ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಸಂಪುಟ ಸಚಿವರಿಗೆ ಇಂದು ಖಾತೆ ಹಂಚಿಕೆಯಾಗಿದೆ. ಗುಜರಾತಿನ ಗಾಂಧೀನಗರ ಲೋಕಸಭಾ ಕ್ಷೇತ್ರದಿಂದ ಗೆದ್ದು ಬಂದಿರುವ ಅಮಿತ್ ಶಾ ಅವರು ಭಾರತದ ನೂತನ ಗೃಹ ಸಚಿವರಾಗಿದ್ದಾರೆ. ರಾಜನಾಥ್ ಸಿಂಗ್ ಅವರು ರಕ್ಷಣಾ ಸಚಿವರಾಗಿದ್ದಾರೆ. ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವೆಯಾಗಿದ್ದಾರೆ ಮತ್ತು ಎಸ್.ಜೈಶಂಕರ್ ವಿದೇಶಾಂಗ ಸಚಿವರಾಗಿದ್ದಾರೆ. ರವಿಶಂಕರ್ ಕಾನೂನು ಸಚಿವರಾಗಿದ್ದಾರೆ.
25 ಸಂಪುಟ ದರ್ಜೆ, 9 ರಾಜ್ಯ ಖಾತೆ(ಸ್ವತಂತ್ರ ನಿರ್ವಹಣೆ) ಮತ್ತು 24 ರಾಜ್ಯ ಖಾತೆ ಸಚಿವರುಗಳು ಗುರುವಾರ ಸಂಜೆ ಪ್ರಮಾಣವಚನವನ್ನು ಸ್ವೀಕಾರ ಮಾಡಿದ್ದಾರೆ.
21 ರಾಜ್ಯಗಳ ಪ್ರತಿನಿಧಿಗಳು ಸಚಿವ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇಂದು ಸಂಜೆ ಐದು ಗಂಟೆಗೆ ನೂತನ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ಜರುಗಲಿದೆ.
ಸಂಪುಟ ಸಚಿವರ ಮತ್ತು ಅವರ ಖಾತೆಗಳ ವಿವರ ಇಲ್ಲಿದೆ:
ಪ್ರಧಾನಿ ನರೇಂದ್ರ ಮೋದಿ | ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳು, ಪರಮಾಣು ಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆ, ಎಲ್ಲ ಪ್ರಮುಖ ನೀತಿಗಳ ನಿರ್ವಹಣೆ ಮತ್ತು ಇತರೆ ಹಂಚಿಕೆಯಾಗದ ಖಾತೆಗಳು |
ಅಮಿತ್ ಶಾ | ಗೃಹ ಇಲಾಖೆ |
ರಾಜನಾಥ್ ಸಿಂಗ್ | ರಕ್ಷಣಾ ಇಲಾಖೆ |
ನಿರ್ಮಲಾ ಸೀತಾರಾಮನ್ | ವಿತ್ತ ಸಚಿವಾಲಯ, ಕಾರ್ಪೋರೇಟ್ ವ್ಯವಹಾರಗಳು |
ಎಸ್. ಜೈಶಂಕರ್ | ವಿದೇಶಾಂಗ ಇಲಾಖೆ |
ನಿತಿನ್ ಗಡ್ಕರಿ | ಸಾರಿಗೆ ಇಲಾಖೆ, ಹೆದ್ದಾರಿ ಸಚಿವಾಲಯ, ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವಾಲಯ |
ರಾಮ್ ವಿಲಾಸ್ ಪಾಸ್ವಾನ್ | ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸರಬರಾಜು ಇಲಾಖೆ |
ನರೇಂದ್ರ ಸಿಂಗ್ ತೋಮರ್ | ಕೃಷಿ ಮತ್ತು ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ |
ರವಿ ಶಂಕರ್ ಪ್ರಸಾದ್ | ಕಾನೂನು ಮತ್ತು ನ್ಯಾಯಾಂಗ ಸಚಿವ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ |
ಹರ್ಸೀಮ್ರತ್ ಕೌರ್ | ಆಹಾರ ಸಂಸ್ಕರಣಾ ಸಚಿವಾಲಯ |
ತಾವರ್ ಚಂದ್ ಗೆಹ್ಲೂಟ್ | ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ |
ಡಿ. ವಿ. ಸದಾನಂದಗೌಡ | ರಸಗೊಬ್ಬರ ಇಲಾಖೆ |
ರಮೇಶ್ ಪೋಖ್ರಿಯಲ್ | ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ |
ಅರ್ಜುನ್ ಮುಂಡಾ | ಬುಡಕಟ್ಟು ವ್ಯವಹಾರ ಇಲಾಖೆ |
ಸ್ಮೃತಿ ಇರಾನಿ | ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ, ಜವಳಿ ಇಲಾಖೆ |
ಡಾ. ಹರ್ಷವರ್ಧನ್ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ ಸಚಿವಾಲಯ |
ಪ್ರಕಾಶ್ ಜಾವ್ಡೇಕರ್ | ಪರಿಸರ, ಅರಣ್ಯ, ಹವಾಮಾನ ಬದಲಾವಣೆ, ಮಾಹಿತಿ ಮತ್ತು ಪ್ರಸಾರ ಇಲಾಖೆ |
ಪಿಯೂಶ್ ಗೋಯಲ್ | ರೈಲ್ವೇ, ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ |
ಧರ್ಮೇಂದ್ರ ಪ್ರಧಾನ್ | ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಉಕ್ಕು |
ಮುಖ್ತಾರ್ ಅಬ್ಬಾಸ್ ನಖ್ವಿ | ಅಲ್ಪ ಸಂಖ್ಯಾತ ವ್ಯವಹಾರಗಳು |
ಪ್ರಲ್ಹಾದ್ ಜೋಷಿ | ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿಗಾರಿಕೆ |
ಮಹೇಂದ್ರ ನಾಥ್ ಪಾಂಡೆ | ಕೌಶಲ್ಯ ಅಭಿವೃದ್ಧಿ, ಹೊಸ ಉದ್ಯಮ |
ಅರವಿಂದ ಗಣಪತ್ ಸಾವಂತ್ | ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ |
ಗಿರಿರಾಜ್ ಸಿಂಗ್ | ಪಶುಸಂಗೋಪನೆ ಮತ್ತು ಮೀನುಗಾರಿಕೆ |
ಗಜೇಂದ್ರ ಸಿಂಗ ಶೇಖಾವತ್ | ಜಲಶಕ್ತಿ, ಸ್ವತಂತ್ರ ಖಾತೆ |
ಸಂತೋಷ್ ಕುಮಾರ್ ಗಂಗ್ವಾರ್ | ಕಾರ್ಮಿಕ ಮತ್ತು ಉದ್ಯೋಗ ಖಾತೆ |
ರಾವ್ ಇಂದ್ರಜಿತ್ ಸಿಂಗ್ | ಕಾರ್ಯಕ್ರಮ ಅನುಷ್ಠಾನ ಮತ್ತು ಅಂಕಿ ಅಂಶ |
ಶ್ರೀಪಾದ್ ಯೆಸ್ಸೋ ನಾಯಕ್ | ಆಯುರ್ವೇದ, ಯೋಗ, ಯುನಾನಿ, ರಕ್ಷಣಾ ಖಾತೆ ರಾಜ್ಯ ಸಚಿವರ ಹೊಣೆಗಾರಿಕೆ |
ಡಾ. ಜಿತೇಂದ್ರ ಸಿಂಗ್ | ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವಾಲಯ ಮತ್ತು ಪ್ರಧಾನಿ ಕಾರ್ಯಾಲಯ ಸಚಿವ; ಬಾಹ್ಯಾಕಾಶ ಮತ್ತು ಪರಮಾಣು ಇಂಧನ |
ಕಿರಣ್ ರಿಜುಜು | ಯುವಜನ ಮತ್ತು ಕ್ರೀಡಾ ಇಲಾಖೆ ಮತ್ತು ಅಲ್ಪಸಂಖ್ಯಾತ ವ್ಯವಹಾರ |
ಪ್ರಹ್ಲಾದ್ ಸಿಂಗ್ ಪಟೇಲ್ | ಸಂಸ್ಕೃತಿ ಮತ್ತು ಪ್ರವಾಸೋದ್ಯಮ |
ರಾಜ್ಕುಮಾರ್ ಸಿಂಗ್ | ಇಂಧನ ಖಾತೆ , ಮರುಬಳಕೆ ಇಂಧನ ಮತ್ತು ಕೌಶಲ್ಯಾಭಿವೃದ್ಧಿ |
ಹರ್ದೀಪ್ ಸಿಂಗ್ ಪುರಿ | ವಸತಿ ಮತ್ತು ನಗರಾಭಿವೃದ್ಧಿ , ನಾಗರಿಕ ವಿಮಾನಯಾನ, ವಾಣಿಜ್ಯ ಮತ್ತು ಕೈಗಾರಿಕೆ |
ಮನ್ಸುಕ್ ಎಲ್ ಮಾಂಡವೀಯಾ | ಹಡಗು, ರಾಸಯನಿಕ ಮತ್ತು ರಸಗೊಬ್ಬರ ಖಾತೆ |
ರಾಜ್ಯ ಸಚಿವರು | |
ಫಗ್ಗನ್ ಸಿಂಗ್ ಕುಲಸ್ತೆ | ಉಕ್ಕು ಖಾತೆ |
ಅಶ್ವಿನ್ ಕುಮಾರ್ ಚೌಬೆ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
ಅರ್ಜುನ್ ರಾಮ್ ಮೇಘ್ವಾಲ್ | ಸಂಸದೀಯ ವ್ಯವಹಾರಗಳು, ಭಾರೀ ಕೈಗಾರಿಕೆ |
ನಿವೃತ್ತ ಜನರಲ್ ವಿ.ಕೆ.ಸಿಂಗ್ | ರಾಜ್ಯ ಹೆದ್ದಾರಿ ಮತ್ತು ಸಾರಿಗೆ |
ಕೃಷ್ಣನ್ ಪಾಲ್ | ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ |
ದಾನ್ವೆ ರಾವ್ ಸಾಹೇಬ್ ದಾದಾ ರಾವ್ | ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ |
ಜಿ ಕೃಷ್ಣನ್ ರೆಡ್ಡಿ | ಗೃಹ ಖಾತೆ |
ಪರ್ಷೋತ್ತಮ್ ರುಪಾಲಾ | ಕೃಷಿ ಮತ್ತು ರೈತರ ಕಲ್ಯಾಣ |
ರಾಮ್ದಾಸ್ ಅಠಾವಲೆ | ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ |
ಸಾಧ್ವಿ ನಿರಂಜನ್ ಜ್ಯೋತಿ | ಗ್ರಾಮೀಣಾಭಿವೃದ್ಧಿ |
ಬಾಬುಲ್ ಸುಪ್ರಿಯೋ | ಪರಿಸರ, ಹವಾಮಾನ ಬದಲಾವಣೆ |
ಸಂಜೀವ್ ಕುಮಾರ್ ಬಲ್ಯಾನ್ | ಪಶುಸಂಗೋಪನೆ, ಮೀನುಗಾರಿಕೆ |
ಧೋತ್ರೆ ಸಂಜಯ್ ಶಾಮ್ರಾವ್ | ಮಾನವ ಸಂಪನ್ಮೂಲ, ಸಂಪರ್ಕ, ಮಾಹಿತಿ ತಂತ್ರಜ್ಞಾನ |
ಅನುರಾಗ್ ಸಿಂಗ್ ಠಾಕೂರ್ | ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳು |
ಸುರೇಶ್ ಅಂಗಡಿ | ರೈಲ್ವೆ ಖಾತೆ |
ನಿತ್ಯಾನಂದ್ ರೈ | ಗೃಹ ವ್ಯವಹಾರಗಳು |
ರತ್ತನ್ ಲಾಲ್ ಕಟಾರಿಯಾ | ಜಲಶಕ್ತಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ |
ವಿ.ಮುರಳೀಧರನ್ | ವಿದೇಶಾಂಗ ವ್ಯವಹಾರಗಳು, ಸಂಸದೀಯ ವ್ಯವಹಾರ |
ರೇಣುಕಾ ಸಿಂಗ್ ಸರುತಾ | ಬುಡಕಟ್ಟು ವ್ಯವಹಾರ |
ಸೋಮ್ ಪರ್ಕಾಶ್ | ವಾಣಿಜ್ಯ ಮತ್ತು ಕೈಗಾರಿಕೆ |
ರಾಮೇಶ್ವರ್ ತೇಲಿ | ಆಹಾರ ಸಂಸ್ಕರಣೆ |
ಪ್ರತಾಪ್ ಚಂದ್ರ ಸಾರಂಗಿ | ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ |
ಕೈಲಾಶ್ ಚೌಧರಿ | ಕೃಷಿ ಮತ್ತು ರೈತರ ಕಲ್ಯಾಣ |
ಸುಶ್ರಿ ದೆಬಾಶ್ರೀ ಚೌಧರಿ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ |
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.