ಹೈದರಾಬಾದ್; ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರು ತಮ್ಮ ಪ್ರವಾಸಕ್ಕಾಗಿ 5 ಕೋಟಿ ರೂಪಾಯಿಯ ಬುಲೆಟ್ ಪ್ರೂಫ್ ಬಸ್ಸೊಂದನ್ನು ಖರೀದಿಸಿದ್ದಾರೆ.
ಬಸ್ ಮರ್ಸಿಡಿಸ್ ಬೆಂಝ್ ಕಂಪನಿಯದಾಗಿದ್ದು, ಸಾಮಾನ್ಯ ಜನರಂತೆ ಬಸ್ನಲ್ಲಿ ಓಡಾಡಬೇಕೆಂಬ ಉದ್ದೇಶದಿಂದ ಈ ಬಸ್ನ್ನು ಖರೀದಿಸಿದ್ದಾರೆ ಎಂದು ಅವರ ಪಕ್ಷದ ಮುಖಂಡರು ಹೇಳಿಕೊಂಡಿದ್ದಾರೆ.
ಈ ಬಸ್ನಲ್ಲಿ ಯಾವುದೇ ಐಷಾರಾಮಿ ಸೌಲಭ್ಯಗಳಿಲ್ಲ, 12 ಸೀಟುಗಳಿದ್ದು ಸಿಎಂ ಮತ್ತು ಅವರ ಸಹಾಯಕರು ಇದರಲ್ಲಿ ಪ್ರಯಾಣಿಸಬಹುದಾಗಿದೆ. ನಾಳೆಯಿಂದ ಇದರಲ್ಲೇ ಅವರ ರಾಜ್ಯ ಪ್ರವಾಸ ಆರಂಭವಾಗಲಿದೆ.
ಆದರೆ ಲಕ್ಷಾಂತರ ರೂಪಾಯಿಯ ಇತರ ಕಾರುಗಳಿರುವಾಗ ಸಿಎಂ ಮತ್ತೆ 5 ಕೋಟಿ ಖರ್ಚು ಮಾಡಿ ಬಸ್ ಖರೀದಿಸುವ ಅಗತ್ಯವೇನಿದೆ? ಅವರ ಇತರ ಕಾರುಗಳಲ್ಲಿ ಏನು ದೋಷವಿದೆ ಎಂದು ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.