ಕಾಸರಗೋಡು : ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ರಕ್ಷಣೆಯನ್ನು ಪಡೆದುಕೊಳ್ಳಲು ಭಾರತೀಯ ಪಾರಂಪರಿಕ ವೈದ್ಯಕೀಯ ಪದ್ಧತಿಗಳ ಮೂಲಕವೂ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.
ಈ ಬಗ್ಗೆ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದು ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಭಾರತೀಯ ವಿಧಾನದ ಮೂಲಕ ಹೋರಾಡುವ ಬಗ್ಗೆ ಸಲಹೆ ನೀಡಿದ್ದಾರೆ.
“ಬಜೆ ಅಥವಾ ವಚ ಗಿಡದ (ವೈಜ್ಞಾನಿಕ ಹೆಸರು : Acorus calamus) ಗಡ್ಡೆಯನ್ನು (ಕಾಂಡ) ಗೋಮೂತ್ರದಲ್ಲಿ ಅದ್ದಿ ತೇಯಬೇಕು. ಅರ್ಧ ಚಮಚದಷ್ಟು ಇದರ ರಸವನ್ನು ಅರ್ಧ ಚಮಚ ಜೇನಿನೊಂದಿಗೆ ದಿನಕ್ಕೆ ಎರಡು ಬಾರಿ ಮೂರು ದಿನಗಳ ಕಾಲ ಸೇವಿಸಿದರೆ ಕೊರೋನಾ ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಕೊರೋನಾವೈರಸ್ ಬಾಧೆಯನ್ನು ಈ ಸರಳ ಪಾರಂಪರಿಕ ಔಷಧೀಯ ವಿಧಾನದಿಂದ ಎದುರಿಸಬಹುದು” ಎಂದು ಅವರು ಮೋದಿಗೆ ಪತ್ರ ಮುಖೇನ ಸಲಹೆ ನೀಡಿದ್ದಾರೆ.
ಇದುವರೆಗೂ ಜಗತ್ತಿನ ಯಾವುದೇ ವಿಜ್ಜಾನಿಗಳಿಗೂ ಕೊರೋನಾವೈರಸ್ ಸಾಂಕ್ರಾಮಿಕ ರೋಗಕ್ಕೆ ಸಮರ್ಪಕವಾದ ಔಷಧಿಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಭಾರತದಲ್ಲಿ ವೈದ್ಯರು ಈ ನಿಟ್ಟಿನಲ್ಲಿ ಪರಿಶ್ರಮವನ್ನು ಪಡುತ್ತಿದ್ದಾರೆ.
ಭಾರತದ ಆಯುರ್ವೇದ ವೈದ್ಯಕೀಯ ಪದ್ಧತಿಯ ಮೂಲಕ ಸಾಂಕ್ರಾಮಿಕ ರೋಗಕ್ಕೆ ಔಷಧಿಯನ್ನು ಕಂಡು ಹಿಡಿಯುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.