ಮಂಗಳೂರು : ‘ಜಾಗ್ರತಿ’ ಮಕ್ಕಳ ಸುರಕ್ಷತೆ ಮತ್ತು ಮಕ್ಕಳ ಆತ್ಮರಕ್ಷಣೆಯ ತಂತ್ರಗಳ ಕಾರ್ಯಾಗಾರವು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕೊಡಿಕಲ್ ನಲ್ಲಿ 1 ಏಪ್ರಿಲ್ 2015 ರಂದು ಸ೦ತ ಅಲೋಶಿಯಸ್ ಕಾಲೇಜಿನ ಮಾಧ್ಯಮ ವಿಭಾಗದ (ಎಂ.ಸಿ.ಎಂ.ಎಸ್) ವಿದ್ಯಾರ್ಥಿಗಳು ಇವರು ಮಂಗಳೂರು ಮೂಲದ ಎನ್.ಜಿ.ಓ., ಇಂಚರ ಫೌಂಡೇಶನ್ (ರಿ) ಮತ್ತು ಅಲೋಶಿಯಸ್ ಕಾಲೇಜಿನ ಸಮಾಜ ಇಲಾಖೆ ಸಹಯೋಗದೊಂದಿಗೆ ನಡೆಸಲಾಯಿತು.
ಇಂಚರ ಪ್ರತಿಷ್ಠಾನದ ಶ್ರೀ ಪ್ರೀತಮ್ ರೊಡ್ರಿಗಸ್ ತಮ್ಮ ತಂಡದ ಸದಸ್ಯರು ಜೊತೆಗೆ ಮಕ್ಕಳ ಸುರಕ್ಷತೆಯ ಬಗ್ಗೆ ಒಳನೋಟಗಳನ್ನು ನೀಡಿದರು. ಯಶಸ್ವಿಯಾಗಿ ‘ಪ್ರಾಜೆಕ್ಟ್ ಏಂಜೆಲ್’ ಎನ್ನುವ ಮಕ್ಕಳ ಸುರಕ್ಷತೆ ಜಾಗೃತಿ ಕಾರ್ಯಕ್ರಮವು 2500 ಮಕ್ಕಳಿಗೆ ನಡೆಸಿರುವ ಅನುಭವವಿದೆ. ಯಾವುದೇ ಸಮಸ್ಯೆಯನ್ನು ನಿಭಾಯಿಸುವುದು ಬಹಳ ಮುಖ್ಯ ಮತ್ತು ಪ್ರತಿ ಸನ್ನಿವೇಶದಲ್ಲಿ ಎಚ್ಚರವಾಗಿರಲು ಮಕ್ಕಳಿಗೆ ಹೇಳಿದರು. ನಂತರ ‘ ಸ್ಟಂಟ್ ಏಕಲವ್ಯ ‘, ‘ಮಂಗಳೂರು ಏಕಲವ್ಯ ‘ ಎಂದು ಕರೆಯಲ್ಪಡುವ ಕಾರ್ತಿಕ್ ಕಟೀಲು ಮಕ್ಕಳಿಗೆ ಆತ್ಮರಕ್ಷಣೆಯ ಪ್ರದರ್ಶನ ನೆರವೇರಿಸಿದರು. ತಮ್ಮ 123 ನೇ ಸ್ವರಕ್ಷ- ಸ್ವಯಂ ರಕ್ಷಣಾ ಟೆಕ್ನಿಕ್ ನಡೆಸಿ ಮತ್ತು ಅವುಗಳನ್ನು ಹೇಗೆ ಮಾಡಬಹುದೆಂದು ಹೇಳಿಕೊಟ್ಟರು. ಕಾರ್ತಿಕ್ ಕಟೀಲುರವರು ರಾಜ್ಯಾದ್ಯಂತ ಸುಮಾರು 30,000 ಹುಡುಗಿಯರು ಮತ್ತು ಮಹಿಳೆಯರಿಗೆ ಆತ್ಮರಕ್ಷಣೆಯ ಕಾರ್ಯಕ್ರಮ ಆಯೋಜಿಸಿದ್ದಾರೆ.
ಅಲೋಶಿಯಸ್ ಕಾಲೇಜಿನ ಮಾಧ್ಯಮ ವಿಭಾಗದ (ಎಂ.ಸಿ.ಎಂ.ಎಸ್) ವಿದ್ಯಾರ್ಥಿಗಳು ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತಿದ್ದು, ಮಂಗಳೂರಿನಲ್ಲಿ ಮಕ್ಕಳ ಮೇಲೆ ಆದ ಅನೇಕ ಘಟನೆಗಳು, ಅದನ್ನು ತಡೆಗಟ್ಟುವ ಸಲುವಾಗಿ ’ಜಾಗ್ರತಿ’ ಎಂಬ ಮಕ್ಕಳ ಸುರಕ್ಷತೆ ಮತ್ತು ಮಕ್ಕಳ ಆತ್ಮರಕ್ಷಣೆಯ ಕಾರ್ಯಾಗಾರ ಆಯೋಜಿಸಲಾಯಿತು. ಹೆಚ್ಚಿನ ಮಾಹಿತಿಗಾಗಿ ವಿಲ್ಸನ್ ಪೆರೇರಾ, ಈವೆಂಟ್ ಸಂಯೋಜಕರು, Jagriti, + 91-9481378650 wilson.pereira8@gmail.com ಸಂಪರ್ಕಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.