ವಾರಣಾಸಿ: ಎರಡನೆಯ ಬಾರಿಗೆ ಪ್ರಧಾನಿಯಾಗಲು ಪ್ರಮಾಣವಚನ ಸ್ವೀಕರಿಸಲು ಮೂರು ದಿನಗಳು ಬಾಕಿ ಉಳಿದಿರುವಂತೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ತೆರಳಿ ಕಾಶಿ ವಿಶ್ವನಾಥ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ತನ್ನನ್ನು ಅಭೂತಪೂರ್ವವಾಗಿ ಗೆಲ್ಲಿಸಿದ ಕಾಶಿಯ ಜನತೆಗೆ ಧನ್ಯವಾದಗಳನ್ನು ಅರ್ಪಿಸಿದರು.
ವಾರಣಾಸಿಯ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ನಮ್ಮ ಪಕ್ಷವೂ ಎಲ್ಲರನ್ನೂ ಒಳಗೊಳ್ಳುವಿಕೆ, ಅಭಿವೃದ್ಧಿ ಮತ್ತು ಕಲ್ಯಾಣದ ಪರವಾಗಿ ನಿಲ್ಲುತ್ತದೆ. ನಮಗೆ ಚುನಾವಣೆಯಲ್ಲಿ ಜಯ ದೊರಕಿಸಿ ಕೊಟ್ಟಿದ್ದು ಹೊಂದಾಣಿಕೆಯೇ ಹೊರತು ಲೆಕ್ಕಾಚಾರವಲ್ಲ, ಶಾಂತಿ, ಸೌಹಾರ್ದತೆಯ ಸಂದೇಶ ಪಸರಿಸುವಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಭಾರತದ ಪ್ರಗತಿಗಾಗಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲು ಬಯಸುತ್ತೇನೆ’ ಎಂದಿದ್ದಾರೆ.
“ನಾನು ಪ್ರಧಾನಿಯಾಗಿರಬಹುದು, ಆದರೆ ನಿಮಗೆ ಈಗಲೂ ನಾನು ಕಾರ್ಯಕರ್ತನೇ” ಎಂದು ಬಿಜೆಪಿ ಕಾರ್ಯಕರ್ತರಿಗೆ ಅವರು ತಿಳಿಸಿದರು.
ಬಿಜೆಪಿ ಎರಡು ಸವಾಲುಗಳನ್ನು ಎದುರಿಸಿದೆ. ಒಂದು ರಾಜಕೀಯ ಹಿಂಸಾಚಾರ, ಮತ್ತೊಂದು ರಾಜಕೀಯ ಅಸ್ಪೃಶ್ಯತೆ. ಕಾಶ್ಮೀರ, ಕೇರಳ, ಬಂಗಾಳದಲ್ಲಿ ನಮ್ಮ ಕಾರ್ಯಕರ್ತರನ್ನು ಹತ್ಯೆ ಮಾಡಲಾಗುತ್ತಿದೆ ಮತ್ತು ದಾಳಿಗೊಳಪಡಿಸಲಾಗುತ್ತಿದೆ. ಇದು ಅತ್ಯಂತ ನಾಚಿಗೇಡಿನ ಮತ್ತು ಪ್ರಜಾಫ್ರಭುತ್ವ ವಿರೋಧಿ ಕೃತ್ಯ ಎಂದಿದ್ದಾರೆ.
ದ್ವೇಷ ರಾಜಕಾರಣದ ನಡುವೆಯೂ ಎಲ್ಲರ ಜೊತೆ, ಎಲ್ಲರ ವಿಕಾಸ ಬಿಜೆಪಿಯ ಮಂತ್ರವಾಗಿ ಮುಂದುವರೆಯಲಿದೆ, ದೂರದೃಷ್ಟಿ ಹಾಗೂ ಕಠಿಣ ಶ್ರಮಕ್ಕೆ ಗ್ರಹಿಕೆಗಳನ್ನು ಬದಲಾವಣೆ ಮಾಡುವ ಸಾಮರ್ಥ್ಯವಿದೆ ಎಂದು ಮೋದಿ ಹೇಳಿದ್ದಾರೆ.
ಬಿಜೆಪಿಯೊಂದೇ ಹೆಚ್ಚು ಪ್ರಜಾಪ್ರಭುತ್ವ ಹೊಂದಿರುವ ಪಕ್ಷ ಎಂದು ಅವರು ಪ್ರತಿಪಾದಿಸಿದರು.
ಇಂದು ಬೆಳಿಗ್ಗೆ ಕಾಶಿ ವಿಶ್ವನಾಥ ದೇಗುಲಕ್ಕೆ ತೆರಳಿ ದೇವರ ದರ್ಶನವನ್ನು ಪಡೆದುಕೊಂಡ ಅವರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಸಾಥ್ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.