ವಿಶ್ವಸಂಸ್ಥೆ: ಸಮುದ್ರ ಎಂಬುದು ಕಲ್ಪನೆಗೂ ಮೀರಿದ ಅದ್ಭುತ ಪರಿಸರ ವ್ಯವಸ್ಥೆ. ನಮ್ಮ ಭೂಮಿಯ ಶ್ವಾಸಕೋಶ ಎಂದು ಸಮುದ್ರವನ್ನು ಪರಿಗಣಿಸಲಾಗುತ್ತದೆ. ಆದರೆ ಮಾನವನ ನಿರಂತರ ಮಧ್ಯಸ್ಥಿಕೆಯಿಂದಾಗಿ ಅದು ಈಗ ಸಂತ್ರಸ್ಥಗೊಂಡಿದೆ. ಇಂದು ವಿಶ್ವ ಸಾಗರ ದಿನ. ನಮ್ಮ ದೈನಂದಿನ ಬದುಕಿನಲ್ಲಿ ಸಮುದ್ರ ವಹಿಸುವಂತಹ ಪಾತ್ರದ ಬಗ್ಗೆ ಸ್ಮರಿಸಿಕೊಳ್ಳಬೇಕಾದಂತಹ ದಿನ.
2008ರ ಡಿಸೆಂಬರ್ 5ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್ 8 ಅನ್ನು ವಿಶ್ವ ಸಮುದ್ರ/ಸಾಗರ ದಿನವನ್ನಾಗಿ ಆಚರಿಸುವ ಪ್ರಸ್ತಾಪವನ್ನು ಅಂಗೀಕರಿಸಿತು. ಸುಸ್ಥಿರ ಅಭಿವೃದ್ಧಿಗಾಗಿ ಸಮುದ್ರವನ್ನು, ಸಮುದ್ರ ಸಂಪನ್ಮೂಲಗಳನ್ನು ಸಂರಕ್ಷಿಸುವುದು ಮತ್ತು ಸುಸ್ಥಿರವಾಗಿ ಅದನ್ನು ಬಳಕೆ ಮಾಡುವುದು ವಿಶ್ವಸಂಸ್ಥೆಯ 2030ರ ಅಜೆಂಡಾದ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಒಂದಾಗಿದೆ. ಈ ವರ್ಷ ಸಮುದ್ರ ವೈಜ್ಞಾನಿಕ ಸಂಶೋಧನೆ, ಮೀನುಗಾರಿಕೆ, ಸಮುದ್ರ ಕಾರ್ಮಿಕತನ, ಹ್ಯುಮನ್ ಟ್ರಾಫಿಕಿಂಗ್, ನಿಯಮ ರೂಪಣೆ ಮತ್ತು ನಿರ್ವಹಣೆಗಳಲ್ಲಿ ಲಿಂಗ ಸಮಾನತೆಯನ್ನು ಸಾಧಿಸಲು ಸಾಕಷ್ಟು ಪ್ರಯತ್ನ ಮಾಡಲಾಗಿದೆ.
ಸಾಗರಗಳು ಭೂಮಿಯ ಮೇಲ್ಮೈಯ ಮುಕ್ಕಾಲು ಭಾಗವನ್ನು ಒಳಗೊಂಡಿದೆ, ಭೂಮಿಯ ನೀರಿನ ಶೇ.97% ರಷ್ಟು ಭಾಗವನ್ನು ಇದು ಹೊಂದಿದೆ ಮತ್ತು ಭೂಮಿಯ ಮೇಲೆ ವಾಸಿಸುವ ಶೇ.99 ರಷ್ಟು ಜಾಗವನ್ನು ಪ್ರತಿನಿಧಿಸುತ್ತವೆ. ಫೈಟೊಪ್ಲಾಂಕ್ಟನ್, ಹವಳದ ಬಂಡೆಗಳು ಮತ್ತು ಇತರ ಲಕ್ಷಾಂತರ ಸಮುದ್ರ ಸಸ್ಯಗಳು ಒಟ್ಟಾರೆ ಆಮ್ಲಜನಕದ 50% ರಷ್ಟನ್ನು ಒದಗಿಸುತ್ತದೆ. ಸಾಗರಗಳು ಮನುಷ್ಯರು ಉತ್ಪಾದಿಸುವ ಸುಮಾರು ಶೇ.30ರಷ್ಟು ಕಾರ್ಬನ್ ಡೈಆಕ್ಸೈಡ್ ಹೀರಿಕೊಳ್ಳುತ್ತವೆ, ಜಾಗತಿಕ ತಾಪಮಾನ ಏರಿಕೆಯ ಪ್ರಭಾವವನ್ನು ಕುಗ್ಗಿಸುತ್ತದೆ. 2.6 ಶತಕೋಟಿ ಜನರು ತಮ್ಮ ಪ್ರಾಥಮಿಕ ಪ್ರೋಟೀನ್ಗಾಗಿ ಸಮುದ್ರಗಳನ್ನು ಮೂಲವಾಗಿ ಅವಲಂಬಿಸಿರುತ್ತಾರೆ. ಸಾಗರ ಮೀನುಗಾರಿಕೆ ನೇರವಾಗಿ ಅಥವಾ ಪರೋಕ್ಷವಾಗಿ 200 ಮಿಲಿಯನ್ ಜನರಿಗೆ ಉದ್ಯೋಗವನ್ನು ಒದಗಿಸುತ್ತಿದೆ.
ಆದರೆ ಪ್ಲಾಸ್ಟಿಕ್ ಮಾಲಿನ್ಯ ಸಮುದ್ರಕ್ಕೆ ದೊಡ್ಡ ಮಟ್ಟದಲ್ಲಿ ಅಪಾಯವನ್ನು ತಂದೊಡ್ಡಿದೆ, ಪ್ರತಿ ವರ್ಷ 13 ಮಿಲಿಯನ್ ಟನ್ ಪ್ಲಾಸ್ಟಿಕ್ ಸಮುದ್ರವನ್ನು ಸೇರುತ್ತಿದೆ ಇದರಿಂದ 1 ಲಕ್ಷ ಸಮುದ್ರ ಜೀವಿಗಳು ವಾರ್ಷಿಕ ಸಾಯುತ್ತಿವೆ. ಮನುಷ್ಯನು ಆರೋಗ್ಯವಾಗಿರಬೇಕಾದರೆ ಭೂಮಿ ಆರೋಗ್ಯವಾಗಿರಬೇಕು, ಸಮುದ್ರ ಆರೋಗ್ಯವಾಗಿರಬೇಕು ಎಂಬ ಅರಿವು ನಮಗಿರಲೇ ಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.