ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸಲು ಮೋದಿ ಸರ್ಕಾರ ನಿರಂತರವಾಗಿ ನಡೆಸುತ್ತಿರುವ ಪ್ರಯತ್ನಗಳು ಅಂತಿಮವಾಗಿ ಫಲಿತಾಂಶಗಳನ್ನು ನೀಡಲಾರಂಭಿಸಿವೆ. ದೇಶದ ಅತ್ಯಂತ ಕ್ರೂರ ಭಯೋತ್ಪಾದಕರು ತಮ್ಮ ಉಳಿದ ಜೀವನವನ್ನು ಜೈಲಿನಲ್ಲಿ ಕಳೆಯುವ ಭಯವನ್ನು ಎದುರಿಸುತ್ತಿರುವುದೇ ಇದಕ್ಕೆ ಸಾಕ್ಷಿ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನಡೆಸಿದ ತನಿಖೆಯಲ್ಲಿ ಹಲವು ಆಘಾತಕಾರಿ ವಿವರಗಳು ಬಹಿರಂಗಗೊಂಡಿವೆ. ಯಾಸಿನ್ ಮಲಿಕ್, ಆಸಿಯ ಆಂದ್ರಾಬಿ, ಶಬ್ಬೀರ್ ಷಾ, ರಶೀದ್ ಎಂಜಿನಿಯರ್ ಮತ್ತು ಮಸರತ್ ಆಲಂ ಅವರನ್ನು ಯುಎಪಿಎ ಸೆಕ್ಷನ್ 45 ರ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಗೃಹ ಸಚಿವಾಲಯವು ಅವರ ವಿಚಾರಣೆಗೆ ಅನುಮತಿ ನೀಡುವ ನಿರೀಕ್ಷೆಯಿದೆ.
ಯಾಸಿನ್ ಮಲಿಕ್ ಮತ್ತು ಸಹಚರರು ದಶಕಗಳಿಂದಲೂ ಪ್ರತ್ಯೇಕತಾವಾದಿಗಳೆಂದು ಕರೆಸಿಕೊಂಡು ಭೀತಿಯನ್ನು ಹರಡುವ ಕಾರ್ಯವನ್ನು ಮಾಡುತ್ತಿದ್ದರು. ಯುಪಿಎ ಆಡಳಿತದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು ಕಾಶ್ಮೀರದಲ್ಲಿ ಶಾಂತಿ ಮತ್ತು ಸ್ಥಿರತೆ ಖಚಿತಪಡಿಸಿಕೊಳ್ಳಲು ಅವರೊಂದಿಗೆ ಮಾತಕತೆಯಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿತು, ಇದರಿಂದಾಗಿ ಅವರಿಗೆ ಪ್ರಾಮುಖ್ಯತೆ ಹೆಚ್ಚಾಗತೊಡಗಿತು. ಇತ್ತೀಚಿನ ಎನ್ಐಎ ವರದಿಯು ಕೆಲವು ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದು, ಪಾಕಿಸ್ಥಾನ ಮೂಲದ ಉಗ್ರ ಹಫೀಜ್ ಸಯೀದ್ ಮತ್ತು ಯಾಸಿನ್ ಮಲಿಕ್ ನಡುವೆ ಸಂಪರ್ಕ ಇರುವುದನ್ನು ಸ್ಪಷ್ಟವಾಗಿ ಪತ್ತೆ ಹಚ್ಚಿದೆ. ಹೇಗೆ ಹಫೀಜ್ ಕಲ್ಲು ತೂರಾಟಗಳನ್ನು ಯೋಜಿಸಲು ಮತ್ತು ಕಣಿವೆಯಲ್ಲಿ ಭಯೋತ್ಪಾದನೆಯನ್ನು ಹರಡಲು ಮಲಿಕ್, ಆಂದ್ರಾಬಿ ಮತ್ತು ಆಲಂಗೆ ಹಣವನ್ನು ವರ್ಗಾಯಿಸುತ್ತಿದ್ದ ಎಂಬುದನ್ನೂ ಪತ್ತೆ ಮಾಡಿದೆ.
ಝಹೂರ್ ವಟಾಲಿಯ ಸಹಾಯದಿಂದ ಯಾಸಿನ್ ಮಲಿಕ್ 2015-16ರಲ್ಲಿ ಹವಾಲಾ ವಹಿವಾಟಿನ ಮೂಲಕ ಹಫೀಜ್ ಸಯೀದ್ನಿಂದ ರೂ.15 ಲಕ್ಷಗಳನ್ನು ಪಡೆದುಕೊಂಡಿದ್ದ ಎಂದು ಎನ್ಐಎ ವರದಿ ಹೇಳಿದೆ. 214 ಪುಟಗಳ ವರದಿಯಲ್ಲಿ, ಸೈಯದ್ ಅಲಿಶಾ ಗಿಲಾನಿ, ಶಬ್ಬೀರ್ ಷಾ ಮತ್ತು ಅಲ್ತಾಫ್ ಫುಂಟುಷ್ ಅವರಿಗೆ ಹಫೀಜ್ ಸಯೀದ್ 1 ಕೋಟಿ ರೂಪಾಯಿಗಳನ್ನು ಕಳುಹಿಸಿಕೊಟ್ಟದ್ದ ಎಂಬುದನ್ನು ಉಲ್ಲೇಖಿಸಲಾಗಿದೆ. ಪಾಕಿಸ್ಥಾನದ ಖ್ವಾಜಾ ಮಂಜೂರ್ ಚಿಶ್ಟಿಯು ಯಾಸಿನ್ ಮಲಿಕ್ಗೆ ಕೋಟ್ಯಾಂತರ ರೂಪಾಯಿಗಳನ್ನು ಕಳುಹಿಸಿದ್ದಾನೆ ಎಂದು ವರದಿಯಲ್ಲಿ ಬಹಿರಂಗಪಡಿಸಲಾಗಿದೆ. ಯಾಸಿನ್ ಮಲಿಕ್ಗೆ ಕಳುಹಿಸಿದ ಇ-ಮೇಲ್ ಪ್ರಕಾರ, ಪಾಕಿಸ್ಥಾನವು ಆಜಾದ್ ಕಾಶ್ಮೀರಕ್ಕೆ ಪಾಕಿಸ್ಥಾನದ ಕರೆನ್ಸಿಯಲ್ಲಿ ರೂ. 2 ಕೋಟಿಯನ್ನು ನೀಡಿದೆ. ಸೈಯದ್ ಅಲಿ ಶಾ ಗಿಲಾನಿ, ಯಾಸಿನ್ ಮಲಿಕ್ ಮತ್ತು ಒಮರ್ ಫಾರೂಕ್ ಅವರ ಶಿಫಾರಸ್ಸು ಪತ್ರದ ಮೂಲಕ ಪಾಕಿಸ್ಥಾನವು ಕಾಶ್ಮೀರದ ಯುವಕರಿಗೆ ಕಾನೂನು ವೀಸಾಗಳ ರೂಪದಲ್ಲಿ ಭಯೋತ್ಪಾದನೆಯ ವೀಸಾಗಳನ್ನು ನೀಡುತ್ತಿತ್ತು ಎಂದು ವರದಿ ಹೇಳುತ್ತದೆ.
ಜಮ್ಮು ಮತ್ತು ಕಾಶ್ಮೀರದ ಧ್ವನಿ ಎಂದು ಹೇಳಿಕೊಳ್ಳುವ ಪ್ರತ್ಯೇಕತಾವಾದಿಗಳು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿನ ಶೈಕ್ಷಣಿಕ ಸ್ಥಾನಗಳನ್ನು ಪಾಕಿಸ್ಥಾನದ ಜಮ್ಮು ಮತ್ತು ಕಾಶ್ಮೀರದ ಯುವಕರಿಗೆ ಮೀಸಲಿಡಲಿಲ್ಲ. ಸೀಟುಗಳನ್ನು ಅತಿ ಹೆಚ್ಚು ಹಣ ನೀಡಿದವರಿಗೆ ಮಾರಾಟ ಮಾಡಿದರು ಮತ್ತು ಹಣವನ್ನು ಪ್ರತ್ಯೇಕತಾವಾದಿಗಳ ನಡುವೆ ಹಂಚಿಕೊಂಡರು. ಯಾಸಿನ್ ಮಲಿಕ್ ಪಿಒಕೆಯಲ್ಲಿರುವ ಲಷ್ಕರ್ ಭಯೋತ್ಪಾದಕ ತರಬೇತಿ ಶಿಬಿರಕ್ಕೆ ಹೋಗಿದ್ದಾನೆ ಮತ್ತು ಭಯೋತ್ಪಾದಕರನ್ನು ಉದ್ದೇಶಿಸಿ ಮಾತನಾಡಿದ್ದಾನೆ. ಆತನ ಇ-ಮೇಲ್ ವಿನಿಮಯಗಳು, ಆತ ಲಷ್ಕರ್ ಮತ್ತು ತೆಹ್ರೀಕ್-ಉಲ್-ಮುಜಾಹಿದ್ದೀನ್ ಸಂಘಟನೆಯೊಂದಿಗೆ ನೇರ ಸಂಪರ್ಕ ಹೊಂದಿದ್ದ ಎಂಬುದನ್ನು ಸಾಬೀತುಪಡಿಸಿದೆ. ಪ್ರತ್ಯೇಕತಾವಾದಿ ಸಂಘಟನೆಯ ದುಖ್ರಾನ್ ಮಿಲಾತ್ (ಡಿಇಎಂ) ಮುಖ್ಯಸ್ಥೆ ಅಸಿಯ ಆಂದ್ರಾಬಿ ತನ್ನ ಮಗನ ಖಾತೆಗೆ ಕೋಟಿ ರೂಪಾಯಿಗಳನ್ನು ಕಳುಹಿಸುತ್ತಿದ್ದಳು. ಆಸಿಯ ಆಂದ್ರಾಬಿ ಈ ಹಣವನ್ನು ಭಯೋತ್ಪಾದನೆಯ ಹೆಸರಿನಲ್ಲಿ ಝಖತ್ ಮೂಲಕ ಸಂಗ್ರಹಿಸುತ್ತಿದ್ದಳು. ಹಾಗೆಯೇ ಹಫೀಜ್ ಸಯೀದ್ನ ಹವಾಲಾ ದಂಧೆಯಿಂದ ಹಣವನ್ನು ಮಲೇಷ್ಯಾದಲ್ಲಿ ವಾಸಿಸುತ್ತಿರುವ ತನ್ನ ಮಗ ಮೊಹಮ್ಮದ್ ಬಿನ್ ಖಾಸಿಂಗೆ ಕಳುಹಿಸುತ್ತಿದ್ದಳು. ಇನ್ನೊಬ್ಬ ಪಾಕಿಸ್ಥಾನದಲ್ಲಿ ವ್ಯಾಸಂಗ ಮಾಡುತ್ತಿರುವ ಅಹ್ಮದ್ ಬಿನ್ ಖಾಸಿಮ್ಗೂ ಕೂಡ ಅಸಿಯ ಆಂದ್ರಾಬಿ ಎಚ್ಡಿಎಫ್ಸಿ ಬ್ಯಾಂಕ್ (ಎಸಿ 50100056172602) ಖಾತೆಯ ಮೂಲಕ ಒಂದೂವರೆ ಲಕ್ಷ ರೂಪಾಯಿಗಳನ್ನು ಕಳುಹಿಸಿದ್ದಾಳೆ ಎಂದು ವರದಿ ಬಹಿರಂಗಪಡಿಸಿದೆ. ಆಂದ್ರಾಬಿಯು ಹಫೀಜ್ ಸಯೀದ್ ಮತ್ತು ಆತನ ಇಬ್ಬರು ಪತ್ನಿಯರಾದ ಉಮಿ ತಲ್ಹಾ ಮತ್ತು ನೂರ್ ಜಹಾನ್ ಅವರೊಂದಿಗೆ ದೂರವಾಣಿ ಮೂಲಕ ನಿರಂತರ ಸಂಪರ್ಕದಲ್ಲಿದ್ದಳು. ಕಾಶ್ಮೀರಿ ಉದ್ಯಮಿ ಝಹೂರ್ ಬಟಾಲಿಯನ್ನು ಬಳಸಿಕೊಂಡು ಹಫೀಝ್ ಸಯೀದ್ ಹವಾಲಾ ಹಣದ ಮೂಲಕ ಆಸಿಯ ಆಂದ್ರಾಬಿಗೆ ಧನಸಹಾಯ ಮಾಡುತ್ತಿದ್ದ ಎಂದು ವರದಿಯಲ್ಲಿ ಬಹಿರಂಗಪಡಿಸಲಾಗಿದೆ.
ಅಕ್ಟೋಬರ್ 4ಕ್ಕೂ ಮೊದಲು ಎಲ್ಲಾ ಐದು ಪ್ರತ್ಯೇಕತಾವಾದಿಗಳ ವಿರುದ್ಧ ಎನ್ಐಎ ಚಾರ್ಜ್ಶೀಟ್ ಸಲ್ಲಿಸಲಿದೆ ಮತ್ತು ಗೃಹ ವ್ಯವಹಾರಗಳ ಸಚಿವಾಲಯವು ಯುಎಪಿಎ ಅಡಿಯಲ್ಲಿ ಪ್ರಾಸಿಕ್ಯೂಷನ್ ನಡೆಸಲೂ ಅನುಮತಿಯನ್ನು ನೀಡಿದೆ. ಅದೇ ಪ್ರತ್ಯೇಕತಾವಾದಿಗಳು ಯುಪಿಎ ಸರ್ಕಾರದ ಆಡಳಿತದ ದಿನಗಳಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಂಡಿದ್ದರು. ಮಲಿಕ್ ಭಾರತೀಯ ತೆರಿಗೆದಾರರ ಹಣ ದುರುಪಯೋಗ ಮಾಡಿಕೊಂಡು ಪಾಕಿಸ್ಥಾನಕ್ಕೆ ಹಾರಾಟ ನಡೆಸುತ್ತಿದ್ದ. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಅನೇಕ ಬಾರಿ ಭೇಟಿ ಕೂಡ ಆಗಿದ್ದ. ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು ಸಿಂಗ್ ಈತನ ಸಹಾಯವನ್ನೂ ಕೇಳಿದ್ದರು.
ಯುಪಿಎ ಆಡಳಿತದ 10 ವರ್ಷಗಳ ಅವಧಿಯಲ್ಲಿ ಕಾಶ್ಮೀರಕ್ಕೆ ಆಗಿರುವ ಹಾನಿಯನ್ನು ಬದಲಾಯಿಸಲಾಗುವುದಿಲ್ಲ, ಆದರೆ ಬಹುಶಃ ಮೋದಿ ಸರ್ಕಾರವು 370 ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಮತ್ತು ಯಾಸಿನ್ ಮಲಿಕ್ ಮತ್ತು ಆತನ ಇತರ ಸಹಚರರನ್ನು ತನಿಖೆಗೆ ಒಳಪಡಿಸುವ ಮೂಲಕ ಇನ್ನು ಮುಂದೆ ಹಾನಿಯಾಗದಂತೆ ತಡೆಗಟ್ಟುವ ಪ್ರಯತ್ನವನ್ನು ಪರಿಣಾಮಕಾರಿಯಾಗಿ ಮಾಡಿದೆ. ಸಮೃದ್ಧ ಕಾಶ್ಮೀರದ ನಿರ್ಮಾಣಕ್ಕಾಗಿ ಇವರುಗಳು ಜೈಲಿನಲ್ಲಿ ಇರಬೇಕಾದುದು ಅನಿವಾರ್ಯ ಕೂಡ. ಜೀವನಪರ್ಯಂತ ಸೆರೆವಾಸವನ್ನು ಅನುಭವಿಸುವ ಭಯದಲ್ಲಿರುವ ಪ್ರತ್ಯೇಕತಾವಾದಿ ಸೋಗಿನ ಭಯೋತ್ಪಾದಕರು ಬದಲಾದ ಭಾರತದ ಹೊಸ ರೂಪಕ್ಕೆ ತತ್ತರಿಸಿ ಹೋಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.