ಮುಂಬಯಿ: ಹಾಲಿನ ಖಾಲಿ ಪ್ಲಾಸ್ಟಿಕ್ ಪ್ಯಾಕ್ಗಳನ್ನು ರಿಸೈಕ್ಲಿಂಗ್ ಮಾಡುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಪ್ಲಾಸ್ಟಿಕ್ ಪ್ಯಾಕ್ ಅನ್ನು ವಾಪಾಸ್ ಮಾಡುವವರಿಗೆ 50 ಪೈಸೆ ರಿಫಂಡ್ ನೀಡಲು ನಿರ್ಧರಿಸಿದೆ.
ಈಗಾಗಲೇ ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ. ಆದರೆ ಹಾಲು ಇನ್ನೂ ಪ್ಲಾಸ್ಟಿಕ್ ಪ್ಯಾಕಿನಲ್ಲೇ ಸಿಗುತ್ತಿದೆ. ಇದಕ್ಕೆ ಪರ್ಯಾಯವಾದ ವ್ಯವಸ್ಥೆಯನ್ನು ಮಾಡಲಾಗಿಲ್ಲ. ಈ ಕಾರಣದಿಂದಾಗಿ ಗ್ರಾಹಕರಿಂದ ಹಾಲಿನ ಖಾಲಿ ಪ್ಯಾಕ್ಗಳನ್ನು ವಾಪಾಸ್ ಪಡೆದು ರಿಸೈಕಲ್ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ಪ್ಲಾಸ್ಟಿಕ್ ತ್ಯಾಜ್ಯ ಇನ್ನಷ್ಟು ಕಡಿಮೆಯಾಗುತ್ತದೆ.
ಹಾಲಿನ ಖಾಲಿ ಪ್ಯಾಕ್ ಅನ್ನು ರಿಟೇಲರ್ಗಳಿಗೆ ವಾಪಾಸ್ ಮಾಡಿದಾಗ ಒಂದು ಪ್ಯಾಕಿಗೆ 50 ಪೈಸೆ ಹಣವನ್ನು ಅವರು ಗ್ರಾಹಕರಿಗೆ ನೀಡಲಿದ್ದಾರೆ.
ಹಾಲಿನ ಪ್ಲಾಸ್ಟಿಕ್ ಪ್ಯಾಕ್ಗಳ ರಿಸೈಕ್ಲಿಂಗ್ ಅನ್ನು ಉತ್ತೇಜಿಸುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮಹಾರಾಷ್ಟ್ರದ ಪರಿಸರ ಸಚಿವ ರಾಮದಾಸ್ ಕದಮ್ ತಿಳಿಸಿದ್ದಾರೆ.
2018ರ ಜೂನ್ 23 ರಿಂದ ಮಹಾರಾಷ್ಟ್ರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧವನ್ನು ಮಾಡಲಾಗಿದೆ.
ಎಲ್ಲಾ ರಾಜ್ಯಗಳಲ್ಲೂ ಈ ಕ್ರಮ ಜಾರಿಗೆ ಬಂದರೆ ಪ್ಲಾಸ್ಟಿಕ್ ತ್ಯಾಜ್ಯ ಇನ್ನಷ್ಟು ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡರೆ ಒಳ್ಳೆಯದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.