ನವದೆಹಲಿ : ಕಾರ್ಗಿಲ್ ವಿಜಯೋತ್ಸವದ 20ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ವೀರ ಯೋಧರಿಗೆ ಗೌರವ ಸಲ್ಲಿಸಿದರು. 1999ರ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಎಲ್ಲಾ ಯೋಧರಿಗೂ ವಿನಮ್ರವಾದ ನಮನಗಳನ್ನು ಸಲ್ಲಿಕೆ ಮಾಡುತ್ತೇವೆ ಎಂದು ಮೋದಿ ಟ್ವಿಟರಿನಲ್ಲಿ ಹೇಳಿಕೊಂಡಿದ್ದಾರೆ.
“ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ತಾಯಿ ಭಾರತೀಯ ಎಲ್ಲಾ ಧೀರ ಪುತ್ರರಿಗೆ ನಾನು ಹೃದಯ ತುಂಬಿದ ಗೌರವ ನಮನ ಸಲ್ಲಿಸುತ್ತೇನೆ. ಈ ದಿನ ನಮ್ಮ ಯೋಧರ ಧೈರ್ಯ, ಸಾಹಸ ಮತ್ತು ಶ್ರದ್ಧೆಯನ್ನು ನಮಗೆ ನೆನಪಿಸಿಕೊಡುತ್ತದೆ. ತಾಯ್ನಾಡನ್ನು ರಕ್ಷಣೆ ಮಾಡಲು ತಮ್ಮದೆಲ್ಲವನ್ನೂ ತ್ಯಾಗ ಮಾಡಿದ ಎಲ್ಲಾ ವೀರ ಯೋಧರಿಗೂ ನಾನು ವಿನಮ್ರ ನಮನಗಳನ್ನು ಸಲ್ಲಿಸುತ್ತೇನೆ. ಜೈ ಹಿಂದ್” ಎಂದು ಮೋದಿ ಟ್ವಿಟ್ನಲ್ಲಿ ಹೇಳಿದ್ದಾರೆ.
During the Kargil War in 1999, I had the opportunity to go to Kargil and show solidarity with our brave soldiers.
This was the time when I was working for my Party in J&K as well as Himachal Pradesh.
The visit to Kargil and interactions with soldiers are unforgettable. pic.twitter.com/E5QUgHlTDS
— Narendra Modi (@narendramodi) July 26, 2019
ಕಾರ್ಗಿಲ್ ಯುದ್ಧದ ಸಮಯದಲ್ಲಿ ನನಗೆ ಕಾರ್ಗಿಲ್ಗೆ ಹೋಗುವ ಅವಕಾಶ ಸಿಕ್ಕಿತ್ತು. ಆ ಸಂದರ್ಭದಲ್ಲಿ ನಾನು ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗಾಗಿ ಕಾರ್ಯನಿರ್ವಹಿಸುತ್ತಿದ್ದೆ. ಆಗ ಕಾರ್ಗಿಲ್ಗೆ ಭೇಟಿ ನೀಡಿದ್ದು ಮತ್ತು ಯೋಧರೊಂದಿಗೆ ಸಂವಹನ ನಡೆಸಿದ್ದು ಎಂದಿಗೂ ಮರೆಯಲಾಗದ ಕ್ಷಣ ಎಂದಿದ್ದಾರೆ.
कारगिल विजय दिवस पर मां भारती के सभी वीर सपूतों का मैं हृदय से वंदन करता हूं। यह दिवस हमें अपने सैनिकों के साहस, शौर्य और समर्पण की याद दिलाता है। इस अवसर पर उन पराक्रमी योद्धाओं को मेरी विनम्र श्रद्धांजलि, जिन्होंने मातृभूमि की रक्षा में अपना सर्वस्व न्योछावर कर दिया। जय हिंद! pic.twitter.com/f7cpUFLO9o
— Narendra Modi (@narendramodi) July 26, 2019
ಟ್ವೀಟ್ನೊಂದಿಗೆ ಮೋದಿಯವರು ಒಂದು ನಿಮಿಷ 24 ಸೆಕೆಂಡುಗಳ ಕಾರ್ಗಿಲ್ ಯುದ್ಧ ಸ್ಮರಣೆಯನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ದ್ರಾಸ್ನಲ್ಲಿನ ಕಾರ್ಗಿಲ್ ವಾರ್ ಮೆಮೋರಿಯಲ್ ಯೋಧರ ಫೋಟೋಗಳು ಹಾಗೂ ಮೋದಿಯವರ ಭಾಷಣವಿದೆ.
ಭಾರತೀಯ ಸೇನಾ ಯೋಧರೊಂದಿಗಿನ ಅವರ ಸಭೆಯ ಫೋಟೋಗಳು ಈ ವಿಡಿಯೋದಲ್ಲಿದೆ. ಇದರಲ್ಲಿ ಒಂದು ಫೋಟೋ ಕಾರ್ಗಿಲ್ನಲ್ಲಿನ ಆಸ್ಪತ್ರೆಯದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.