ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬುಧವಾರ ತಮ್ಮ ಜಾಮಿಯಾ, ಎಎಂಯು ಮತ್ತು ಜೆಎನ್ಯು ಸಹವರ್ತಿಗಳಿಗೆ ತಿರುಗೇಟು ನೀಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ದೆಹಲಿ ಪೊಲೀಸರನ್ನು ಬೆಂಬಲಿಸಿ ಸಮಾವೇಶವನ್ನು ನಡೆಸಿದ್ದಾರೆ. ‘ದೆಹಲಿ ಪೊಲೀಸ್ ಜಿಂದಾಬಾದ್’ ಎಂಬ ಉದ್ಘೋಷಗಳನ್ನು ಕೂಗಿದ್ದಾರೆ.
ವಿದ್ಯಾರ್ಥಿಗಳ ಗುಂಪು ದೆಹಲಿ ಪೊಲೀಸ್ ಜಿಂದಾಬಾದ್ ಮತ್ತು ಭಾರತ್ ಮಾತಾ ಕಿ ಜೈ ಮುಂತಾದ ಘೋಷಣೆಗಳನ್ನು ಹಾಕುತ್ತಿರುವ ವೀಡಿಯೋ ಎಲ್ಲೆಡೆ ಹರಿದಾಡಿದೆ. ಎಬಿವಿಪಿ ನೇತೃತ್ವದ ಡಿಯುಎಸ್ಯು ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ಸಮಾವೇಶ ನಡೆಸಿದೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್ಯು) ವಿದ್ಯಾರ್ಥಿಗಳು ಸಿಎಎ ಪರವಾಗಿ ಒಗ್ಗಟ್ಟಿನ ಮೆರವಣಿಗೆಯನ್ನು ಕೈಗೊಂಡ ನಂತರ, ಸಿಎಎ ಪರವಾಗಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಒಗ್ಗಟ್ಟಿನ ಪ್ರದರ್ಶನವನ್ನು ಮಾಡಿದ್ದಾರೆ. ಈ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪರ ನಿಂತಿದ್ದಾರೆ.
ಐಐಟಿ ರೂರ್ಕಿ ಮತ್ತು ಐಐಟಿ ದೆಹಲಿ ಸೇರಿದಂತೆ ಹಲವಾರು ಇತರ ಕಾಲೇಜುಗಳು ಈ ಕಾಯ್ದೆಯ ಪರವಾಗಿ ಒಗ್ಗಟ್ಟಿನ ಮೆರವಣಿಗೆಗಳನ್ನು ಕೈಗೊಂಡಿವೆ. ಸಿಎಎನ್ಎ ಪರವಾದ ಮೆರವಣಿಗೆಯನ್ನು ವಿದ್ಯಾರ್ಥಿಗಳು, ಬೋಧಕರು ಮತ್ತು ಜೆಎನ್ಯು ಸಿಬ್ಬಂದಿ ವರ್ಗದವರು ಕೈಗೊಂಡಿದ್ದಾರೆ.
#WATCH Counter protest by some Delhi University students against #CitizenshipAmendmentAct protesters, today. Chants of ‘Delhi Police Zindabad’ raised. #Delhi pic.twitter.com/LPGanrEXPC
— ANI (@ANI) December 18, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.