ಅಹ್ಮದಾಬಾದ್: ಪ್ರಯಾಣಿಕರಿಗಾಗಿ ಮತ್ತು ದೇಶದ ಜನರನ್ನು ತನ್ನೆಡೆ ಸೆಳೆಯುವ ಸಲುವಾಗಿ ರೈಲ್ವೇಯು ತನ್ನ ಸೌಲಭ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪ್ರಯಾಣಿಕರ ವಿಶ್ರಾಂತಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಅಹ್ಮದಾಬಾದಿನಲ್ಲಿ ರೈಲ್ವೇಯು ಹೊಸ ವಿಶ್ರಾಂತಿ ಕೊಠಡಿಗಳನ್ನು ಸ್ಥಾಪನೆ ಮಾಡಿದೆ. ಸುಸಜ್ಜಿತವಾದ ವ್ಯವಸ್ಥೆಗಳು ಇದರಲ್ಲಿವೆ.
ರೈಲ್ವೇ ಸಚಿವಾಲಯವು ಟ್ವಿಟರ್ ಮೂಲಕ ವಿಶ್ರಾಂತಿ ಕೊಠಡಿ ಮತ್ತು ಅದರೊಳಗಿರುವ ಸುಸಜ್ಜಿತ ವ್ಯವಸ್ಥೆಗಳ ವೀಡಿಯೋವನ್ನು ಹಂಚಿಕೊಂಡಿದೆ. “ಅಹ್ಮದಾಬಾದಿನಲ್ಲಿ ಹೊಸ ವಿಶ್ರಾಂತಿ ಕೊಠಡಿಗಳು 3 ಸ್ಟಾರ್ ಸೌಲಭ್ಯ ಮತ್ತು ಆರಾಮದಾಯಕತೆಯನ್ನು ಪ್ರಯಾಣಿಕರಿಗೆ ನೀಡುತ್ತದೆ. ಇದರಲ್ಲಿ ಡಿಲಕ್ಸ್ ರೂಂಗಳು ಮತ್ತು ಫ್ಯಾಮಿಲಿ ರೂಂಗಳಿದ್ದು ಕುಟುಂಬ ಸಮೇತ ಪ್ರಯಾಣಿಸುವವರಿಗೆ, ಏಕಾಂಗಿಯಾಗಿ ಪ್ರಯಾಣಿಸುವವರಿಗೆ ಅನುಕೂಲಕರವಾಗಿದೆ ” ಎಂದು ಹೇಳಿದೆ.
ಮಾತ್ರವಲ್ಲದೇ ದೃಷ್ಟಿ ವಿಕಲಚೇತನರಿಗೆ ಪ್ರಯಾಣವನ್ನು ಸುಲಲಿತಗೊಳಿಸುವ ಸಲುವಾಗಿ, ಫ್ಲಾಟ್ಫಾರಂ ಮತ್ತು ಕೋಚುಗಳನ್ನು ಸುಲಭವಾಗಿ ಹತ್ತಲು ಇಳಿಯಲು ಸಾಧ್ಯವಾಗುವಂತೆ ಮಾಡುವ ಸಲುವಾಗಿ ರೈಲ್ವೇಯು ವಿಶೇಷ ಪ್ರಯತ್ನಗಳನ್ನೂ ಆರಂಭಿಸಿದೆ.
“ಭಾರತೀಯ ರೈಲ್ವೇಯು ವಿವಿಧ ರೈಲು ನಿಲ್ದಾಣ ಮತ್ತು ರೈಲುಗಳಲ್ಲಿ ದೃಷ್ಟಿ ವಿಕಲಚೇತನರಿಗಾಗಿ ಬ್ರೈಲ್ ಸೈನೇಜ್ ಮುಂತಾದ ಹಲವು ವ್ಯವಸ್ಥೆಗಳನ್ನು ತರುತ್ತಿದೆ. ಇದರಿಂದ ಅವರಿಗೆ ರೈಲು, ಫ್ಲಾಟ್ಫಾರಂ ಹತ್ತಲು ಮತ್ತು ತಮ್ಮ ಸೀಟುಗಳನ್ನು ಗುರುತಿಸಲು ಸುಲಭವಾಗಲಿದೆ” ಎಂದು ಸಚಿವಾಲಯ ಟ್ವಿಟ್ನಲ್ಲಿ ಹೇಳಿದೆ.
New Retiring Room at Ahmedabad provides 3 Star facilities & comfort to the passengers. It has delux rooms as well as family rooms to accommodate travelling families. pic.twitter.com/URulNTn82T
— Ministry of Railways (@RailMinIndia) September 19, 2019
Indian Railways : Creating better facilities like Braille signage for visually impaired passengers at its various Railway stations and in train’s, so they can easily locate their platform, coaches and seat etc. pic.twitter.com/WW1ButJJb2
— Ministry of Railways (@RailMinIndia) September 20, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.