ನವದೆಹಲಿ: ವಿಶ್ವಸಂಸ್ಥೆ ಜೂನ್ 18 ರಂದು ಬಿಡುಗಡೆ ಮಾಡಿದ ಒಂದು ವರದಿಯ ಪ್ರಕಾರ, ಭಾರತದ ಮನೆಗಳಲ್ಲಿ ಬಯಲು ಶೌಚ ಭಾರಿ ಪ್ರಮಾಣದಲ್ಲಿ ಇಳಿಮುಖವಾಗಿದೆ. 2000-2017 ರ ನಡುವೆ ಸುಮಾರು 650 ದಶಲಕ್ಷ ಭಾರತೀಯ ಜನಸಂಖ್ಯೆಯು ಬಯಲು ಶೌಚವನ್ನು ಬಿಟ್ಟು ಶೌಚಾಲಯಗಳಿಗೆ ತಮ್ಮನ್ನು ತಾವು ಬದಲಾಯಿಸಿಕೊಂಡಿದೆ.
ಅಲ್ಲದೇ, ಯುನಿಸೆಫ್ ಮತ್ತು WHOನ ಜಂಟಿ ಮಾನಿಟರಿಂಗ್ ಪ್ರೋಗ್ರಾಮ್ ವರದಿಯ ಪ್ರಕಾರ, ತಮಗೆ 30 ನಿಮಿಷಗಳಿಗಿಂತಲೂ ಕಡಿಮೆಯಿರುವ ವ್ಯಾಪ್ತಿಯಲ್ಲಿ ಸುರಕ್ಷಿತ ಕುಡಿಯುವ ನೀರಿನ ಮೂಲವನ್ನು ಲಭ್ಯವಾಗಿಸಿಕೊಂಡವರ ಸಂಖ್ಯೆಯೂ ಭಾರೀ ಪ್ರಮಾಣದಲ್ಲಿ ಏರಿದೆ. 2000-2017 ರ ನಡುವಣ ಅವಧಿಯಲ್ಲಿ ಇವರ ಪ್ರಮಾಣ ಶೇ. 79 ರಿಂದ ಶೇ. 93 ಕ್ಕೆ ಏರಿಕೆಯಾಗಿದೆ.
ಆದರೂ, ಪೈಪ್ ವಾಟರ್ ವಲಯದಲ್ಲಿ ಪ್ರಗತಿಯ ಕೊರತೆಯು ಎದ್ದು ಕಾಣುತ್ತಿದೆ ಎಂದು ವರದಿ ಹೇಳಿದೆ. 2000 ರಿಂದಲೂ ಈ ಸೌಲಭ್ಯವನ್ನು ಪಡೆದುಕೊಳ್ಳುತ್ತಿರುವವರ ಪ್ರಮಾಣ ಶೇ. 44 ರಲ್ಲೇ ಇದೆ. ಗಮನಾರ್ಹ ವಿಷಯವೆಂದರೆ, ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ತನ್ನ ಎರಡನೆಯ ಅವಧಿಯಲ್ಲಿ ಪ್ರಮುಖವಾಗಿ ಪೈಪ್ ವಾಟರ್ ಮೇಲೆ ಗಮನವನ್ನು ಕೇಂದ್ರೀಕರಿಸುವುದಾಗಿ ಹೇಳಿಕೊಂಡಿದೆ. ಇದಕ್ಕಾಗಿ ‘ನಳ್ ಸೆ ಜಲ್’ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ.
ಬಯಲು ಶೌಚ ನಿರ್ಮೂಲನೆಯ ಪ್ರಯತ್ನಗಳು 2014 ರ ನಂತರ ‘ಸ್ವಚ್ ಭಾರತ್ ಅಭಿಯಾನ್’ ಅಡಿಯಲ್ಲಿ ಕ್ಷಿಪ್ರಗೊಂಡಿತು, ಇಡೀ ದೇಶವನ್ನು ಬಯಲು ಶೌಚದಿಂದ ಮುಕ್ತಗೊಳಿಸಲು 2019 ಅಕ್ಟೋಬರ್ 2 ಅನ್ನು ಟಾರ್ಗೆಟ್ ಆಗಿ ಇಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.