ದಿಸ್ಪುರ್: ಅಸ್ಸಾಂ ಪೊಲೀಸರು ಬುಧವಾರ ಬಾಂಗ್ಲಾದೇಶ ಮೂಲದ 27 ವರ್ಷದ ಐನುಲ್ ಹಕ್ ಎಂಬಾತನನ್ನು ಧುಬ್ರಿ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಈತ ಬಾಂಗ್ಲಾದಿಂದ ಭಾರತಕ್ಕೆ ಬಂದು ಅಕ್ರಮವಾಗಿ ನೆಲೆಸಿದ ಹಿನ್ನಲೆಯಲ್ಲಿ ಈತನನ್ನು ಬಂಧಿಸಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಧುಬ್ರಿಯ ಚಾಗೋಲಿಯಾ ಪ್ರದೇಶದ ಸ್ಥಳೀಯ ನಿವಾಸಿಗಳು ಅನುಮಾನಾಸ್ಪದ ರೀತಿಯಲ್ಲಿ ಹಕ್ ತಿರುಗಾಡುತ್ತಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ, ಬಳಿಕ ಪೊಲೀಸರು ಈತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹಕ್ ಬಾಂಗ್ಲಾದೇಶದ ಠಾಕುರ್ಗಾಂವ್ ಜಿಲ್ಲೆಯ ಪಿರ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಸುಂದರಿಯಾ ಗ್ರಾಮಕ್ಕೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ. ಈತನ ತಂದೆಯ ಹೆಸರು ಮೊಹಮ್ಮದ್ ಸಾರಿಫುದ್ದೀನ್ ಶೇಖ್ ಎಂದು ಅಸ್ಸಾಂ ಪೊಲೀಸ್ ಇನ್ಸ್ಪೆಕ್ಟರ್ ಬಿಧಾನ್ ಬಸುಮಾಟರಿ ತಿಳಿಸಿದ್ದಾರೆ.
ಸ್ಥಳೀಯ ಪತ್ರಕರ್ತರೊಂದಿಗೆ ಮಾತನಾಡುವಾಗ, ಹಕ್ ತಾನು ಇತರ 10-11 ಜನರೊಂದಿಗೆ 2013 ರ ಮಾರ್ಚ್ ತಿಂಗಳಲ್ಲಿ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಗಡಿ ಮೂಲಕ ಭಾರತಕ್ಕೆ ಪ್ರವೇಶಿಸಿದ್ದೇನೆ. 4,200 ಟಕಾಸ್ (ಸುಮಾರು 3,270 ರೂ.) ಬಾರ್ಡರ್ ಗಾರ್ಡ್ ಬಾಂಗ್ಲಾದೇಶದ ಸಿಬ್ಬಂದಿಗೆ ಲಂಚ ಪಾವತಿಸಿದ ನಂತರ ಅವರು ನನಗೆ ಭಾರತಕ್ಕೆ ಪ್ರವೇಶಿಸಲು ಅನುವು ಮಾಡಿಕೊಟ್ಟರು ಎಂದಿದ್ದಾನೆ.
ಭಾರತಕ್ಕೆ ಪ್ರವೇಶಿಸಿದ ನಂತರ, ಹಕ್ ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯಲ್ಲಿ ಆಜಾದ್ ಅಲಿ ಎಂಬ ವ್ಯಕ್ತಿಯ ಸಹಾಯದಿಂದ ಅಕ್ರಮವಾಗಿ ಆಧಾರ್ ಕಾರ್ಡ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ, ಅಲಿ ಈತನ ದಾಖಲೆಯಲ್ಲಿ ತಂದೆಯಾಗಿ ಕಾಣಿಸಿಕೊಂಡಿದ್ದಾನೆ. ಆತನ ಮನೆಯ ವಿಳಾಸವನ್ನೇ ಈತ ಆಧಾರ್ಗೆ ದಾಖಲೆಯಾಗಿ ನೀಡಿದ್ದಾನೆ.
“ಪಶ್ಚಿಮ ಬಂಗಾಳದಿಂದ ನಾನು ದೆಹಲಿ, ಹರಿಯಾಣ ಮತ್ತು ರಾಜಸ್ಥಾನಗಳಿಗೆ ಹೋಗಿದ್ದೆ, ಅಲ್ಲಿ ನಾನು ಕಾರ್ಮಿಕನಾಗಿ ಕೆಲಸ ಮಾಡಿದ್ದೇನೆ. ನಾನು ಅಸ್ಸಾಂನ ಬೊಂಗೈಗಾಂವ್ ಜಿಲ್ಲೆಯ ಹುಡುಗಿಯೊಬ್ಬಳನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಬಳಿಕ ಮದುವೆಯಾಗಿದ್ದೆ. ನಮಗೆ ಮಗು ಇದೆ, ”ಎಂದು ಹಕ್ ಬಂಧನದ ನಂತರ ಹೇಳಿದ್ದಾನೆ.
ಈತ ಪಾನ್ ಕಾರ್ಡ್ ಅನ್ನು ಸಹ ಪಡೆದುಕೊಂಡಿದ್ದಾನೆ ಮತ್ತು ಅಸ್ಸಾಂನ ಬೊಂಗೈಗಾಂವ್ನ ನಿವಾಸಿ ಶಫಿಯಾ ಬೇಗಂ ಎಂಬಾಕೆಯನ್ನು ಈತ ವಿವಾಹವಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಕ್ ನನ್ನು ಜೂನ್ 26ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಮತ್ತು ಪ್ರಸ್ತುತ ಆತನನ್ನು ಜ್ಯುಡಿಶಿಯಲ್ ಕಸ್ಟಡಿಯಲ್ಲಿ ಇಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.