ವಾಷಿಂಗ್ಟನ್: ಅಮೆರಿಕಾ ಪ್ರವಾಸದಲ್ಲಿರುವ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಬಲೂಚಿಸ್ತಾನ ಹೋರಾಟಗಾರರಿಂದ ತೀವ್ರ ಸ್ವರೂಪದ ಪ್ರತಿಭಟನೆ ವ್ಯಕ್ತವಾಗಿದೆ. ‘ನಯಾ ಪಾಕಿಸ್ಥಾನ್’ ಬಗ್ಗೆ ವಾಷ್ಟಿಂಗ್ಟನ್ ಅರೆನಾದಲ್ಲಿ ಬಗ್ಗೆ ಅವರು ಮಾಡುತ್ತಿದ್ದ ಭಾಷಣಕ್ಕೆ ಬಲೂಚ್ ಹೋರಾಟಗಾರರು ಅಡ್ಡಿಯುಂಟು ಮಾಡಿದ್ದಾರೆ. ಪಾಕಿಸ್ಥಾನದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಮುಟ್ಟಾಹಿದಾ ಕಾಸ್ಮಿ ಮೂವ್ಮೆಂಟ್ (ಎಂಕ್ಯೂಎಂ) ಮತ್ತು ಇತರ ಅಲ್ಪಸಂಖ್ಯಾತ ಗುಂಪುಗಳ ಸದಸ್ಯರು ಇಮ್ರಾನ್ ಖಾನ್ ಅವರ ಭೇಟಿಯ ವಿರುದ್ಧ ವಾಷಿಂಗ್ಟನ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆದರೂ, ಪಾಕಿಸ್ಥಾನದ ಮಾಧ್ಯಮಗಳು ಪ್ರತಿಭಟನೆಗಳನ್ನು ನಿರ್ಲಕ್ಷಿಸಿ, ಜನಸಮೂಹವನ್ನುದ್ದೇಶಿಸಿ ಇಮ್ರಾನ್ ಅವರು ಮಾಡುತ್ತಿದ್ದ ಭಾಷಣವನ್ನು ಮಾತ್ರ ಪ್ರಸಾರಗೊಳಿಸಿವೆ.
‘ನಯಾ ಪಾಕಿಸ್ತಾನ್’ ಇಮ್ರಾನ್ ಖಾನ್ ಅವರ ಭಾಷಣದ ಪ್ರಮುಖ ಅಂಶವಾಗಿತ್ತು ಎಂದು ಪಾಕಿಸ್ಥಾನ ಮೂಲದ ಡಾನ್ ನ್ಯೂಸ್ ವರದಿ ಮಾಡಿದೆ. ಅಲ್ಲಿನ ಸಾರ್ವತ್ರಿಕ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ‘ನಯಾ ಪಾಕಿಸ್ತಾನ್’ ಇಮ್ರಾನ್ ಖಾನ್ ಅವರ ಪ್ರಮುಖ ಘೋಷಣೆಯಾಗಿತ್ತು.
ಬಲೂಚಿಸ್ಥಾನದ ಜನರ ಮೇಲೆ ಪಾಕಿಸ್ಥಾನ ನಿರಂತರವಾದ ದೌರ್ಜನ್ಯವನ್ನು ಎಸಗುತ್ತಿದೆ ಎಂದು ಆರೋಪಿಸಿರುವ ಬಲೂಚ್ ಹೋರಟಗಾರರು, ಬಲೂಚ್ ಅನ್ನು ಪಾಕಿಸ್ಥಾನದಿಂದ ಬೇರ್ಪಡಿಸಬೇಕು ಎಂಬ ಆಗ್ರಹವನ್ನು ಮುಂದಿಟ್ಟಿದ್ದಾರೆ. ಕ್ರಿಕೆಟ್ ವಿಶ್ವಕಪ್ ಸಂದರ್ಭದಲ್ಲೂ ಬಲೂಚ್ ಆಟಗಾರರು ಪಾಕ್ ವಿರುದ್ಧ ಘೋಷಣೆಗಳುಳ್ಳ ಪೋಸ್ಟರ್ ಅಂಟಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದರು.
#WATCH Baloch activists disrupt Pakistan PM Imran Khan’s speech during a community event in Washington DC, USA. pic.twitter.com/S9xdXF1yt8
— ANI (@ANI) July 22, 2019
Protesters from Muttahida Qasmi Movement (MQM) and other minority groups held protest in Washington DC during Pakistan PM Imran Khan’s visit to the United States of America. pic.twitter.com/KFPeypdsjG
— ANI (@ANI) July 22, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.