ದೇಶದ ಮುಂಚೂಣಿ ಪತ್ರಿಕೆಗಳು ಹಿಂದೂಫೋಬಿಯಾವನ್ನು ಹರಡುತ್ತಿವೆ. ಎಡ ಉದಾರವಾದಿ ಮಾಧ್ಯಮಗಳು ನಿಧಾನವಾಗಿ ಹಿಂದೂ ಧರ್ಮದ ಬಗ್ಗೆ, ಹಿಂದೂ ಧರ್ಮದ ಸಂಕೇತಗಳ ಬಗ್ಗೆ ಜನರಲ್ಲಿ ಅಸಹ್ಯ ಮೂಡಿಸುವಂತಹ ಪ್ರಯತ್ನಗಳನ್ನು ಮಾಡುತ್ತಿವೆ. ಎಷ್ಟರ ಮಟ್ಟಿಗೆ ಎಂದರೆ, ದೆಹಲಿಯ ಇಂದಿರಾ ಗಾಂಧಿ ಇಂಟರ್ನ್ಯಾಷನಲ್ ಏರ್ಪೋಟ್ ಟರ್ಮಿನಲ್ 3 ರಲ್ಲಿ ಸ್ಥಾಪಿಸಲಾದ ಶಂಖದ ಮಾದರಿಯನ್ನು ದೂಷಿಸುವಷ್ಟು.
ಎನ್ಡಿಟಿವಿಯ ಪತ್ರಕರ್ತೆ ಸುನೇತ್ರ ಚೌಧುರಿ ಅವರು, ವಿಮಾನನಿಲ್ದಾಣದಲ್ಲಿನ ಶಂಖದ ಬಗ್ಗೆ ಅವಹೇಳನಕಾರಿಯಾಗಿ ಟ್ವಿಟ್ ಮಾಡಿದ್ದಾರೆ. ‘ಶಂಖ ಕಾರ್ಪೆಟ್ಗಿಂತಲೂ ಕೆಟ್ಟದಾಗಿದೆ, ಅದನ್ನು ತೆಗೆದು ಹಾಕಿ’ ಎಂದಿದ್ದಾರೆ. ಹಿಂದೂಫೋಬಿಯಾ ಅವರನ್ನು ಎಡೆಬಿಡದೆ ಕಾಡುತ್ತಿದೆ ಎಂಬುದು ಇದರಿಂದ ತಿಳಿದು ಬರುತ್ತದೆ. ಮನಸ್ಥಿತಿ ಎಷ್ಟು ಕೆಟ್ಟು ಹೋಗಿದೆ ಎಂಬುದು ತಿಳಿಯುತ್ತದೆ.
Oh my dear lord @DelhiAirport , this is even uglier than the carpet. Please remove pic.twitter.com/JkMI2MzVdy
— sunetra choudhury (@sunetrac) January 12, 2020
ಸುನೇತ್ರಾ ಟ್ವಿಟ್ಗೆ ನೆಟ್ಟಿಗರಿಂದ ಭಾರೀ ವಿರೋಧಗಳು ವ್ಯಕ್ತವಾಗಿವೆ. ಅವರು ಹಿಂದೆ ಮಾಡಿರುವ ಮತ್ತು ಈಗ ಮಾಡಿರುವ ಟ್ವಿಟ್ಗಳನ್ನು ಹಿಡಿದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಹ್ಯುಮಾಯೂನ್ ಟೋಮ್ ಅನ್ನು ಶ್ಲಾಘಿಸಿದ್ದ ಅವರಿಗೆ ಶಂಖ ಕೆಟ್ಟದಾಗಿ ಕಂಡಿತೆ ಎಂದು ಪ್ರಶ್ನಿಸಿದ್ದಾರೆ.
ವಿಮಾನನಿಲ್ದಾಣವನ್ನು ನಿಮ್ಮ ಹಣ ಬಳಸಿ ಅಲಂಕರಿಸಲಾಗಿದೆಯೇ ಎಂದು ಕೆಲವರು ಪ್ರಶ್ನಿಸಿದರೆ, ಕೆಲವರು ಅವರ ಮನಸ್ಥಿತಿಯ ಬಗ್ಗೆ ಪ್ರಶ್ನೆಯನ್ನು ಮಾಡಿದ್ದಾರೆ.
ಒಂದು ಧರ್ಮವನ್ನು ಅವಹೇಳನ ಮಾಡಿ, ಇನ್ನೊಂದು ಧರ್ಮವನ್ನು ಸುಂದರವಾಗಿ ಬಿಂಬಿಸುವ ನಿಮ್ಮಂತವರಿಂದಲೇ ದೇಶ ವಿಭಜನೆಯಾಗುತ್ತಿದೆ ಎಂದಿದ್ದಾರೆ.
ಸುನೇತ್ರಾ ರಾಷ್ಟ್ರ ನಾಯಕಿಯೇನೂ ಅಲ್ಲ, ಆಕೆ ಮಾಡಿರುವ ಟ್ವಿಟ್ಗೆ ಯಾವ ಬೆಲೆಯೂ ಇಲ್ಲ ಅಥವಾ ಅದರಿಂದ ಸಮಾಜದಲ್ಲಿ ಯಾವ ಬದಲಾವಣೆಗಳೂ ಆಗುವುದಿಲ್ಲ. ಆದರೆ ಪ್ರಶ್ನೆ ಮೂಡಿರುವುದು ಆಕೆಯ ಮನಸ್ಥಿತಿಯ ಬಗ್ಗೆ. ಹಿಂದೂಫೋಬಿಯಾವನ್ನು ಹರಿಬಿಡುವುದರ ಹಿಂದಿನ ಆಕೆಯ ಉದ್ದೇಶದ ಬಗ್ಗೆ. ಹಿಂದೂ ಸಂಕೇತಗಳನ್ನು ದ್ವೇಷಿಸಲು ಆಕೆಗೆ ಇರುವ ಕಾರಣಗಳ ಬಗ್ಗೆ.
ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳಿಗೆ ವಿದೇಶಗಳಿಂದ ಪ್ರವಾಸಿಗರು, ಅತಿಥಿಗಳು ಭಾರತಕ್ಕೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಭಾರತೀಯತೆಯನ್ನು ತೋರಿಸುವ ಸಂಕೇತಗಳು ಅಲ್ಲಿದ್ದರೆ ಅದಕ್ಕೊಂದು ಹೆಮ್ಮೆ ಇರುತ್ತದೆ. ಗೌರವವಿರುತ್ತದೆ. ಸಂಸ್ಕೃತಿಯನ್ನು ವಿದೇಶಿಗರಿಗೆ ಪರಿಚಯಿಸಿದಂತೆಯೂ ಆಗುತ್ತದೆ. ಆದರೆ ಲುಟಿಯಾನ್ ಪತ್ರಕರ್ತರಿಗೆ ಇದನ್ನು ಕಂಡ ತಕ್ಷಣ ಮೆಣಸಿನ ಕಾಯಿ ಅರೆದಂತೆ ಆಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಷ ಕಕ್ಕಲು ಅವರು ಶುರು ಮಾಡುತ್ತಾರೆ.
ಶಂಖ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಭಾಗ. ಶಂಖವನ್ನು ಊದುವುದು ಕೂಡ ಒಂದು ಕಲೆ. ಅತಿಥಿಗಳನ್ನು ಸ್ವಾಗತಿಸಲು ಕೂಡ ಶಂಖವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಂಖದ ದೊಡ್ಡ ಮಾದರಿಯನ್ನು ಸ್ಥಾಪನೆ ಮಾಡಲಾಗಿದೆ. ನೋಡಲು ಇದು ಅತೀ ಸುಂದರವಾಗಿದೆ ಮತ್ತು ಮನಮೋಹಕವಾಗಿದೆ.
What will likes of @sunetrac say when they behold giant sculpture of Samudra Manthan (described in Bhagavata Purana, Mahabharata, Vishnu Purana) at Suvarnabhumi Airport Thailand? Conch displayed too! But dare any Thailand national speak against it. It can happen only in India! pic.twitter.com/P8Skg19Gmc
— Author Manoshi Sinha (@authormanoshi) January 13, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.