ಟೆಲ್ ಅವಿವ್: ಹಮಾಸ್ನಿಂದ ಅಪಹರಿಸಲ್ಪಟ್ಟ ಏಕೈಕ ಹಿಂದೂವಿನ ಮೃತದೇಹವನ್ನು ಅಕ್ಟೋಬರ್ 13 ರಂದು ಅಂದರೆ ಅಪಹರಣಗೊಂಡ ಎರಡು ವರ್ಷಗಳ ಬಳಿಕ ಹಸ್ತಾಂತರ ಮಾಡಲಾಗಿದೆ. ಉಗ್ರಗಾಮಿ ಗುಂಪು ಹಮಾಸ್ ನೇಪಾಳದ ಹಿಂದೂ ವಿದ್ಯಾರ್ಥಿ ಬಿಪಿನ್ ಜೋಶಿ ಅವರ ಮೃತದೇಹವನ್ನು ಇಸ್ರೇಲ್ಗೆ ಹಸ್ತಾಂತರಿಸಿದೆ.
ಹಮಾಸ್ ಸೋಮವಾರ 20 ಜೀವಂತ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಅಲ್ಲದೇ ಜೋಶಿ ಸೇರಿದಂತೆ ನಾಲ್ವರು ಒತ್ತೆಯಾಳುಗಳ ಮೃತ ದೇಹಗಳನ್ನು ಸಹ ಹಸ್ತಾಂತರಿಸಿದೆ.
ನೇಪಾಳದ ವಿದ್ಯಾರ್ಥಿಯ ಸಾವಿನ ಸುದ್ದಿ ಅವರ ಕುಟುಂಬದ ಎಲ್ಲಾ ಭರವಸೆಗಳನ್ನು ಚೂರುಚೂರು ಮಾಡಿದೆ. ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್ನ ಕಿಬ್ಬುಟ್ಜ್ ಅಲುಮಿಮ್ಗೆ ಬಂದ ಸುಮಾರು ಮೂರು ವಾರಗಳ ನಂತರ ಜೋಶಿ ಅವರನ್ನು ಉಗ್ರಗಾಮಿ ಗುಂಪು ಸೆರೆಹಿಡಿದಿತ್ತು. ಅಲ್ಲಿಂದ ಅವರ ಬಗ್ಗೆ ಯಾವುದೇ ಸುಳಿವು ದೊರೆತಿರಲಿಲ್ಲ.
ಜೋಶಿ ಸೆಪ್ಟೆಂಬರ್ 2023 ರಲ್ಲಿ, ಇತರ 16 ನೇಪಾಳಿ ವಿದ್ಯಾರ್ಥಿಗಳ ಜೊತೆಗೆ ಕೃಷಿ ತರಬೇತಿ ಮತ್ತು ಕೆಲಸದ ಕಾರ್ಯಕ್ರಮಕ್ಕಾಗಿ ಇಸ್ರೇಲ್ಗೆ ಆಗಮಿಸಿದ್ದರು. ಅಕ್ಟೋಬರ್ 7 ರಂದು, ಜಿಬ್ಬುಟ್ಜ್ನಲ್ಲಿ ದಕ್ಷಿಣ ಇಸ್ರೇಲ್ಗೆ ಹಮಾಸ್ ನುಗ್ಗಿದಾಗ, ಜೋಶಿ ಜೊತೆಗೆ ಇದ್ದ 10 ನೇಪಾಳಿಗಳು ದಾಳಿಯಲ್ಲಿ ಸಾವನ್ನಪ್ಪಿದ್ದರು.
ದಾಳಿಯ ಸಮಯದಲ್ಲಿ, ಜೋಶಿ ಅನೇಕ ವಿದ್ಯಾರ್ಥಿಗಳ ಜೀವವನ್ನು ಉಳಿಸಿದ್ದಾರೆ ಎನ್ನಲಾಗಿದೆ. ಉಗ್ರಗಾಮಿಗಳು ಜೋಶಿ ಮತ್ತು ಇತರ ವಿದ್ಯಾರ್ಥಿಗಳ ಮೇಲೆ ಗ್ರೆನೇಡ್ಗಳನ್ನು ಎಸೆದಾಗ, ಅವರು ಗ್ರೆನೇಡ್ಗಳಲ್ಲಿ ಒಂದನ್ನು ಹಿಡಿದು ಬಿಸಾಕಿದ್ದರು ಎಂಬ ವರದಿಗಳಿವೆ. ಅವರನ್ನು ಹಮಾಸ್ ಸೆರೆಹಿಡಿದು ಗಾಜಾಗೆ ಕರೆದೊಯ್ದಿತ್ತು. ಆದರೆ ನಿನ್ನೆ ಅವರ ಮೃತದೇಹ ಇಸ್ರೇಲ್ಗೆ ಹಸ್ತಾಂತರಗೊಂಡಿದೆ.
ಇಸ್ರೇಲಿ ಸೇನೆ ಬಿಡುಗಡೆ ಮಾಡಿದ ಜೋಶಿಯ ಕೊನೆಯ ದೃಶ್ಯಗಳಲ್ಲಿ, ಅವರನ್ನು ಗಾಜಾದ ಶಿಫಾ ಆಸ್ಪತ್ರೆಗೆ ಕೊಂಡು ಹೋಗುತ್ತಿರುವ ದೃಶ್ಯಗಳು ಕಂಡುಬಂದಿವೆ. ಅವರ ಅಪಹರಣದ ನಂತರ, ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಅವರನ್ನು ಮತ್ತೆ ಜೀವಂತವಾಗಿ ನೋಡಬೇಕೆಂದು ಆಶಿಸಿದ್ದರು. ಜೋಶಿ ಸೆರೆಹಿಡಿಯಲ್ಪಟ್ಟ ಸಮಯದಲ್ಲಿ, ಅವರಿಗೆ 22 ವರ್ಷ ವಯಸ್ಸಾಗಿತ್ತು. ಈ ವರ್ಷ ಅಕ್ಟೋಬರ್ 26 ರಂದು ಅವರಿಗೆ 25 ವರ್ಷ ತುಂಬುತ್ತಿತ್ತು.
ಸೋಮವಾರ, ಯುಎಸ್ ಮಧ್ಯಸ್ಥಿಕೆಯ ಗಾಜಾ ಶಾಂತಿ ಯೋಜನೆಯ ಭಾಗವಾಗಿ, ಹಮಾಸ್ ಎಲ್ಲಾ 20 ಜೀವಂತ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತು. ವರದಿಗಳ ಪ್ರಕಾರ, ಹಮಾಸ್ ವಶದಲ್ಲಿ 48 ಒತ್ತೆಯಾಳುಗಳಿದ್ದರು, ಅವರಲ್ಲಿ 20 ಮಂದಿ ಜೀವಂತವಾಗಿದ್ದರು. ಉಗ್ರಗಾಮಿ ಗುಂಪು ಇನ್ನೂ 24 ಒತ್ತೆಯಾಳುಗಳ ಶವಗಳನ್ನು ಹಸ್ತಾಂತರಿಸಿಲ್ಲ. ವಿನಿಮಯ ಒಪ್ಪಂದದ ಭಾಗವಾಗಿ, ಇಸ್ರೇಲ್ ಹಲವಾರು ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಬಿಡುಗಡೆ ಮಾಡಿದೆ.
Bipin Joshi’s family struggled so hard to get their son back.
He arrived in Israel 25 days before the massacre. The 23-year-old Hindu student from Nepal just wanted to study agriculture.
He wasn’t Israeli. He wasn’t Jewish. So the media won’t talk about him because that will… pic.twitter.com/2QrwLfLG8Q
— dahlia kurtz ✡︎ דליה קורץ (@DahliaKurtz) October 13, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.