ನವದೆಹಲಿ: ಪಾಕಿಸ್ಥಾನ ಪದೇ ಪದೇ ನಡೆಸುತ್ತಿರುವ ಅಪ್ರಚೋದಿತ ದಾಳಿ, ಭಾರತ ದ್ರೋನ್ ಕ್ಯಾಮೆರಾ ಅಳವಡಿಸಿದೆ ಎಂಬ ಆ ದೇಶ ಆರೋಪ ಮುಂತಾದುವುಗಳ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಗೃಹಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಕೇಂದ್ರದ ಉನ್ನತ ಸಚಿವರುಗಳು ಗುರುವಾರ ಸಭೆ ಸೇರಿದ್ದಾರೆ.
ನಾರ್ತ್ ಬ್ಲಾಕ್ನಲ್ಲಿ ಸಭೆ ನಡೆಯುತ್ತಿದ್ದು, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೂ ಭಾಗವಹಿಸಿದ್ದಾರೆ.
ಪಾಕಿಸ್ಥಾನ ಕಳೆದ ಒಂದು ವಾರದಿಂದ ಗಡಿಪ್ರದೇಶದಲ್ಲಿ ಶೆಲ್, ಅಟೋಮ್ಯಾಟಿಕ್ ವೆಪನ್ಗಳ ಮೂಲಕ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸುತ್ತಿದೆ. ಇದಕ್ಕೆ ಬಿಎಸ್ಎಫ್ ಯೋಧ, ಮಹಿಳೆ ಬಲಿಯಾಗಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ.
ಈ ಬಗ್ಗೆ ತನ್ನ ಪ್ರತಿಭಟನೆಯನ್ನು ಭಾರತ ಪಾಕಿಸ್ಥಾನಕ್ಕೆ ಈಗಾಗಲೇ ವ್ಯಕ್ತಪಡಿಸಿದೆ, ಅಲ್ಲದೇ ದೆಹಲಿಯಲ್ಲಿನ ಪಾಕ್ ಹೈಕಮಿಷನರ್ಗೂ ತನ್ನ ಪ್ರತಿಭಟನೆಯನ್ನು ತಿಳಿಸಿದೆ.
ಇದೀಗ ಭಾರತ ಪಾಕ್ ಕುಚೋದ್ಯಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.