ನವದೆಹಲಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ(ನಗರ)ದಡಿಯಲ್ಲಿ ಮಂಜೂರಾದ ಮನೆಗಳ ಸಂಖ್ಯೆ 93 ಲಕ್ಷಕ್ಕೆ ಏರಿಕೆಯಾಗಿದೆ.
ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ನಗರ) ನೇತೃತ್ವದ ಕೇಂದ್ರ ಮಂಜೂರಾತಿ ಮತ್ತು ಮಾನಿಟರಿಂಗ್ ಸಮಿತಿಯ (ಸಿಎಸ್ಎಂಸಿ) 48 ನೇ ಸಭೆಯಲ್ಲಿ 2,31,532 ಮನೆಗಳ ನಿರ್ಮಾಣಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 371 ಪ್ರಸ್ತಾಪಗಳನ್ನು ಅನುಮೋದಿಸಿದೆ. ಈ ಮನೆಗಳ ನಿರ್ಮಾಣಕ್ಕೆ ರೂ.7,322 ಕೋಟಿ ವ್ಯಯವಾಗಲಿದೆ. ಕೇಂದ್ರವು ರೂ.3,473 ಕೋಟಿಗಳನ್ನು ಒದಗಿಸಲಿದೆ.
ಈ ಮೂಲಕ ಪ್ರಧಾನ ಮಂತ್ರಿ ಆವಾಸ್ ಯೋಜನೆ(ನಗರ)ದಡಿಯಲ್ಲಿ ಮಂಜೂರಾದ ಮನೆಗಳ ಸಂಖ್ಯೆ 93 ಲಕ್ಷಕ್ಕೆ ಏರಿಕೆಯಾಗಿದೆ.
ಸಿಎಸ್ಎಂಸಿಯಲ್ಲಿ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಮಧ್ಯಪ್ರದೇಶ, ನಾಗಾಲ್ಯಾಂಡ್, ಪುದುಚೇರಿ ಮತ್ತು ಉತ್ತರ ಪ್ರದೇಶಗಳು ಸೇರಿದಂತೆ ಒಟ್ಟು ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾಗವಹಿಸಲಿವೆ. ಆಂಧ್ರಪ್ರದೇಶಕ್ಕೆ 1,24,624 ಮನೆಗಳು, ಅಸ್ಸಾಂಗೆ 16,002 ಮನೆಗಳು, ಬಿಹಾರಗೆ 15,049 ಮನೆಗಳು, ಮಧ್ಯಪ್ರದೇಶಕ್ಕೆ 18,362 ಮನೆಗಳು, ನಾಗಾಲ್ಯಾಂಡ್ಗೆ 3,238 ಮನೆಗಳು, ಪುದುಚೇರಿಗೆ 1,811 ಮನೆಗಳು ಮತ್ತು ಉತ್ತರ ಪ್ರದೇಶಕ್ಕೆ 52,446 ಮನೆಗಳು ಅನುಮೋದನೆಗೊಂಡಿದೆ.
ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳು ತಮ್ಮ ಶೇ.100ರಷ್ಟು ವಸತಿಯ ಬೇಡಿಕೆಯನ್ನು ಪಡೆದುಕೊಂಡಿವೆ. ಕ್ರಮವಾಗಿ ಇದುವರೆಗೆ 13.78 ಲಕ್ಷ ಮತ್ತು 15 ಲಕ್ಷ ಮನೆಗಳನ್ನು ಪಡೆದುಕೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.