ಮಾಮಲ್ಲಪುರಂ : ಮುಂದಿನ ವರ್ಷ ಭಾರತ ಮತ್ತು ಚೀನಾ ನಡುವಿನ ಮೂರನೇ ಅನೌಪಚಾರಿಕ ಶೃಂಗಸಭೆಯು ಚೀನಾದಲ್ಲಿ ಜರುಗಲಿದೆ. ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನವನ್ನು ನೀಡಿದ್ದಾರೆ. ಆಹ್ವಾನನವನ್ನು ಮೋದಿ ಸ್ವೀಕಾರ ಮಾಡಿದ್ದಾರೆ.
ತಮಿಳುನಾಡಿನ ಮಹಾಬಲಿಪುರಂನಲ್ಲಿ ಶುಕ್ರವಾರ ಮತ್ತು ಶನಿವಾರ ಜರುಗಿದ 2 ದಿನಗಳ ಚೀನಾ ಮತ್ತು ಭಾರತ ಅನೌಪಚಾರಿಕ ಶೃಂಗಸಭೆಯ ಸಂದರ್ಭದಲ್ಲಿ ಕ್ಸಿ ಜಿನ್ಪಿಂಗ್ ಅವರು ಮೋದಿಗೆ ಆಹ್ವಾನವನ್ನು ನೀಡಿದ್ದಾರೆ.
ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದ್ದು, “ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷರು ಉಭಯ ದೇಶಗಳ ನಡುವಣ ಅನೌಪಚಾರಿಕ ಶೃಂಗಸಭೆಯನ್ನು ಬಾಂಧವ್ಯ ವೃದ್ಧಿಯ ಮತ್ತು ಪರಸ್ಪರ ನಾಯಕತ್ವದಲ್ಲಿ ನಂಬಿಕೆಯನ್ನು ಉತ್ತೇಜಿಸುವ ಸಕಾರಾತ್ಮಕ ಅವಕಾಶವಾಗಿ ನೋಡಿದ್ದಾರೆ” ಎಂದಿದ್ದಾರೆ.
ಅನೌಪಚಾರಿಕ ಶೃಂಗಸಭೆಯ ಪದ್ಧತಿಯನ್ನು ಭವಿಷ್ಯದಲ್ಲೂ ಮುಂದುವರಿಸಲು ಉಭಯ ನಾಯಕರುಗಳು ಉತ್ಸಾಹವನ್ನು ತೋರಿಸಿದ್ದಾರೆ. ಮೂರನೇ ಅನೌಪಚಾರಿಕ ಶೃಂಗಸಭೆಗೆ ಚೀನಾ ಅಧ್ಯಕ್ಷರು ಪ್ರಧಾನಿಯನ್ನು ಆಹ್ವಾನಿಸಿದ್ದಾರೆ. ಪ್ರಧಾನಿ ಈ ಆಹ್ವಾನವನ್ನು ಸ್ವೀಕರಿಸಿದ್ದಾರೆ ಎಂದು ಗೋಖಲೆ ಹೇಳಿದ್ದಾರೆ.
ಚೀನಾದ ಯಾವ ಭಾಗದಲ್ಲಿ ಮತ್ತು ಯಾವ ದಿನಾಂಕದಂದು ಮುಂದಿನ ವರ್ಷ ಅನೌಪಚಾರಿಕ ಶೃಂಗಸಭೆ ನಡೆಯಲಿದೆ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.