ನವದೆಹಲಿ: “ವಿದೇಶಾಂಗ ಸಚಿವಾಲಯವು ಕಳೆದ ಐದು ವರ್ಷಗಳಲ್ಲಿ ಒದಗಿಸಿದ ಪಾಸ್ಪೋರ್ಟ್ ಸೇವೆಯಿಂದಾಗಿ ಪಾಸ್ಪೋರ್ಟ್ ಕ್ರಾಂತಿಯಾಗಿದೆ. ಪ್ರಧಾನಮಂತ್ರಿಯವರ ನೇತೃತ್ವದಲ್ಲಿ, ಈ ಸಚಿವಾಲಯವು ಕೈಗೊಂಡ ವಿವಿಧ ಕಾರ್ಯಕ್ರಮಗಳು ದೇಶ ಮತ್ತು ವಿದೇಶಗಳಲ್ಲಿರುವ ನಮ್ಮ ನಾಗರಿಕರಿಗೆ ಪಾಸ್ಪೋರ್ಟ್ ಸೇವೆಗಳ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿವೆ. ನಾಗರಿಕ ಕೇಂದ್ರಿತ ಸೇವೆಗಳನ್ನು ತಲುಪಿಸುವಲ್ಲಿ ಸುಧಾರಣಾ ಪ್ರಕ್ರಿಯೆಯನ್ನು ನಮ್ಮ ಸಚಿವಾಲಯದ ರಾಜ್ಯ ಖಾತೆ ಸಚಿವರು ಮತ್ತು ನಾನು ಮುಂದುವರಿಸುತ್ತೇನೆ ಎಂಬ ಭರವಸೆಯನ್ನು ನೀಡುತ್ತೇನೆ ”ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.
7 ನೇ ಪಾಸ್ಪೋರ್ಟ್ ಸೇವಾ ದಿವಾಸ್ ಅಂಗವಾಗಿ ನವದೆಹಲಿಯಲ್ಲಿ ನಡೆದ ಎರಡು ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಾಸ್ಪೋರ್ಟ್ ಸೇವಾ ದಿವಾಸ್ ಅನ್ನು 2012 ರಿಂದ ವಿದೇಶಾಂಗ ಸಚಿವಾಲಯ ಆಚರಿಸುತ್ತಾ ಬರುತ್ತಿದೆ. 7 ನೇ ಪಾಸ್ಪೋರ್ಟ್ ಸೇವಾ ದಿವಸ್ ಆಚರಣೆಯನ್ನು ನವದೆಹಲಿಯಲ್ಲಿ ಜೂನ್ 24 ಮತ್ತು ಜೂನ್ 25 ರಂದು ಆಯೋಜನೆಗೊಳಿಸಲಾಗಿದೆ. ಈ ಸಮಾರಂಭವನ್ನು ಇಂದು ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಉದ್ಘಾಟಿಸಿದರು.
Taking passport services closer to the people
EAM @DrSJaishankar inaugurated the Passport Seva Diwas by felicitating Passport officials. Underscored that revolution in passport services in the last five years will continue to be accorded high priority by #MEA #Passportrevolution pic.twitter.com/cyAIF70Riw
— Raveesh Kumar (@MEAIndia) June 24, 2019
ಅಂಚೆ ಇಲಾಖೆಯ ಕಾರ್ಯದರ್ಶಿ ಅನಂತ್ ನಾರಾಯಣ್ ನಂದಾ, ಸಿಪಿವಿ ಮತ್ತು ಒಐಎ ಸಂಜೀವ್ ಅರೋರಾ ಮತ್ತು ಸಿಪಿಒ ಮತ್ತು ಪಿಎಸ್ ಪಿ ಜಂಟಿ ಕಾರ್ಯದರ್ಶಿ ಅರುಣ್ ಕುಮಾರ್ ಚಟರ್ಜಿ ಕಾರ್ಯಕ್ರಮದಲ್ಲಿ ಭಾಗಿಯಾದರು.
ಉತ್ತಮವಾಗಿ ಕಾರ್ಯನಿರ್ವಹಿಸಿ ಪಾಸ್ಪೋರ್ಟ್ ಕಚೇರಿಗಳಿಗೆ ಮತ್ತು ಅಧಿಕಾರಿಗಳಿಗೆ ಪ್ರಶಸ್ತಿಗಳನ್ನು ಪ್ರದಾನಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.