ಹೈದರಾಬಾದ್: ಜಮ್ಮುವಿನ ಅವಳಿ ಸಹೋದರ-ಸಹೋದರಿಯರಾದ ಸ್ವಪ್ನಿಲ್ ಮತ್ತು ಸ್ವಪ್ನಿಲಾ ಅವರಿಗೆ ಚಂದ್ರ ಯಾವಾಗಲೂ ತಮಗೆ ಅಜ್ಜಿ ಹೇಳುತ್ತಿದ್ದ ಕಥೆಗಳ ಭಾಗವಾಗಿದ್ದನು. ಚಂದ್ರನೆಂಬ ಸ್ನೇಹಭರಿತ ಆಕಾಶಕಾಯವು ಇಲ್ಲಿಯವರೆಗೆ ಅವರಿಗೆ ತುಂಬಾ ದೂರದ ಬಿಂಬವಾಗಿತ್ತು. ಆದರೆ ಒಂದು ದಿನ ಚಂದ್ರನಲ್ಲಿಗೆ ಹೋಗಬೇಕು ಎಂಬುದು ಇವರ ಕನಸಾಗಿದೆ. ಈ ನಿಟ್ಟಿನಲ್ಲಿ ಈ ಮಕ್ಕಳು ಇಸ್ರೋ ನಿಲ್ದಾಣದಲ್ಲಿ ಚಂದ್ರನ ಕುರಿತು ಹೊಸ ಅನುಭವವನ್ನು ಪಡೆದುಕೊಂಡಿದ್ದಾರೆ.
10 ನೇ ತರಗತಿಯ ವಿದ್ಯಾರ್ಥಿಗಳಾದ ಸ್ವಪ್ನಿಲ್ ಮತ್ತು ಸ್ವಪ್ನಿಲಾ ಅವರು ಮೊನ್ನೆಯಷ್ಟೇ ಆಂಧ್ರಪ್ರದೇಶದ ಇಸ್ರೋ ನಿಲ್ದಾಣಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರು ಚಂದ್ರನ ಕಲ್ಪನೆಯನ್ನು ವಾಸ್ತವದಲ್ಲಿ ಪ್ರತಿಬಿಂಬಿಸುವ ಬೃಹತ್ ರಾಕೆಟ್ ಅನ್ನು ನೋಡಿದರು. ಅಲ್ಲಿ ಅವರಿಗೆ ಚಂದ್ರನ ಕಥೆಯನ್ನು ಮತ್ತೊಮ್ಮೆ ಹೇಳುವ ಸದವಕಾಶ ಸಿಕ್ಕಿತು, ಆದರೆ ಆ ಕಥೆ ಅಜ್ಜಿ ಹೇಳಿದ ಕಥೆಗಿಂತ ಭಿನ್ನವಾಗಿತ್ತು.
“ಉಡಾವಣೆಯು ನಮ್ಮ ಕಲ್ಪನೆಯಲ್ಲಿ ಮಾತ್ರ ಇತ್ತು. ನಾವು ನಮ್ಮ ಅಜ್ಜಿಯಿಂದ ಸದಾ ಚಂದ್ರನ ಬಗೆಗಿನ ಕಥೆಗಳನ್ನು ಕೇಳುತ್ತಿದ್ದೆವು. ಆದರೆ ಇಂದು ನಾವು ಅದನ್ನು (ರಾಕೆಟ್) ನೈಜವಾಗಿ ನೋಡಿದಾಗ, ನಾವು ಆಶ್ಚರ್ಯಚಕಿತಗೊಂಡೆವು. ಅದು ಅದ್ಭುತವಾಗಿದೆ” ಎಂದು ಸ್ವಪ್ನಿಲ್ ಹೇಳಿದ್ದಾನೆ. “ಇಂದು ನಮ್ಮ ಒಂದು ಕನಸು ನನಸಾಗಿದೆ. ನಾವು ಜಿಎಸ್ಎಲ್ವಿ ಎಂಕೆ -3 ರಾಕೆಟ್ ಅನ್ನು ನೋಡಿದೆವು, ಆ ರಾಕೆಟ್ ಬಾಹ್ಯಾಕಾಶಕ್ಕೆ ಮಿಷನ್ ಅನ್ನು ಕೊಂಡೊಯ್ಯುತ್ತದೆ. ಅದು ತುಂಬಾ ದೊಡ್ಡದಾಗಿದೆ” ಎಂದು ಸ್ವಪ್ನಿಲಾ ಹೇಳಿದ್ದಾಳೆ.
ಚಂದ್ರಯಾನ -2 ಯೋಜನೆಯ ಭಾಗವಾಗಿರುವ 110 ಮಕ್ಕಳಲ್ಲಿ ಇವರಿಬ್ಬರು ಕೂಡ ಸೇರಿದ್ದಾರೆ. ಶ್ರೀಹರಿಕೋಟದಲ್ಲಿ ವಿಜ್ಞಾನಿಗಳು ಚಂದ್ರಯಾನ-2 ಬಗೆಗಿನ ಸಂಪೂರ್ಣ ವಿವರವನ್ನು ಈ ಮಕ್ಕಳಿಗೆ ವಿವರಿಸಿದ್ದಾರೆ.
“ಚಂದ್ರಯಾನ -2 ವಾಹನವನ್ನು ಲಾಂಚ್ ಪ್ಯಾಡ್ಗೆ ಸಾಗಿಸುವ ಟ್ರ್ಯಾಕ್ ಅನ್ನು ನಾವು ನೋಡಿದ್ದೇವೆ. ಉಡಾವಣಾ ನಿಯಂತ್ರಣ ಕೇಂದ್ರ ಮತ್ತು ಮುಖ್ಯ ನಿಯಂತ್ರಣ ಕೇಂದ್ರವನ್ನು ನಾವು ನೋಡಿದ್ದೇವೆ ”ಎಂದು ಸ್ವಪ್ನಿಲಾ ಹೇಳಿದ್ದಾಳೆ.
ಇಸ್ರೋವು ಮಕ್ಕಳಿಗಾಗಿ “ಯುವ ವಿಜ್ಞಾನಿ ಕಾರ್ಯಕ್ರಮ’ವನ್ನು (YUVIKA) ಈ ವರ್ಷದಿಂದ ಆರಂಭಿಸಿದೆ.
ಶೈಕ್ಷಣಿಕ, ಕ್ರೀಡೆ ಮತ್ತು ಪಠ್ಯೇತರ ವಿಷಯಗಳ ಮೇಲೆ ಹಲವು ಸುತ್ತಿನ ಪರೀಕ್ಷೆಗೊಳಪಟ್ಟ ನಂತರ ಸ್ವಪ್ನಿಲ್ ಮತ್ತು ಸ್ವಪ್ನಿಲಾ ಅವರನ್ನು ಇಸ್ರೋ ನಿಲ್ದಾಣಕ್ಕೆ ಭೇಟಿ ಕೊಡಲು ಆಯ್ಕೆ ಮಾಡಲಾಗಿತ್ತು. 7 ನೇ ವಯಸ್ಸಿನಲ್ಲಿರುವಾಗಲೇ ಇವರಿಬ್ಬರೂ ಈಗಾಗಲೇ ಸಹ-ಪೈಲಟ್ಗಳಾಗಿ ಹಿಂಡನ್ ಏರ್ ಬೇಸ್ನಲ್ಲಿರುವ ಮೈಕ್ರೊಲೈಟ್ ವಿಮಾನವನ್ನು ಹಾರಿಸಿದ್ದಾರೆ.
ಕುಟುಂಬ ಸಮೇತವಾಗಿ ಚಂದ್ರಯಾನ-2 ಉಡಾವಣೆಯನ್ನು ನೋಡುವುದಾಗಿ ಈ ಮಕ್ಕಳು ಹೇಳಿಕೊಂಡಿದ್ದಾರೆ. ಮಾಜಿ ಪ್ರಧಾನಿ ಅಬ್ದುಲ್ ಕಲಾಂ ಅವರು ಈ ಮಕ್ಕಳೊಂದಿಗೆ ಒಂದಿಷ್ಟು ಗಂಟೆ ಮಾತುಕತೆಯನ್ನು ನಡೆಸಿದ್ದರು ಎಂದು ಹೇಳಲಾಗಿದೆ.
ಚಂದ್ರಯಾನ-2 ಇಂದು ಮುಂಜಾನೆ 2.51ರ ಸುಮಾರಿಗೆ ಉಡಾವಣೆಗೊಳ್ಳುವುದೆಂದು ಸಮಯ ನಿಗದಿಯಾಗಿತ್ತು, ಆದರೆ ಉಡಾವಣಾ ವಾಹಕದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದ ಹಿನ್ನಲೆಯಲ್ಲಿ ಉಡಾವಣೆಯನ್ನು ತಡೆಹಿಡಿಯಲಾಗಿದೆ. ಮುಂದಿನ ಉಡಾಣಾ ದಿನಾಂಕವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಇಸ್ರೋ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.