ನವದೆಹಲಿ: ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ದೊಡ್ಡ ಹಿನ್ನಡೆಯಾಗಿದೆ. ಮಂಗಳವಾರ ಮೂರು ಮಂದಿ ಶಾಸಕರು ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ. ಮಾತ್ರವಲ್ಲ, 50 ಮಂದಿ ಟಿಎಂಸಿ ಕೌನ್ಸಿಲರ್ಗಳು ಕೂಡ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಬಿಜ್ಪುರ ವಿಧಾನಸಭಾ ಕ್ಷೇತ್ರದ ಶಾಸಕ ಸುಬ್ರಾಂಶು ರಾಯ್, ಬಿಶ್ನಿಪುರದ ತುಷಾರ್ ಕಾಂತಿ ಭಟ್ಟಾಚಾರ್ಜಿ ಬಿಜೆಪಿ ಸೇರಿದ ಪ್ರಮುಖರು. ಟಿಎಂಸಿ ಮುಖ್ಯಸ್ಥರಾಗಿ ಈಗ ಅಮಾನತುಗೊಂಡಿರುವ ಮುಕುಲ್ ರಾಯ್ ಅವರ ಪುತ್ರನೇ ಸುಬ್ರಾಂಶು ರಾಯ್ ಆಗಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರು ಇವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಬಿಜೆಪಿಗೆ ಬರಲು ಮತ್ತಷ್ಟು ಟಿಎಂಸಿ ಶಾಸಕರು ಉತ್ಸುಕಗೊಂಡಿದ್ದಾರೆ, ಆದರೆ ಎಲ್ಲರನ್ನೂ ಆಯ್ಕೆ ಮಾಡಿಕೊಳ್ಳಲಾಗುತ್ತಿಲ್ಲ ಎಂದು ವಿಜಯವರ್ಗೀಯ ಹೇಳಿಕೊಂಡಿದ್ದಾರೆ. “ಟಿಎಂಸಿಯಲ್ಲಿ ಹಲವು ಮಂದಿ ಉಸಿರುಕಟ್ಟಿದಂತಹ ವಾತಾವರಣ ಇದೆ. ಅವರು ನಮ್ಮನ್ನು ತಲುಪುವ ಪ್ರಯತ್ನ ಮಾಡುತ್ತಿದ್ದಾರೆ. ಅದು ಅವರ ತಪ್ಪಲ್ಲ. ಅವರಿಗೆ ನಾವು ಆಯ್ಕೆ ಪ್ರಕ್ರಿಯೆಯನ್ನು ಇಡುತ್ತೇವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.