ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ನಡೆದ ತಮ್ಮ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ, ಝಾರ್ಖಾಂಡ್ ರಾಜ್ಯದ ರಾಂಚಿಯಲ್ಲಿನ ಅರಾ ಮತ್ತು ಕೆರಂ ಎಂಬ ಎರಡು ಗ್ರಾಮಗಳು ಅಳವಡಿಸಿಕೊಂಡಿರುವ ನೀರು ಸಂರಕ್ಷಣಾ ವಿಧಾನಗಳನ್ನು ಪ್ರಶಂಸಿಸಿದ್ದಾರೆ. ಈ ಎರಡು ಗ್ರಾಮಗಳು ನೀರಿನ ಸಂರಕ್ಷಣೆಯ ದೃಷ್ಟಿಯಿಂದ ಇಡೀ ದೇಶಕ್ಕೆ ಮಾದರಿಯಾಗಿವೆ ಎಂದಿದ್ದಾರೆ.
ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಮೋದಿಯವರು ಜುಲೈ 28ರಂದು ಭಾನುವಾರ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ನೀರಿನ ಸಂರಕ್ಷಣೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಪ್ರತಿಪಾದಿಸಿರುವ ಅವರು, ಝಾರ್ಖಾಂಡ್ ಸೇರಿದಂತೆ ವಿವಿಧ ರಾಜ್ಯಗಳು ಅಳವಡಿಸಿಕೊಂಡಿರುವ ನೀರು ಸಂರಕ್ಷಣಾ ವಿಧಾನಗಳನ್ನು ಅವರು ಉಲ್ಲೇಖ ಮಾಡಿದ್ದಾರೆ. “ಅರಾ-ಕೆರಂ ಗ್ರಾಮಸ್ಥರು ನೀರಿನ ನಿರ್ವಹಣೆಯ ಬಗ್ಗೆ ಉತ್ಸಾಹವನ್ನು ತೋರಿಸಿದ ರೀತಿ ಎಲ್ಲರಿಗೂ ಒಂದು ಉದಾಹರಣೆಯಾಗಿದೆ. ಶ್ರಮಪಟ್ಟು ಗ್ರಾಮಸ್ಥರು ಬೆಟ್ಟದಿಂದ ಹರಿಯುವ ನೀರಿಗೆ ಒಂದು ನಿರ್ದಿಷ್ಟ ನಿರ್ದೇಶನವನ್ನು ನೀಡಿದ್ದಾರೆ, ಅದೂ ಶುದ್ಧ ದೇಶಿ ವಿಧಾನವನ್ನು ಅಳವಡಿಸಿಕೊಳ್ಳುವುದರ ಮೂಲಕ ಈ ಕಾರ್ಯವನ್ನು ಮಾಡಿದ್ದು ಶ್ಲಾಘನೀಯ. ಈ ಪ್ರಯತ್ನದಿಂದ ಮಣ್ಣಿನ ಸವೆತ ಮತ್ತು ಬೆಳೆಗಳ ತ್ಯಾಜ್ಯಗಳ ಸಮಸ್ಯೆ ತಗ್ಗಿದೆ.ಅಲ್ಲದೇ ಕೃಷಿಗೂ ನೀರು ಸಿಗುತ್ತಿದೆ”ಎಂದು ಮೋದಿ ಹೇಳಿದ್ದಾರೆ.
ರಾಜಧಾನಿ ರಾಂಚಿಯಿಂದ 30 ಕಿ.ಮೀ ದೂರದಲ್ಲಿ ಈ ಗ್ರಾಮಗಳಿದ್ದು, 110 ಮನೆಗಳನ್ನು ಹೊಂದಿವೆ. ಎರಡು ಗ್ರಾಮಗಳು ಬತ್ತಿ ಹೋಗಿದ್ದ ದಂಭಾ ನದಿಯನ್ನು ಪುನಶ್ಚೇತನಗೊಳಿಸಿವೆ, ಕೃಷಿ ಕೊಳ ಮತ್ತು ಕಂದಕ ವ್ಯವಸ್ಥೆಯ ಮೂಲಕ ಮಳೆ ನೀರನ್ನು ಸಂರಕ್ಷಿಸಿವೆ ಮತ್ತು 400 ಎಕರೆ ಪ್ರದೇಶದಲ್ಲಿ ಹರಡಿರುವ ಕೇರಂ ಅರಣ್ಯವನ್ನು ರಕ್ಷಿಸಿವೆ.
2016 ರಲ್ಲಿ ಈ ಹಳ್ಳಿಗಳಲ್ಲಿ ನೀರಿನ ಸಂರಕ್ಷಣೆ ಕಾರ್ಯ ಪ್ರಾರಂಭವಾಯಿತು. ಎರಡು ಗ್ರಾಮಗಳಲ್ಲಿ 55 ಕೃಷಿ ಕೊಳಗಳನ್ನು ರಚಿಸಲಾಗಿದೆ. ಇದರಿಂದಾಗಿ ಈ ಗ್ರಾಮಗಳು 2017 ರಲ್ಲಿ ಮೂರು-ನಾಲ್ಕು ಪಟ್ಟು ಹೆಚ್ಚಿನ ಇಳುವರಿಯನ್ನು ಪಡೆದುಕೊಂಡವು. 2018 ರಲ್ಲಿ ಬರಗಾಲದ ಹೊರತಾಗಿಯೂ, ಅರಾ-ಕೆರಂನ ಇಳುವರಿ ಉತ್ಪಾದನೆಯು ಗ್ರಾಮದ ಸಾಮಾನ್ಯ ಉತ್ಪಾದನೆಯ ದುಪ್ಪಟ್ಟಾಗಿತ್ತು.
ಝಾರ್ಖಾಂಡ್ ಮಾತ್ರವಲ್ಲದೇ, ಹರಿಯಾಣದ ಬಗ್ಗೆಯೂ ಮೋದಿ ವಿಶೇಷ ಪ್ರಸ್ತಾಪವನ್ನು ಮಾಡಿದ್ದು, ಇಲ್ಲಿನ ನೀರು ಸಂರಕ್ಷಣಾ ಕ್ರಮಗಳು ರಾಜ್ಯದ ರೈತರಿಗೆ ಸಹಕಾರಿಯಾಗಿದೆ ಎಂದಿದ್ದಾರೆ. “ನೀರಿನ ಸಂರಕ್ಷಣೆಗಾಗಿ ಕೈಗೊಂಡ ಅಲ್ಲಿ ಸಮುದಾಯದ ಪ್ರಯತ್ನಗಳು ಒಂದು ದೊಡ್ಡ ಹೆಜ್ಜೆಯಾಗಿದೆ” ಎಂದು ಅವರು ಒತ್ತಿ ಹೇಳಿದರು.
ಪ್ರಧಾನಮಂತ್ರಿ ತಮ್ಮ ಪ್ರಮುಖ ಸ್ಚಚ್ಛಭಾರತ ಕಾರ್ಯಕ್ರಮದ ಬಗ್ಗೆಯೂ ಮಾತನಾಡಿದ್ದೂ, ಸ್ವಚ್ಛ ಭಾರತದ ಮೂಲ ಉದ್ದೇಶವನ್ನು ಅರಿತುಕೊಳ್ಳಲು ಜನರು ಹೆಚ್ಚಿನ ಉತ್ಸಾಹ ತೋರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.