ನವದೆಹಲಿ: ಡಿಜಿಟಲ್ ಪಾವತಿಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಮತ್ತು ಹೆಚ್ಚಿನ ಪಾರದರ್ಶಕತೆಯನ್ನು ತರುವ ಉದ್ದೇಶದಿಂದ ಕೇಂದ್ರ ಸರ್ಕಾರವು ನ್ಯಾಷನಲ್ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಫಾಸ್ಟ್ಯಾಗ್) ಅನ್ನು ಭಾರತದಾದ್ಯಂತ ಅನುಷ್ಠಾನಕ್ಕೆ ತರಲು ಯೋಜಿಸಿದೆ. ಇದರಿಂದ ಟೋಲ್ ಪ್ಲಾಝಾಗಳಲ್ಲಿನ ಸಮಸ್ಯೆಗಳನ್ನು ನಿವಾರಿಸಲು, ತಡೆರಹಿತ ಸಂಚಾರ ಮತ್ತು ಹಣ ಸಂಗ್ರಹವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿದೆ. ಅಧಿಕೃತ ಹೇಳಿಕೆಯ ಪ್ರಕಾರ, ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್ (ಆರ್ಎಫ್ಐಡಿ) ಟೆಕ್ನಾಲಜಿ ಬಳಸಿಕೊಂಡು ನಿಗದಿತ ದರಗಳನ್ನು ಬಳಕೆದಾರರಿಂದ ಪಡೆಯಲು ನಿರ್ಧರಿಸಲಾಗಿದೆ.
ಹೇಳಿಕೆಯ ಪ್ರಕಾರ, ನ್ಯಾಷನಲ್ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಫಾಸ್ಟ್ಯಾಗ್) ಕಾರ್ಯಕ್ರಮವು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಮತ್ತು ಎನ್ಎಚ್ಎಐ ಪ್ಯಾನ್ ಇಂಡಿಯಾ ಆಧಾರದ ಮೇಲೆ ಟೋಲ್ ಪ್ಲಾಜಾಗಳಲ್ಲಿನ ತೊಂದರೆಗಳನ್ನು ತೆಗೆದುಹಾಕಲು ಮತ್ತು ಅಧಿಸೂಚನೆಯ ಪ್ರಕಾರ ಸಾರಿಗೆಯ ತಡೆರಹಿತ ಚಲನೆ ಮತ್ತು ಬಳಕೆದಾರರ ಶುಲ್ಕವನ್ನು ಸಂಗ್ರಹಿಸುವುದನ್ನು ಖಚಿತಪಡಿಸುತ್ತದೆ. ಈ ಕಾರ್ಯಕ್ರಮದ ಅಡಿಯಲ್ಲಿ, ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್ (ಆರ್ಎಫ್ಐಡಿ) ಟೆಕ್ನಾಲಜಿಯನ್ನು ಬಳಸಲಾಗುತ್ತದೆ.
2019ರ ಡಿಸೆಂಬರ್ 1 ರೊಳಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಎಲ್ಲಾ ಟೋಲ್ ಪ್ಲಾಜಾಗಳನ್ನು “ಫಾಸ್ಟ್ಯಾಗ್ ಲೇನ್ಗಳು” ಎಂದು ಘೋಷಿಸಲು ಸಚಿವಾಲಯವು ಆದೇಶಿಸಿತ್ತು, ಆದರೆ ಒಂದು ಪಥವನ್ನು (ಪ್ರತಿ ದಿಕ್ಕಿನಲ್ಲಿಯೂ) ಫಾಸ್ಟ್ಯಾಗ್ ಮತ್ತು ಇತರ ಪಾವತಿ ವಿಧಾನಗಳನ್ನು ಸ್ವೀಕರಿಸಲು ಹೈಬ್ರಿಡ್ ಲೇನ್ಗಳಾಗಿ ಇಡಲಾಗುತ್ತದೆ.
ಡಿಸೆಂಬರ್ ಗಡುವು ಸಮೀಪಿಸುತ್ತಿದ್ದಂತೆ, 2019 ರ ನವೆಂಬರ್ನಿಂದ ಗುರುತಿಸಲ್ಪಟ್ಟ ಎನ್ಎಚ್ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ಪ್ರಯೋಗವನ್ನು ಪ್ರಾರಂಭಿಸಲು ಮತ್ತು ಎಲ್ಲಾ ಟೋಲ್ ಪ್ಲಾಜಾಗಳಿಗೆ ಹಂತಹಂತವಾಗಿ ವಿಸ್ತರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.