ಕೋಲ್ಕತ್ತಾ: ‘ಜೈ ಶ್ರೀರಾಮ್’ ಘೋಷವಾಕ್ಯದ ವಿರುದ್ಧ ಸಮರ ಸಾರಿರುವ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಇದೀಗ ಆ ಘೋಷವಾಕ್ಯವೇ ಬೆಂಬಿಡದಂತೆ ದುಃಸ್ವಪ್ನವಾಗಿ ಕಾಡುತ್ತಿದೆ. ಜೈಶ್ರೀರಾಮ್ ಎಂದವರನ್ನು ಜೈಲಿಗೆ ಅಟ್ಟಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ, ಬದಲಾಗಿ ಇನ್ನಷ್ಟು ಮಂದಿಗೆ ಘೋಷಣೆ ಹಾಕಲು ಇದು ಪ್ರೇರಣೆ ನೀಡುತ್ತಿದೆ.
ಮುಸ್ಲಿಂ ಬಾಂಧವರ ರಂಜಾನ್ ಹಬ್ಬಕ್ಕೆ ಟ್ವಿಟರ್ ಮೂಲಕ ಶುಭ ಕೋರಿದರೂ ಅಲ್ಲೂ ಅವರಿಗೆ ಜೈ ಶ್ರೀರಾಮ್ ಘೋಷಣೆಯೇ ಕಾಣುತ್ತಿದೆ.
ಈದ್ ಮುಬಾರಕ್ ಪೋಸ್ಟ್ ಹಾಕಿರುವ ಮಮತಾ ಬ್ಯಾನರ್ಜಿಯವರಿಗೆ ‘ಜೈ ಶ್ರೀರಾಮ್’ ಎಂಬ ಕಾಮೆಂಟ್ಗಳ ಸುರಿಮಳೆಯೇ ಸುರಿದಿದೆ. ನೆಟ್ಟಿಗರ ಈ ಕಾರ್ಯ ಮಮತಾ ಅವರನ್ನು ಇನ್ನಷ್ಟು ಕೆರಳಿಸಿರುವುದಂತು ನಿಜ. ಯಾಕಾದರೂ ತಾನು ಜೈ ಶ್ರೀರಾಮ್ ಘೋಷಣೆಯ ವಿರುದ್ಧ ಹೋದೆ ಎಂಬ ಹತಾಶ ಪ್ರಜ್ಞೆಯೂ ಅವರಿಗೂ ಕಾಡಲಾರಂಭವಾಗಿರಬಹುದು.
সকলকে জানাই খুশীর ঈদের শুভেচ্ছা ও অভিনন্দন। ধর্ম যার যার, উৎসব সবার। আসুন, বৈচিত্রের মধ্যে ঐক্যের এই ধারাকে বজায় রাখি। একতাই সম্প্রীতি – এটাই হোক আমাদের মন্ত্র। #EidMubarak pic.twitter.com/4F56ex3bGP
— Mamata Banerjee (@MamataOfficial) June 4, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.