ಬೆಂಗಳೂರು: ಕರ್ನಾಟಕದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದ್ದು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಬೀಳುವ ಹಂತ ತಲುಪಿದೆ. ಜೆಡಿಎಸ್, ಕಾಂಗ್ರೆಸ್ ಪಕ್ಷದ ಹಲವು ಮಂದಿ ಶಾಸಕರು ರಾಜೀನಾಮೆ ನೀಡುವ ಸಲುವಾಗಿ ಸ್ಪೀಕರ್ ಕಛೇರಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.
ಸುಮಾರು 10 ಮಂದಿ ಶಾಸಕರು ರಾಜೀನಾಮೆ ನೀಡಲು ಸಿದ್ಧರಾಗಿದ್ದು, ಇದರಲ್ಲಿ 8 ಮಂದಿ ಕಾಂಗ್ರೆಸ್ ಪಕ್ಷದವರು ಮತ್ತು 2 ಮಂದಿ ಜೆಡಿಎಸ್ನವರು ಎಂದು ಹೇಳಲಾಗಿದೆ. ಒಂದು ವೇಳೆ ಇವರು ರಾಜೀನಾಮೆ ನೀಡಿದರೆ ಕರ್ನಾಟಕ ವಿಧಾನಸಭೆಯ ಸ್ಥಾನ 215 ಕ್ಕೆ ಕುಸಿಯಲಿದೆ.
ಎಚ್. ವಿಶ್ವನಾಥ್ (ಜೆಡಿಎಸ್), ಮಹೇಶ್ ಕುಮಟಳ್ಳಿ (ಕಾಂಗ್ರೆಸ್), ಬಿ.ಸಿ.ಪಾಟೀಲ್ (ಕಾಂಗ್ರೆಸ್), ರಮೇಶ್ ಜಾರಕಿಹೊಳಿ (ಕಾಂಗ್ರೆಸ್), ಶಿವರಾಮ್ ಹೆಬ್ಬಾರ್ (ಕಾಂಗ್ರೆಸ್), ನಾರಾಯಣ್ ಗೌಡ (ಜೆಡಿಎಸ್), ಗೋಪಾಲಯ್ಯ (ಜೆಡಿಎಸ್), ರಾಮಲಿಂಗಾರೆಡ್ಡಿ (ಕಾಂಗ್ರೆಸ್), ಪ್ರತಾಪ್ ಗೌಡ ಪಾಟೀಲ್ (ಕಾಂಗ್ರೆಸ್), ಎಸ್.ಟಿ. ಸೋಮಶೇಖರ್ (ಕಾಂಗ್ರೆಸ್), ವಿಧಾನಸೌಧದಲ್ಲಿನ ಸ್ಪೀಕರ್ ಕಚೇರಿಗೆ ಆಗಮಿಸಿದ್ದಾರೆ. ಇವರೆಲ್ಲರೂ ರಾಜೀನಾಮೆ ನೀಡಲು ಅಲ್ಲಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.
ಆದರೆ ಇವರು ಆಗಮಿಸುವ ಸುದ್ದಿ ತಿಳಿಯುತ್ತಲೇ ಸ್ಪೀಕರ್ ತಮ್ಮ ಕಛೇರಿಯಿಂದ ಕಾಲ್ಕಿತ್ತು, ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಇವರು ಆಗಮಿಸುವವರೆಗೂ ರಾಜೀನಾಮೆ ನೀಡಲು ಬಂದರು ಕಾದು ಕುಳಿತುಕೊಳ್ಳಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.