
2020 ಡಿಸೆಂಬರ್ 23 ರಂದು, ಪಂಜಾಬ್ ವಿಭಜನಾ ಸಿದ್ಧಾಂತದ ವಿರುದ್ಧ ನಿಲುವು ಹೊಂದಿದ್ದ ಆಕ್ಲ್ಯಾಂಡ್ನ ರೇಡಿಯೋ ಹೋಸ್ಟ್ ಆಗಿದ್ದ ಹರ್ನೇಕ್ ಸಿಂಗ್ ಅವರ ಡ್ರೈ ವ್ವೇನಲ್ಲಿನ ಮನೆಯ ಮೇಲೆ ಧಾರ್ಮಿಕ ಉಗ್ರಗಾಮಿಗಳ ಗುಂಪೊಂದು ದಾಳಿ ಮಾಡಿ ಹಲ್ಲೆ ನಡೆಸಿತು. ಈ ದಾಳಿಯಿಂದ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು. ಈ ಹತ್ಯಾ ಪ್ರಯತ್ನಕ್ಕಾಗಿ 2023 ಡಿಸೆಂಬರ್ನಲ್ಲಿ ನ್ಯೂಜಿಲೆಂಡ್ ನ್ಯಾಯಾಲಯವು ಮೂವರು ಉಗ್ರಗಾಮಿಗಳನ್ನು ಶಿಕ್ಷೆಗೆ ಒಳಪಡಿಸಿತು. 27 ವರ್ಷದ ಸರ್ವಜೀತ್ ಸಿಧು ಹತ್ಯಾ ಪ್ರಯತ್ನ ಒಪ್ಪಿಕೊಂಡು ಶಿಕ್ಷೆಗೊಳಗಾದ. 44 ವರ್ಷದ ಸುಖ್ಪ್ರೀತ್ ಸಿಂಗ್ ವಿರುದ್ಧ ಸಿಧುಗೆ ಸಹಾಯ ಮಾಡಿದ್ದಕ್ಕಾಗಿ ದೋಷಿ ಎಂದು ತೀರ್ಪು ಬಂತು. ಅಲ್ಲದೇ ದಾಳಿಯ ಯೋಜಕನಾಗಿದ್ದ 48 ವರ್ಷದ ಆಕ್ಲ್ಯಾಂಡ್ ನಿವಾಸಿ ಹರ್ನೇಕ್ ಸಿಂಗ್ ವಿರುದ್ಧವೂ ಶಿಕ್ಷೆ ಪ್ರಕಟವಾಯಿತು.
ಇದು ನ್ಯೂಜಿಲೆಂಡ್ನಲ್ಲಿ ಪಂಜಾಬ್ ವಿಭಜನೆಗೆ ಸಂಬಂಧಿಸಿದ ಕೆಲವು ಅಪರೂಪದ ಹಿಂಸಾಚಾರದ ಕೇಸುಗಳಲ್ಲಿ ಒಂದು. ಇತ್ತೀಚಿಗೆ, ಅಮೆರಿಕಾದಲ್ಲಿ ಸ್ಥಾಪಿತವಾದ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಘಟನೆಯು 2024ರಲ್ಲಿ ಆಕ್ಲ್ಯಾಂಡ್ನ ಆಟಿಯಾ ಸ್ಕ್ವೇರ್ನಲ್ಲಿ ಒಂದು ‘ಜನಾಭಿಪ್ರಾಯ ಸಂಗ್ರಹ’ವನ್ನು ಆಯೋಜಿಸಿತ್ತು. ಈ ಜನಾಭಿಪ್ರಾಯ ಸಂಗ್ರಹಗಳು ಕಾನೂನುಬದ್ಧವಲ್ಲದಿದ್ದರೂ, ಪಂಜಾಬ್ನ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಸಾಂಕೇತಿಕವಾಗಿ ಉಳಿಸಿಕೊಳ್ಳುವ ಉದ್ದೇಶವನ್ನು ಹೊಂದಿದ್ದವು.
ಹಾಗಾದರೆ ಪಂಜಾಬ್ ವಿಭಜನಾ ಚಳವಳಿಯು ನ್ಯೂಜಿಲೆಂಡ್ ಮತ್ತು ಇತರ ಪಶ್ಚಿಮ ದೇಶಗಳಿಗೆ ಹೇಗೆ ಹರಡಿತು? “ಖಾಲಿಸ್ಥಾನ್” ಹೆಸರು ಮೊದಲು ಭಾರತದಲ್ಲಿ ಅಥವಾ ಬ್ರಿಟನ್ ಅಥವಾ ಕೆನಡಾದಲ್ಲಿ ಅಲ್ಲ, ಬದಲಿಗೆ ನ್ಯೂಯಾರ್ಕ್ನಲ್ಲಿ ಬೆಳಕಿಗೆ ಬಂದಿತ್ತು ಎಂಬುದು ಗಮನಾರ್ಹ ವಿಷಯ. ಪಂಜಾಬ್ ವಿಭಜನಾ ಚಳವಳಿಯ ಆರಂಭ 1971ರಿಂದಲೇ ಆರಂಭಗೊಂಡ ಬಗೆ ರೋಚಕವೇ ಆಗಿದೆ
ಪ್ರತ್ಯೇಕ ರಾಷ್ಟ್ರದ ಆಕಾಂಕ್ಷೆ ಪಂಜಾಬ್ನಲ್ಲಿ ಅಲ್ಲ, ನ್ಯೂಯಾರ್ಕ್ನಲ್ಲಿ ಚಿಗುರೊಡೆದಿತ್ತು
1971 ಅಕ್ಟೋಬರ್ನ ಒಂದು ಬೆಳಗ್ಗೆ, ಜನಜನಿತ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಅಮೆರಿಕನ್ನರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಜಾಹೀರಾತೊಂದು ಪ್ರಕಟವಾಯಿತು. ಇದನ್ನು ವಿದೇಶದಲ್ಲಿದ್ದ ಒಬ್ಬ ಅಪರಿಚಿತ ಭಾರತೀಯ ರಾಜಕಾರಣಿ ಜಗಜಿತ್ ಸಿಂಗ್ ಚೌಹಾನ್ (ಮಾಜಿ ಪಂಜಾಬ್ ಹಣಕಾಸು ಸಚಿವ) ಪ್ರಕಟಿಸಿದ್ದ. ಭಾರತದಲ್ಲಿ ಸ್ಥಳೀಯ ಚುನಾವಣೆಯಲ್ಲಿ ಸೋತ ನಂತರ, ಅವನು ನ್ಯೂಯಾರ್ಕ್ ಟೈಮ್ಸ್ನಲ್ಲಿ ಜಾಹೀರಾತು ನೀಡಿ “ಖಾಲಿಸ್ಥಾನ್” ಎಂಬ ಪ್ರತ್ಯೇಕ ಸಿಖ್ ರಾಷ್ಟ್ರದ ಸೃಷ್ಟಿಗೆ ಕರೆ ನೀಡಿದ್ದ.
ಭಾರತದಿಂದ ಹೊರಟು ಹೋದ ನಂತರ, ಚೌಹಾನ್ 1971ರಲ್ಲಿ ಲಂಡನ್ಗೆ ತೆರಳಿ, ಜಾಗತಿಕ ಸಿಖ್ ರಾಜಕೀಯವನ್ನು ಮರುರೂಪಿಸುವ ಗುರಿಯನ್ನಿಟ್ಟುಕೊಂಡ. ಪಶ್ಚಿಮ ದೇಶಗಳ ಗಮನ ಸೆಳೆಯಲು, ಅವನು ಜಾಗತಿಕ ಮಾಧ್ಯಮದ ಕೇಂದ್ರವಾದ ನ್ಯೂಯಾರ್ಕ್ನಲ್ಲಿ ಜಾಹೀರಾತು ನೀಡಿದ್ದ. ನ್ಯೂಯಾರ್ಕ್ ಟೈಮ್ಸ್ ಜಾಹೀರಾತಿನ ನಂತರ ಆತ ಸಂಯುಕ್ತ ರಾಷ್ಟ್ರಗಳಲ್ಲಿ ಪ್ರತಿಭಟನೆಗೂ ಕರೆ ನೀಡಿದ್ದ. ಆದರೆ, ಹೆಚ್ಚಿನ ಜನರು ಆ ಪ್ರತಿಭಟನೆಗೆ ಬರಲಿಲ್ಲ.
ಅಷ್ಟಕ್ಕೆ ನಿಲ್ಲದ ಆತ “ಖಾಲಿಸ್ಥಾನ್”ನ ಅಧ್ಯಕ್ಷನಾಗಿ ತನ್ನನ್ನು ತಾನು ಘೋಷಿಸಿಕೊಂಡ, ಅಕ್ಷರಶಃ ಭಿತ್ತಿ ಪತ್ರಗಳನ್ನು ಹಾಕುವುದು, ಸಾಂಕೇತಿಕ ಪಾಸ್ಪೋರ್ಟ್ಗಳು, ಅಂಚೆಚೀಟಿಗಳು ಮತ್ತು ಕರೆನ್ಸಿ (ಖಾಲಿಸ್ತಾನಿ ಡಾಲರ್)ಗಳನ್ನು ಮುದ್ರಿಸಲು ಆರಂಭಿಸಿದ. ಈ ಸಾಂಕೇತಿಕ ಕ್ರಿಯೆಗಳ ಮೂಲಕ ಅವನು ವಿಭಜನಾ ಆಲೋಚನೆಗೆ ಹೆಚ್ಚಿನ ಕಾನೂನುಬದ್ಧತೆ ನೀಡಲು ಪ್ರಯತ್ನಿಸಿದ. ಆದರೆ ಚಳವಳಿಯು ಎಂದಿಗೂ ದೊಡ್ಡದಾಗಿ ಬೆಳೆಯಲೇ ಇಲ್ಲ.
ಕೇವಲ ಸಾಂಕೇತಿಕವಾಗಿ ಉಳಿದ ಆಲೋಚನೆ
1970ರ ದಶಕದಿಂದ ಇಂದಿನವರೆಗೆ, ಪಶ್ಚಿಮ ದೇಶಗಳಲ್ಲಿ ಈ ವಿಭಜನಾ ಆಲೋಚನೆಯ ಬೆಳವಣಿಗೆಯನ್ನು ಗಮನಿಸಿದರೆ, ಅದನ್ನು ಮೂರು ಅಲ್ಪಪ್ರಮಾಣದ ಭಾಗಗಳಾಗಿ ವರ್ಗೀಕರಿಸಬಹುದು. ಮೊದಲನೆಯದು ಕೆನಡಾ ಮತ್ತು ಬ್ರಿಟನ್ನಲ್ಲಿ SFJ ನಂತಹ ಸಂಘಟನೆಗಳ ಉದಯ, ಇವು ಭಾರತೀಯ ರಾಜದೂತರು ಮತ್ತು ನಾಯಕರಿಗೆ ಬೆದರಿಕೆ ಹಾಕುವುದು ಬಿಟ್ಟರೆ ಮಹತ್ವದ ಯಶಸ್ಸನ್ನು ಇದುವರೆಗೆ ಸಾಧಿಸಿಲ್ಲ. ಎರಡನೆಯದು, ಈ ಸಂಘಟನೆಗಳು ಪಶ್ಚಿಮ ದೇಶಗಳಲ್ಲಿ ಅಂತರರಾಷ್ಟ್ರೀಯವಾಗಿ ಕಾನೂನುಬದ್ಧವಲ್ಲದ ಜನಾಭಿಪ್ರಾಯ ಸಂಗ್ರಹಗಳನ್ನು ನಡೆಸುತ್ತವೆ, ಭಾರತವನ್ನು ಒಡೆದು ಪಂಜಾಬ್ಗೆ ಪ್ರತ್ಯೇಕ ರಾಷ್ಟ್ರ ಸೃಷ್ಟಿಸುವ ಸಾಂಕೇತಿಕ ಆಕಾಂಕ್ಷೆಯನ್ನು ಉಳಿಸಿಕೊಳ್ಳುತ್ತವೆ. ಮೂರನೆಯದು, ಈ ಸಂಘಟನೆಗಳು ಕೆಲವೊಮ್ಮೆ ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿನ ಹಿಂದೂ ದೇವಾಲಯಗಳು ಮತ್ತು ಭಾರತದ ದೂತವಾಸ ಕಚೇರಿಗಳ ಮೇಲೆ ದಾಳಿ ನಡೆಸುತ್ತವೆ.
ಹರ್ನೇಕ್ ಸಿಂಗ್ ಮೇಲಿನ ದಾಳಿಯ ಪ್ರಯತ್ನವು ಈ ಸಾಂಕೇತಿಕತೆಯ ಅತ್ಯಂತ ಅಪಾಯಕಾರಿ ಷಡ್ಯಂತ್ರವನ್ನು ಬಹಿರಂಗಪಡಿಸಿತು. ಪಂಜಾಬ್ನಲ್ಲಿ ಯಾವುದೇ ಆಧಾರವಿಲ್ಲದೆ ಬಸವಳಿದ ವಿಭಜನೆಯ ಆಲೋಚನೆಯು ವಿದೇಶದಲ್ಲಿ ಉಗ್ರಗಾಮಿ ಕ್ರಿಯೆಯಾಗಿ ಪರಿವರ್ತನೆಯಾಗಿದ್ದನ್ನು ಇದು ಸೂಚಿಸಿತು. ಈ ವಿಭಜನಾ ಸಿದ್ಧಾಂದ ಈಗ ಪಶ್ಚಿಮ ಪ್ರಜಾಪ್ರಭುತ್ವಗಳಲ್ಲಿ ಕೂಡ ಕ್ಷೀಣಿಸುತ್ತಿದೆ ಎಂಬುದು ಕೂಡ ಸ್ಪಷ್ಟವಾಗಿ ಕಾಣುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



