ಬೋರ್ಡೆಕ್ಸ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಸಂಜೆ ಭಾರತದ ಮೊದಲ ರಫೆಲ್ ಫೈಟರ್ ಜೆಟ್ನಲ್ಲಿ ಫ್ರಾನ್ಸ್ನ ಬೋರ್ಡೆಕ್ಸ್ ಬಳಿಯ ಡಸಾಲ್ಟ್ ಸೌಲಭ್ಯದಲ್ಲಿ ಹಾರಾಟ ನಡೆಸಿದರು. ವಾಯುಪಡೆಯ 87 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ರಫೆಲ್ ಅನ್ನು ಭಾರತಕ್ಕೆ ಫ್ರಾನ್ಸ್ ಅಧಿಕೃತವಾಗಿ ಹಸ್ತಾಂತರ ಮಾಡಿದೆ.
“ಇದು ತುಂಬಾ ಆರಾಮದಾಯಕ ಮತ್ತು ಸುಗಮ ಹಾರಾಟವಾಗಿತ್ತು. ಇದು ಅಭೂತಪೂರ್ವ ಕ್ಷಣವಾಗಿದೆ, ಒಂದು ದಿನ ನಾನು ವಿಮಾನದಲ್ಲಿ ಸೂಪರ್ ಸೋನಿಕ್ ವೇಗದಲ್ಲಿ ಹಾರಾಟ ನಡೆಸುತ್ತೇನೆ ಎಂದು ನಾನು ಎಂದೂ ಭಾವಿಸಿರಲಿಲ್ಲ” ಎಂದು ರಫೆಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಬಳಿಕ ರಾಜನಾಥ್ ಸಿಂಗ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
“ಈ ಯುದ್ಧ ವಿಮಾನವು ಭಾರತೀಯ ವಾಯುಪಡೆಯ ಯುದ್ಧ ಸಾಮರ್ಥ್ಯದಲ್ಲಿ ಭಾರಿ ಬಲವರ್ಧನೆಯನ್ನು ತರಲಿದೆ. ಬಲವರ್ಧನೆಯು ದಾಳಿಯ ಉದ್ದೇಶಗಳಿಗಾಗಿ ಅಲ್ಲ, ಆತ್ಮರಕ್ಷಣೆಗಾಗಿ. ಈ ಮೈಲಿಗಲ್ಲಿನ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಗೆ ಸಲ್ಲುತ್ತದೆ, ಅವರ ನಿರ್ಣಾಯ ನಾಯಕತ್ವದಿಂದಾಗಿ ವಾಯು ಸಾಮರ್ಥ್ಯದ ವೃದ್ಧಿಯು ಸಾಧ್ಯವಾಯಿತು” ಎಂದಿದ್ದಾರೆ.
ರಕ್ಷಣಾ ಸಚಿವರು ಕಸ್ಟಮೈಸ್ ಮಾಡಿದ ರಫೆಲ್ ಫೈಟರ್ ಜೆಟ್ನ ಹಿಂಭಾಗದ ಕಾಕ್ಪಿಟ್ನಲ್ಲಿ ಟೈಲ್ ಸಂಖ್ಯೆ ಆರ್ಬಿ -001ನಲ್ಲಿ ಕುಳಿತು ಹಾರಾಟ ನಡೆಸಿದರು. ಡಸಾಲ್ಟ್ ಏವಿಯೇಷನ್ನ ಮುಖ್ಯ ಟೆಸ್ಟ್ ಪೈಲಟ್ ಫಿಲಿಪ್ ಡುಚಾಟೊ ಅವರು ವಿಮಾನವನ್ನು ಹಾರಿಸಿದರು
ಫೈಟರ್ ಪೈಲಟ್ ಹೆಲ್ಮೆಟ್ ಮತ್ತು ಏವಿಯೇಟರ್ ಸನ್ಗ್ಲಾಸ್ಗಳನ್ನು ಧರಿಸಿದ ರಕ್ಷಣಾ ಸಚಿವರು, ಕಾಕ್ಪಿಟ್ನಲ್ಲಿ ಕುಳಿತು ಜನರತ್ತ ಕೈಬೀಸುತ್ತಾ ಹಾರಾಟ ನಡೆಸಿದರು.
ರಫೆಲ್ ಯುದ್ಧ ವಿಮಾನ ಹಸ್ತಾಂತರ ಮಾಡಿದ ಬಳಿಕ ಅದಕ್ಕೆ ರಾಜನಾಥ್ ಸಿಂಗ್ ಅವರು ಶಸ್ತ್ರ ಪೂಜೆಯನ್ನು ನೆರವೇರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.