ನವದೆಹಲಿ: ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗೆಗಿನ ಕಿಚ್ಚು ಇನ್ನೂ ಇರುವಾಗಲೇ ಅಮೆರಿಕಾ ಬಿಡುಗಡೆ ಮಾಡಿದ ವರದಿ ಕಣ್ತೆರೆಸುವಂತಿದೆ. ಚೀನಾ ಮತ್ತು ಪಾಕಿಸ್ಥಾನ ಅಲ್ಪಸಂಖ್ಯಾತರಿಗೆ ಅತೀ ಕೆಟ್ಟ ದೇಶಗಳು ಎಂಬ ವರದಿಯನ್ನು ನೀಡಿದೆ. ಧಾರ್ಮಿಕ ಕಿರುಕುಳದ ಕುರಿತ 2019ರ ವಾರ್ಷಿಕ ವರದಿಯಲ್ಲಿ ಯುಎಸ್ ಕಪ್ಪುಪಟ್ಟಿಯಲ್ಲಿ ಈ ಎರಡು ರಾಷ್ಟ್ರಗಳು ಮುಂದುವರೆದಿದೆ.
ಸಂಸತ್ತು ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕರಿಸಿದ ನಂತರ ಭಾರತದಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿದ್ದರೂ, ವರದಿಯ ಪ್ರಕಾರ ಭಾರತ ತನ್ನ ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವದ ಮೌಲ್ಯವನ್ನು ಹೆಚ್ಚಿನ ಮಟ್ಟದಲ್ಲಿ ಉಳಿಸಿಕೊಂಡಿದೆ.
ಚೀನಾ ತಾನು ಮರು-ಶಿಕ್ಷಣ ಶಿಬಿರ ಎಂದು ಕರೆಯುವ ಕಾನ್ಸಂಟ್ರೇಶನ್ ಕ್ಯಾಂಪ್ಗಳಲ್ಲಿ ಸುಮಾರು ಒಂದು ಮಿಲಿಯನ್ ಉಯಿಘರ್ ಮುಸ್ಲಿಮರನ್ನು ಕಾನೂನುಬಾಹಿರವಾಗಿ ಜೈಲಿನಲ್ಲಿರಿಸಿದೆ ಎಂದು ಮಾನವ ಹಕ್ಕುಗಳ ಗುಂಪುಗಳು ಮತ್ತು ಯುಎಸ್ ಅಧಿಕಾರಿಗಳು ಬಹಿರಂಗವಾಗಿ ಆರೋಪಿಸಿದ್ದಾರೆ.
ಸ್ಟೇಟ್ ಡಿಪಾರ್ಟ್ಮೆಂಟಿನ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಗಳ ಕುರಿತಾದ ವಾರ್ಷಿಕ ಕಪ್ಪುಪಟ್ಟಿ ವರದಿಯು ಧಾರ್ಮಿಕ ಸ್ವಾತಂತ್ರ್ಯದ ವ್ಯವಸ್ಥಿತ ಮತ್ತು ಅತಿಯಾದ ಉಲ್ಲಂಘನೆಗಳಲ್ಲಿ ತೊಡಗಿಸಿಕೊಂಡ ದೇಶಗಳ ಮೇಲೆ ಕೇಂದ್ರೀಕರಿಸುತ್ತದೆ.
ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರು, “2019 ರ ಡಿಸೆಂಬರ್ 18 ರಂದು ಸ್ಟೇಟ್ ಡಿಪಾರ್ಟ್ಮೆಂಟ್ ಮ್ಯಾನ್ಮಾರ್, ಚೀನಾ, ಎರಿಟ್ರಿಯಾ, ಇರಾನ್, ಉತ್ತರ ಕೊರಿಯಾ, ಪಾಕಿಸ್ಥಾನ, ಸೌದಿ ಅರೇಬಿಯಾ, ತಜಿಕಿಸ್ಥಾನ್ ಮತ್ತು ತುರ್ಕಮೆನಿಸ್ಥಾನ್ ಅನ್ನು ನಿರ್ದಿಷ್ಟ ಕಾಳಜಿಯ ದೇಶಗಳಾಗಿ ಮರುನಾಮಕರಣ ಮಾಡಿದೆ” ಎಂದಿದ್ದಾರೆ.
ವರದಿಯು ಅಲ್-ನುಸ್ರಾ ಫ್ರಂಟ್, ಅರೇಬಿಯನ್ ಪೆನಿನ್ಸುಲಾದ ಅಲ್-ಖೈದಾ, ಅಲ್-ಖೈದಾ, ಅಲ್-ಶಬಾಬ್, ಬೊಕೊ ಹರಮ್, ಹೌತಿಸ್, ಐಸಿಸ್, ಐಸಿಸ್-ಖೋರಾಸನ್ ಮತ್ತು ತಾಲಿಬಾನ್ಗಳನ್ನು ಧಾರ್ಮಿಕ ದೌರ್ಜನ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಗುಂಪುಗಳಾಗಿ ನೇಮಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.