಂತರಗೊಂಡ ಜನರು ಹಿಂದೂ ಧರ್ಮವನ್ನು ದ್ವೇಷದಿಂದ ನೋಡಲಾರಂಭಿಸಿದರು. ಕೆಲವು ವರ್ಷಗಳಿಂದ, ಪಾಲ್ಘರ್ ಜಿಲ್ಲೆಯ ಬುಡಕಟ್ಟು ಸಮುದಾಯದ ಕೆಲವು ವ್ಯಕ್ತಿಗಳಲ್ಲೂ ಈ ಹಿಂದು ದ್ವೇಷ ಹುಟ್ಟಿಕೊಂಡಿದೆ. ಅಂತಹ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡೇ, ಕ್ರಿಶ್ಚಿಯನ್ ಮಿಷನರಿ ಚಟುವಟಿಕೆಗಳ ಮೇಲೆ ತಡೆಯೊಡ್ಡಲು 1956 ನಿಯೋಗಿ ಸಮಿತಿಯ ವರದಿಯು ಮತಾಂತರದ ಕಾನೂನು ನಿಷೇಧವನ್ನು ಶಿಫಾರಸು ಮಾಡಿತು. ಆದರೆ ದುರದೃಷ್ಟವಶಾತ್ ಆ ಕಾನೂನು ಜಾರಿಯಾಗಲಿಲ್ಲ.
ರಾಷ್ಟ್ರ ಮತ್ತು ಸಮಾಜವನ್ನು ಒಡೆಯುವ ಅನೇಕ ಚಟುವಟಿಕೆಗಳು ನಮ್ಮ ದೇಶದಲ್ಲಿ ನಡೆಯುತ್ತಿವೆ. ಆದರೆ ಭಾರತದಲ್ಲಿ ಬುಡಕಟ್ಟು ಮತ್ತು ನಗರೀಯ ಸಮುದಾಯದ ನಡುವೆ ನಿಜವಾಗಿಯೂ ವ್ಯತ್ಯಾಸವಿದೆಯೇ? ಭಾರತೀಯ ನಾಗರಿಕತೆಯ ಹೆಗ್ಗುರುತಾಗಿರುವ ನಮ್ಮ ವೇದಗಳು, ಪುರಾಣಗಳು, ರಾಮಾಯಣ, ಮಹಾಭಾರತ ಇತ್ಯಾದಿಗಳಲ್ಲಿ ಅರಣ್ಯವಾಸಿಗಳು ಮತ್ತು ನಗರೀಯ ಸಮುದಾಯದಲ್ಲಿ ಸಾಮರಸ್ಯ ಮತ್ತು ಸೌಹಾರ್ದತೆಯ ವರ್ಣನೆ ಎದ್ದು ಕಾಣುತ್ತದೆ. ಆಚಾರ್ಯ ವಿನೋಬಾ ಭಾವೆಯವರು ಋಗ್ವೇದವನ್ನು ವನವಾಸಿಗಳ ಗ್ರಂಥವೆಂದೇ ಹೇಳಿದ್ದಾರೆ. ಭಾರತದ ಭಿಲ್, ಗೊಂಡ್, ಮಡಿಯಾ, ಪ್ರಧಾನ್ ಮುಂತಾದ ಅನೇಕ ಬುಡಕಟ್ಟು ಜನಾಂಗಗಳಲ್ಲಿ ಮಹಾದೇವ್-ಶಿವನನ್ನು ಪೂಜಿಸಲಾಗುತ್ತದೆ. ಹಿಂದೂಗಳಂತೆಯೇ, ಬುಡಕಟ್ಟು ಸಮುದಾಯದ ಜನರು ಸಹ ಪ್ರಕೃತಿಯನ್ನು ಆರಾಧಿಸುವವರು. ಉತ್ತರ ಮತ್ತು ದಕ್ಷಿಣ ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಇತ್ಯಾದಿ ದೇಶಗಳಲ್ಲಿ ನಡೆದಂತಹ ಬುಡಕಟ್ಟು ಜನಾಂಗದವರ ನರಮೇಧದಂತಹ ಘಟನೆಗಳು ಭಾರತದಲ್ಲಿ ನಡೆದ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಆರ್ಯ ದಾಳಿಯಂತಹ ಸಂಯೋಜಿತ ಸಿದ್ದಾಂತಗಳ ನಿಜ ಸ್ವರೂಪ ಕೂಡ ಈಗ ಬಯಲಾಗಿದೆ. ಹಾಗಾದರೆ ಈ ವೈಮನಸ್ಸು ಎಂತಹದ್ದು? ಯಾರು ಪಿತೂರಿ ಮಾಡುತ್ತಿದ್ದಾರೆ? ನಾವು ಈ ಬಗ್ಗೆ ವಿಮರ್ಶೆ ಮಾಡಬೇಕಿದೆ.
ಭಾರತದ ಸಂತರು ಮತ್ತು ಸಾಮಾಜಿಕ ಸಂಘಟನೆಗಳು ಇಂತಹ ರಾಷ್ಟ್ರ ಮತ್ತು ಸಮಾಜದ್ರೋಹದ ವಿರುದ್ಧ ಪ್ರತಿಭಟಿಸಿದಾಗಲೆಲ್ಲಾ ಅದರ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಯಿತು. ಇದೇ ಕ್ರಿಶ್ಚಿಯನ್ ಮಿಷನರಿ ಮತ್ತು ಉಗ್ರಗಾಮಿ ಕಮ್ಯುನಿಸ್ಟ್ ನಕ್ಸಲೈಟ್ ವಿಚಾರಧಾರೆಯ ಗ್ಯಾಂಗ್ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿಯನ್ನು 2008 ರ ಆಗಸ್ಟ್ 23 ರಂದು ಜನ್ಮಸ್ಥಾಮಿಯ ಪವಿತ್ರ ದಿನದಂದು ಹತ್ಯೆ ಮಾಡಿತು. ಸ್ವಾಮೀಜಿ ಅವರು ಮಾಡಿದ ತಪ್ಪಾದರೂ ಏನು? ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದವರಿಗೆ ಆಮಿಷ ಒಡ್ಡುವ ಮೂಲಕ ನಡೆಯುತ್ತಿದ್ದ ಮತಾಂತರವನ್ನು ಅವರು ವಿರೋಧಿಸಿದ್ದರು, ಸ್ವದೇಶ ಮತ್ತು ಸ್ವಧರ್ಮ ಕುರಿತು ಜಾಗೃತಿಯನ್ನುಂಟು ಮಾಡುವ ಕೆಲಸ ಮಾಡುತ್ತಿದ್ದರು. ಇದೇ ಕಾರಣಕ್ಕಾಗಿ ಅವರು ತಮ್ಮ ಪ್ರಾಣವನ್ನು ತ್ಯಾಗ ಮಾಡಬೇಕಾಯಿತು.
ಅದೇ ರೀತಿಯಲ್ಲಿ ಸ್ವಾಮಿ ಅಸಿಮಾನಂದ್ ಜಿ ಅವರಿಗೂ ಮೋಸ ಮಾಡಲಾಯಿತು. ಗುಜರಾತ್ನ ಡಾಂಗ್ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದವರ ಸಾಮಾಜಿಕ ಮತ್ತು ಧಾರ್ಮಿಕ ಪ್ರಜ್ಞೆಯ ಜಾಗೃತಿಗಾಗಿ ಅವರು ಕೆಲಸ ಮಾಡುತ್ತಿದ್ದರು. ಅವರ ಕೆಲಸ ಮತ್ತು ವಿಚಾರಗಳಿಂದ ಪ್ರೇರಿತರಾದ ಅನೇಕ ಬುಡಕಟ್ಟು ಸಹೋದರರು ಹಿಂದೂ ಧರ್ಮಕ್ಕೆ ಮರಳಲು ಇಚ್ಚಿಸಿದರು. ಇದರ ಪರಿಣಾಮವಾಗಿ, ಅವರ ವಿರುದ್ಧ ಪಿತೂರಿ ನಡೆಸುವ ಮೂಲಕ ಅವನ ವಿರುದ್ಧ ಅನೇಕ ಆರೋಪಗಳನ್ನು ಮಾಡಲಾಯಿತು ಮತ್ತು ಅವರು ಅನೇಕ ಚಿತ್ರಹಿಂಸೆಗಳನ್ನು ಅನುಭವಿಸಬೇಕಾಯಿತು. ಅದೇ ರೀತಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಸನಾತನ ರಕ್ಷಾ ದಳದ ಸೂರ್ಯಚಾರ್ಯ ಕೃಷ್ಣದೇವನಂದ್ ಗಿರಿ ಮಹಾರಾಜ್ ಮೇಲೆ ಕೂಡ ಹಲ್ಲೆ ಮಾಡಲಾಗಿತ್ತು.
ಮಹಾರಾಷ್ಟ್ರದ ಪಾಲಘರ್ ಜಿಲ್ಲೆಯಲ್ಲಿ ಈ ಹಿಂದೆ ನಡೆದ ಕೆಲವು ಘಟನೆಗಳ ಸ್ವಲ್ಪ ಇತಿಹಾಸವನ್ನು ತದಕಿದ ನಂತರ, ಈ ಪಿತೂರಿ ಯಾವ ರೀತಿಯಲ್ಲಿ ಭಯಾನಕ ರೂಪವನ್ನು ಪಡೆಯುತ್ತಿದೆ ಎಂದು ತಿಳಿದುಬರುತ್ತದೆ. ಈ ಹಿಂದೆ ಈ ಪ್ರದೇಶದಲ್ಲಿ ನಡೆದ ಎರಡು ಘಟನೆಗಳ ಉಲ್ಲೇಖ ಮಾಡುವುದು ಅವಶ್ಯಕ. 1965 ರಲ್ಲಿ, ಪಾಲಘರ್ ಜಿಲ್ಲೆಯ ಥೆರೋಂಡಾ ಗ್ರಾಮದಲ್ಲಿ ಆರೆಸ್ಸೆಸ್ನ ಆ ವಿಭಾಗದ ವಿಭಾಗ ಪ್ರಚಾರಕರಾದ ದಿವಂಗತ ದಾಮು ಅಣ್ಣಾ ಟೋಕಕರ್ ಅವರ ಮುಂದಾಳತ್ವದಲ್ಲಿ ‘ಹಿಂದೂ ಸೇವಾ ಸಂಘ’ವನ್ನು ಸ್ಥಾಪಿಸಲಾಯಿತು. ಬುಡಕಟ್ಟು ಸಮಾಜದಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯನ್ನು ತೆಗೆದುಹಾಕುವ ಉದ್ದೇಶದಿಂದ ಈ ಸಂಸ್ಥೆಯ ಮೂಲಕ ಕೆಲಸ ಪ್ರಾರಂಭವಾಯಿತು. ದಾಮು ಅಣ್ಣಾ ಅವರ ಸಾಮಾಜಿಕ ಮತ್ತು ಸೂಕ್ಷ್ಮ ಸ್ವಭಾವದಿಂದಾಗಿ, ಬುಡಕಟ್ಟು ಸಮಾಜದ ಜನರು ಅವರೊಂದಿಗೆ ಜೋಡಿಸಿಕೊಳ್ಳಲು ಪ್ರಾರಂಭಿಸಿದರು. ತಮ್ಮ ಕೆಳಗಿನ ಭೂಮಿ ಕುಸಿಯುತ್ತಿರುವುದನ್ನು ಕಂಡ ಎಡಪಂಥೀಯರು ಮತ್ತು ಮಿಷನರಿ ಗೂಂಡಾಗಳು ದಾಮು ಅಣ್ಣಾ ಅವರ ಹತ್ಯೆ ಮಾಡಲು ಕೂಡ ಯೋಜನೆ ಮಾಡಿದರು. 1980 ರ ಒಂದು ರಾತ್ರಿ ಅವರ ಮೇಲೆ ಹಲ್ಲೆ ನಡೆಸಲು ಆಗಮಿಸಿದಾಗ ಅದೃಷ್ಟವಶಾತ್ ದಾಮು ಅಣ್ಣಾ ಬೇರೆಡೆ ಇದ್ದರು. ಆದರೆ ಸೇವಾ ಸಂಘದ ಕಾರ್ಯಕರ್ತರಾಗಿದ್ದ ವಾಮನರಾವ್ ಸಹಸ್ರಬುದ್ಧೆ ಹಾಗೂ ಅವರ ಪತ್ನಿಯ ಮೇಲೆ ಹಲ್ಲೆ ಮಾಡಿ ತೀವ್ರವಾಗಿ ಗಾಯಗೊಳಿಸಿದರು. ಈ ಎಡಪಂಥೀಯರು ಮತ್ತು ಕ್ರಿಶ್ಚಿಯನ್ ಮಿಷನರಿಗಳ ಹತಾಶೆಯ ಎರಡನೇ ಘಟನೆಯೆಂದರೆ, ಮಾಧವರಾವ್ ಕಾಣೆ ಅವರನ್ನು ಕೊಲ್ಲುವ ಉದ್ದೇಶದಿಂದ ತಲಾಸರಿಯಲ್ಲಿನ ‘ವಿಶ್ವ ಹಿಂದೂ ಪರಿಷತ್ ವನವಾಸಿ ಕಲ್ಯಾಣ್ ಕೇಂದ್ರ’ದ ಮೇಲೆ ದಾಳಿಯ ಘಟನೆ. 1967 ರಲ್ಲಿ ದಾಮು ಅಣ್ಣಾ ಅವರ ಆಜ್ಞೆಯ ಮೇರೆಗೆ, ಮಾಧವರಾವ್ ಕಾಣೆ ಅವರು ಅವರು ಮಹಾರಾಷ್ಟ್ರ ಮತ್ತು ಗುಜರಾತ್ನ ಗಡಿಯಲ್ಲಿರುವ ಪಾಲ್ಘರ್ ಜಿಲ್ಲೆಯ ತಲಸರಿ ತಾಲ್ಲೂಕಿನಲ್ಲಿ ಕೇಂದ್ರವೊಂದನ್ನು ಪ್ರಾರಂಭಿಸಿದರು. ಈ ಕೇಂದ್ರದ ಮೂಲಕ ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಪರಿಸರ ಸಂರಕ್ಷಣೆ, ಮರ ನೆಡುವಿಕೆ ಇತ್ಯಾದಿ ಸೇವಾ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ಆಗಸ್ಟ್ 14, 1991 ರ ಮಧ್ಯಾಹ್ನ, 700–800 ಗೂಂಡಾಗಳ ಸೈನ್ಯವು ಅವರನ್ನು ಕೊಲ್ಲುವ ಉದ್ದೇಶದಿಂದ ಕೇಂದ್ರದ ಮೇಲೆ ದಾಳಿ ಮಾಡಿತು. ಮಾಧವರಾವ್ ಕಾಣೆ ಕೆಲಸದ ನಿಮಿತ್ತವಾಗಿ ಕಲ್ಯಾಣದಲ್ಲಿದ್ದರು, ಆದ್ದರಿಂದ ಬದುಕುಳಿದರು. ಆದರೆ ದಾಳಿಯಲ್ಲಿ ಕೇಂದ್ರದಲ್ಲಿರುವ ಮಹಾದೇವ್ ಜೋಶಿ ಮತ್ತು ಅವರ ಪತ್ನಿ ವಾಸುದಾ ಜೋಶಿ ಗಂಭೀರವಾಗಿ ಗಾಯಗೊಂಡರು. ಡಿದ್ದಾರೆ. ಗಂಭೀರವಾದ ಗಾಯಗಳ ಮಧ್ಯೆ ಇಬ್ಬರೂ ದೈವಿ ಅನುಗ್ರಹದಿಂದ ಬದುಕುಳಿದರು.
16 ಏಪ್ರಿಲ್ 2020 ರಂದು ನಡೆಸ ಇಬ್ಬರು ಸಾಧುಗಳ ಹಾಗೂ ಅವರ ಚಾಲಕನ ಬರ್ಬರ ಹತ್ಯೆ ಇದೇ ವಿಕೃತ ಮನಸ್ಸಿನ ಪ್ರತಿಬಿಂಬವಾಗಿದೆ. ತಮ್ಮ ಗುರುಬಂಧುವಿನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕಲ್ಪವರಿಕ್ಷ ಗಿರಿ ಮಹಾರಾಜ್ ಮತ್ತು ಸುಶೀಲ್ ಗಿರಿ ಮಹಾರಾಜ್ ತಮ್ಮ ಚಾಲಕ ನಿಲೇಶ್ ತೆಲ್ಗಡೆ ಅವರೊಂದಿಗೆ ಗುಜರಾತ್ನ ಸಿಲ್ವಾಸಾಗೆ ಹೋಗುತ್ತಿದ್ದರು. ದಾರಿ ತಪ್ಪಿದ ಅವರು ಅಲೆದಾಡಿ ಕಾಸಾ ಪೊಲೀಸ್ ಚೌಕಿ ವ್ಯಾಪ್ತಿಯಲ್ಲಿ ಬರುವ ಗಡಚಿಂಚಲೆ ಗ್ರಾಮದ ರಸ್ತೆಯಲ್ಲಿ ಹೋಗಲು ಪ್ರಾರಂಭಿಸಿದರು. ದಾರಿಯಲ್ಲಿ ಗ್ರಾಮಸ್ಥರ ಹಿಂಸಾತ್ಮಕ ಜನಸಮೂಹ ಅವರನ್ನು ತಡೆದು ಹೊಡೆಯಲು ಪ್ರಾರಂಭಿಸಿತು. ಹತ್ತಿರದ ಫಾರೆಸ್ಟ್ ಪೋಸ್ಟ್ನಲ್ಲಿದ್ದ ಸಿಬ್ಬಂದಿ ಅವನ ಹೊರಠಾಣೆಯಲ್ಲಿ ಆಶ್ರಯ ನೀಡಿ ಪೊಲೀಸರಿಗೆ ಫೋನ್ ಮಾಡಿದರು. ಗಡಚಿಂಚಲೆ ಗ್ರಾಮದಿಂದ ಹತ್ತಿರದ ಕಾಸಾ ಪೊಲೀಸ್ ಚೌಕಿ 40 ಕಿ.ಮೀ. ದೂರದಲ್ಲಿದ್ದು ಪೊಲೀಸರು ಘಟನಾ ಸ್ಥಳಕ್ಕೆ ತಲುಪಲು ಕನಿಷ್ಠ ಅರ್ಥ ಗಂಟೆಯಾದರೂ ಬೇಕಾಗುತ್ತದೆ. ಅಲ್ಲಿಯವರೆಗೆ ಹಿಂಸಾತ್ಮಕ ಜನಸಮೂಹ ಅವರನ್ನು ಏಕೆ ಕೊಲ್ಲಲಿಲ್ಲ? ವೃದ್ಧ ಮಹಾತ್ಮ ಪೊಲೀಸರ ಕೈಹಿಡುಕೊಂಡು ಹೋಗುತ್ತಿರುವ ದೃಶ್ಯ ಹಾಗೂ ಪೊಲೀಸರು ಅವರನ್ನು ಉದ್ರೇಕಿತ ಗುಂಪಿಗೆ ಒಪ್ಪಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಇದು ಯೋಜಿತ ಪಿತೂರಿಯೇ? ಕೇಸರಿ ಬಟ್ಟೆಗಳಲ್ಲಿರುವ ಸಾಧುಗಳನ್ನು ಹತ್ಯೆ ಮಾಡಲು ಯಾರಾದರು ಪ್ರಚೋದಿಸಿದರೇ? ಈ ಅಮಾಯಕ ಸಾಧುಗಳನ್ನು ಉಳಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸುವುದಾಗಲಿ ಅಥವಾ ಕಾಲುಗಳಿಗೆ ಗುಂಡು ಹಾರಿಸುವ ಮೂಲಕ ಉದ್ರಿಕ್ತ ಜನಸಮೂಹವನ್ನು ತಡೆಯಲು ಏಕೆ ಪ್ರಯತ್ನಿಸಲಿಲ್ಲ? ಶವಪರೀಕ್ಷೆಗಾಗಿ ಸಾಗಿಸುವಾಗ ಸಾಧುಗಳ ಮೃತ ದೇಹಗಳನ್ನು ಏಕೆ ಅವಮಾನಿಸಲಾಯಿತು? ಆ ಹೃದಯ ವಿದ್ರಾವಕ ಘಟನೆಯನ್ನು ನೋಡಿದಾಗ ಇಂತಹ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ.
ಆದ್ದರಿಂದ, ಹಿಂದೂ ಸಮಾಜದ ಭಾವನೆಗಳು ಸ್ಫೋಟಗೊಳ್ಳುವ ಮೊದಲು ಈ ಘಟನೆಯ ಕುರಿತು ಉನ್ನತ ಮಟ್ಟದ ತನಿಖಾ ಸಮಿತಿಯಿಂದ ತನಿಖೆ ನಡೆಯಬೇಕು. ಈ ಘಟನೆಯಲ್ಲಿ ಭಾಗಿಯಾಗಿರುವ ನರ ರಕ್ಕಸರ ಮೇಲೆ ಶೀಘ್ರ ಕಠೋರ ಕ್ರಮ ಕೈಗೊಳ್ಳಬೇಕು.
ಮೂಲ : ವಿವೇಕಾನಂದ ನರತಾಮ್
ಲೇಖಕ ದೆಹಲಿ ವಿಶ್ವವಿದ್ಯಾಲಯದ ಶ್ಯಾಮ್ ಲಾಲ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು
ಕನ್ನಡಕ್ಕೆ : ಅಮೃತ್ ಜೋಶಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.