ಮೂರು ವರ್ಷಗಳ ಹಿಂದೆ ಹೈದರಾಬಾದಿನ ನಿಲೋಫರ್ ಆಸ್ಪತ್ರೆಯ ತೊಟ್ಟಿಲಿನಲ್ಲಿ ಅನಾಥವಾಗಿ ಮಲಗಿದ್ದ ಮಗು ಶ್ರೀಯ ಮುಂದಿನ ಭವಿಷ್ಯ ಅತಂತ್ರವಾಗಿತ್ತು, ಆಕೆ ಕೇವಲ ಯಾರಿಗೂ ಬೇಡವಾಗಿದ್ದ ಮಗು ಆಗಿರಲಿಲ್ಲ ಬದಲಾಗಿ ಎಚ್ಐವಿ ಸೋಂಕಿತ ಮಗು ಕೂಡ ಆಗಿದ್ದಳು. ಆದರೂ ಆಕೆ ಬದುಕುಳಿದಳು, ಈಗ ಆಕೆಯ ಬದುಕು ಮಹತ್ವದ ತಿರುವನ್ನು ಪಡೆದುಕೊಳ್ಳುತ್ತಿದೆ. ಅಮೆರಿಕದ ದಂಪತಿ ಆಕೆಯನ್ನು ದತ್ತು ಪಡೆದುಕೊಂಡಿದ್ದಾರೆ.
ಮಕ್ಕಳ ದತ್ತು ಸಂಸ್ಥೆಗಳ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ವಿಶೇಷ ಅಗತ್ಯವುಳ್ಳ ಅಥವಾ ಅನಾರೋಗ್ಯ ಪೀಡಿತ ಮಕ್ಕಳನ್ನು ದತ್ತು ಪಡೆದುಕೊಳ್ಳುತ್ತಿರುವ ವಿದೇಶಿ ಪ್ರಜೆಗಳ ಸಂಖ್ಯೆ ಹೆಚ್ಚಾಗುತ್ತಿದೆ ಕಳೆದ ಜನವರಿಯಿಂದ ವಿದೇಶಿ ಪ್ರಜೆಗಳು ದತ್ತು ಪಡೆದುಕೊಂಡ 18 ಮಕ್ಕಳು ಕೂಡ ಎಚ್ಐವಿ ಸೋಂಕಿತರು ಅಥವಾ ವಿಶೇಷ ಮಕ್ಕಳಾಗಿದ್ದಾರೆ. ಶ್ರೀಯನ್ನು ಆಕೆಯ ಹೆತ್ತವರು ಅನಾಥನನ್ನಾಗಿ ಮಾಡುವ ಸಂದರ್ಭದಲ್ಲಿ ಆಕೆಯ ವಯಸ್ಸು ಕೇವಲ ಒಂದು ತಿಂಗಳು ಆಕೆಯನ್ನು antiretroviral therapy ಯಲ್ಲಿ ಇಡಲಾಗಿತ್ತು ಎಂಬುದನ್ನು ತೆಲಂಗಾಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ದತ್ತು ಪ್ರಕ್ರಿಯೆ ಉಸ್ತುವಾರಿ ಕೆ. ಸುನಿತಾ ನೆನಪಿಸಿಕೊಳ್ಳುತ್ತಾರೆ. ಈಗ ಶ್ರೀ ಆಕೆಯ ಹೊಸ ಪೋಷಕರ ಬಾಹುಗಳಲ್ಲಿ ಬೆಚ್ಚಗಿದ್ದಾಳೆ. ಮೂರು ವರ್ಷದ ಆಕೆಯ ವೈದ್ಯಕೀಯ ವೆಚ್ಚವನ್ನು ಆ ಕುಟುಂಬ ಭರಿಸುತ್ತಿದೆ. ಮಾತ್ರವಲ್ಲ ಆಕೆಯನ್ನು ಅತ್ಯಂತ ಜತನವಾಗಿ ಪೋಷಣೆ ಮಾಡುತ್ತಿದೆ ಎಂದು ಅವರು ಹೇಳುತ್ತಾರೆ. 11 ವರ್ಷದ ಹರ್ಷ ಕೂಡ ಎಚ್ಐವಿ ಸೋಂಕಿತನಾಗಿದ್ದು 6 ವರ್ಷದವನಿದ್ದಾಗಲೇ ಆತನ ಪೋಷಕರು ಆತನನ್ನು ಬಿಟ್ಟು ಹೋಗಿದ್ದಾರೆ ಇತ್ತೀಚಿಗೆ ಆತನನ್ನು ವಾಷಿಂಗ್ಟನ್ ಮೂಲದ ದಂಪತಿಗಳು ಖಾಸಗಿ ಅನಾಥಾಶ್ರಮದ ಮೂಲಕ ದತ್ತು ಪಡೆದುಕೊಂಡಿದ್ದಾರೆ ಕಳೆದ ಮೇ ತಿಂಗಳಿನಲ್ಲಿ ಆತ ಯುಎಸ್ ಗೆ ಪ್ರಯಾಣಿಸಿದ್ದಾರೆ. 2014ರಿಂದ ಅನಾಥಾಶ್ರಮದಲ್ಲಿ ಬೆಳೆಯುತ್ತಿದ್ದ ಆತನನ್ನು ಆತನ ಕಾಯಿಲೆಯ ಕಾರಣದಿಂದಾಗಿ ಯಾರೊಬ್ಬರೂ ದತ್ತು ಪಡೆಯಲು ಮುಂದಾಗುತ್ತಿರಲಿಲ್ಲ ಆದರೆ ಅಮೆರಿಕದ ದಂಪತಿ ಪಡೆದುಕೊಂಡಿದ್ದಾರೆ ಎಂದು ಸುನಿತಾ ಹೇಳುತ್ತಾರೆ.
ಹೈದರಾಬಾದಿನ ದಿವ್ಯಾಂಗ ದೃಷ್ಟಿಹೀನ ಶ್ರವಣದೋಷವುಳ್ಳ ಮಕ್ಕಳನ್ನು ಕೂಡ ವಿದೇಶಿ ದಂಪತಿಗಳು ಮಾಡಿದ್ದಾರೆ. ಅಮೆರಿಕಾ ಇಟಲಿ ಮತ್ತು ಫಿನ್ಲ್ಯಾಂಡ್ ಮೂಲದ ದಂಪತಿಗಳ ಸಂಖ್ಯೆಯೇ ಇದರಲ್ಲಿ ಹೆಚ್ಚು ಮಕ್ಕಳಿಗೆ ಹೆಚ್ಚಿನ ದೇಶಗಳು ಉತ್ತಮ ಯೋಜನೆಗಳನ್ನು ನೀಡುತ್ತಿರುವ ಹಿನ್ನಲೆಯಲ್ಲಿ ದತ್ತು ಪಡೆಯುವ ದಂಪತಿಗಳಿಗೆ ಈ ಮಕ್ಕಳನ್ನು ಸಾಕುವುದು ಅಷ್ಟೊಂದು ಪ್ರಾಸದಾಯಕ ಎನಿಸುವುದಿಲ್ಲ.
ಫಿನ್ಲ್ಯಾಂಡ್ ಗೆ ತೆರಳಿದ ಬಳಿಕ ಎರಡು ವರ್ಷದ ದಿವ್ಯಾಳ ಆರೋಗ್ಯ ಕೂಡ ಅತ್ಯಂತ ಸುಧಾರಣೆಯನ್ನು ಕಂಡಿದೆ. ಅಪೌಷ್ಟಿಕತೆಯಿಂದ 1.8 ಕೆಜಿ ತೂಕವಿದೆ ಈ ಮಗುವನ್ನು ಗಾಂಧಿ ಹಾಸ್ಪಿಟಲ್ ನಲ್ಲಿ ಎರಡು ತಿಂಗಳುಗಳಿದ್ದಾಗ ಬಿಟ್ಟು ಹೋಗಲಾಗಿತ್ತು. ಕೆಲ ತಿಂಗಳುಗಳ ಹಿಂದೆಯಷ್ಟೇ ಫಿನ್ಲ್ಯಾಂಡಿನ ದಂಪತಿ ಆಕೆಗೆ ನಡೆದಾಡಲು ಸಾಧ್ಯವಿಲ್ಲವೆಂದು ಗೊತ್ತಿದ್ದರೂ ಕೂಡ ಆಕೆಯನ್ನು ದತ್ತು ಪಡೆದುಕೊಂಡಿದ್ದಾರೆ.
ವಿದೇಶಿ ದಂಪತಿಗಳಿಗೆ ಭಾರತೀಯ ಮಗುವನ್ನು ದತ್ತು ಪಡೆಯಬೇಕಾದರೆ 3 ತಿಂಗಳುಗಳ ಪ್ರಕ್ರಿಯೆ ನಡೆಸಬೇಕಾಗುತ್ತದೆ. ದತ್ತು ಪಡೆದುಕೊಂಡ ಬಳಿಕ ಮೂರು ವರ್ಷಗಳ ಕಾಲ ಅಧಿಕಾರಿಗಳು, ಸ್ಥಳೀಯ ದತ್ತು ಸಂಸ್ಥೆಗಳ ಸಹಾಯದ ಮೂಲಕ ಆ ಕುಟುಂಬದ ಮೇಲೆ ಸೂಕ್ಷ್ಮ ದೃಷ್ಟಿಯನ್ನು ಇಟ್ಟಿರುತ್ತಾರೆ. ಪ್ರಸ್ತುತ ವಿಶೇಷ ಅವಶ್ಯಕತೆಯುಳ್ಳ ಸುಮಾರು 64 ಮಕ್ಕಳು ಹೈದರಾಬಾದಿನಲ್ಲಿ ಇಲಾಖೆಯ ಸುಪರ್ದಿಯಲ್ಲಿದ್ದಾರೆ, ಹೊಸ ಕುಟುಂಬವನ್ನು ಸೇರುವ ನಿರೀಕ್ಷೆಯಲ್ಲಿ ಅವರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.