ಭೋಪಾಲ್: ಕರ್ನಾಟಕದ ಮೈತ್ರಿ ಸರ್ಕಾರ ಪತನಗೊಂಡಂತೆಯೇ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದು ಬಿಜೆಪಿ ಮುಖಂಡ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಹೇಳಿದ್ದಾರೆ.
“ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ಬಿಕ್ಕಟ್ಟಿದೆ, ಬಿಎಸ್ಪಿ-ಸಮಾಜವಾದಿಯ ಸರ್ಕಾರಕ್ಕೆ ನೀಡಿದ ಬೆಂಬಲದಲ್ಲೂ ಬಿಕ್ಕಟ್ಟು ಉದ್ಭವಿಸಿದೆ. ಸರ್ಕಾರಕ್ಕೆ ಏನಾದರೂ ಆದರೆ ನಾವೇನೂ ಮಾಡಲಾಗುವುದಿಲ್ಲ. ಯಾರೂ ಬಿಜೆಪಿಯನ್ನು ಹೊಣೆ ಮಾಡಬಾರದು” ಎಂದು ಮಧ್ಯಪ್ರದೇಶದ ರಾಜಕೀಯ ಪರಿಸ್ಥಿತಿಯ ಬಗ್ಗೆ ಚೌವ್ಹಾಣ್ ಹೇಳಿದ್ದಾರೆ.
ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಸಂಭವಿಸಿದ ಪರಿಸ್ಥಿತಿ ಮಧ್ಯಪ್ರದೇಶದ ಕಮಲನಾಥ್ ಸರ್ಕಾರಕ್ಕೂ ಸಂಭವಿಸಬಹುದು, ಹೀಗಾದಾಗ ನಮ್ಮ ಪಕ್ಷವನ್ನು ಹೊಣೆ ಮಾಡಬಾರದು ಎಂದಿದ್ದಾರೆ.
“ನಾವು ಸರ್ಕಾರದ ಪತನಕ್ಕೆ ಕಾರಣವಾಗುವುದಿಲ್ಲ. ತಮ್ಮ ಸರ್ಕಾರಗಳ ಪತನಕ್ಕೆ ಕಾಂಗ್ರೆಸ್ ನಾಯಕರೇ ಕಾರಣರಾಗುತ್ತಾರೆ” ಎಂದಿದ್ದಾರೆ.
ಮಧ್ಯಪ್ರದೇಶ ವಿಧಾನಸಭೆಯ ಒಟ್ಟು ಸಂಖ್ಯಾಬಲ 231. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 114 ಸ್ಥಾನ ಪಡೆದುಕೊಂಡು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 108 ಸ್ಥಾನಗಳನ್ನು ಪಡೆದುಕೊಂಡಿದೆ. ಬಹುಜನ ಸಮಾಜವಾದಿ ಪಕ್ಷ 2, ಸಮಾಜವಾದಿ 1 ಸ್ಥಾನಗಳನ್ನು ಹೊಂದಿದೆ. ಸ್ವತಂತ್ರ ಶಾಸಕರು 4 ಮಂದಿ, ಇತರೆ ಇಬ್ಬರು ಇದ್ದಾರೆ.
ಕಾಂಗ್ರೆಸ್ ಪಕ್ಷವು ಬಹುಜನ ಸಮಾಜವಾದಿ ಮತ್ತು ಸಮಾಜವಾದಿಗಳ ಬೆಂಬಲ ಪಡೆದುಕೊಂಡು ಸರ್ಕಾರವನ್ನು ರಚನೆ ಮಾಡಿದೆ.
ಇದೀಗ ಕರ್ನಾಟಕದಲ್ಲಿ ಸರ್ಕಾರ ಪತನವಾಗುತ್ತಿದ್ದಂತೆ ಮಧ್ಯಪ್ರದೇಶ, ರಾಜಸ್ಥಾನ ಸರ್ಕಾರದಲ್ಲೂ ನಡುಕ ಉಂಟಾಗಿದೆ. ಕಾಂಗ್ರೆಸ್ ಮತ್ತು ಬೆಂಬಲ ನೀಡಿರುವವರ ನಡುವೆ ಆಂತರಿಕ ತಿಕ್ಕಾಟಗಳು ನಡೆಯುತ್ತಿವೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.