ನವದೆಹಲಿ: ಶಾರದಾ ಚಿಟ್ ಫಂಡ್ ಹಗರಣದಲ್ಲಿ ಆರೋಪಿಯಾಗಿರುವ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರಿಗೆ ನೀಡಲಾಗಿದ್ದ ಬಂಧನ ಸುರಕ್ಷತೆ ಆದೇಶವನ್ನು ಸುಪ್ರೀಂಕೋರ್ಟ್ ಶುಕ್ರವಾರ ವಾಪಾಸ್ ಪಡೆದುಕೊಂಡಿದೆ. ರಾಜೀವ್ ಅವರು ಪಶ್ಚಿಮಬಂಗಾಳ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರ ಪರಮಾಪ್ತರಾಗಿದ್ದು, ಅವರ ಮೇಲಿದ್ದ ಬಂಧನ ಸುರಕ್ಷತೆ ಆದೇಶ ಹಿಂಪಡೆದಿರುವುದು ಮಮತಾ ಅವರಿಗೆ ದೊಡ್ಡ ಮಟ್ಟದ ಹಿನ್ನಡೆಯನ್ನು ತಂದಿದೆ.
ಬಂಧನ ಸುರಕ್ಷತೆ ಆದೇಶವನ್ನು ಸುಪ್ರೀಂಕೋರ್ಟ್ ಹಿಂಪಡೆಯುವುದರಿಂದ ಸಿಬಿಐಗೆ ಅವರನ್ನು ಬಂಧಿಸುವ ಅವಕಾಶ ಸಿಕ್ಕಿದೆ. ಯಾವಾಗ ಬೇಕಾದರೂ ಬಂಧಿಸಬಹುದು.
ಐಪಿಎಸ್ ಆಧಿಕಾರಿ ರಾಜೀವ್ ಕುಮಾರ್ ಅವರ ವಿರುದ್ಧ ಶಾರದಾ ಚಿಟ್ ಫಂಡ್ ಹಗರಣದ ಸಾಕ್ಷ್ಯ ನಾಶ ಮಾಡಿದ ಗಂಭೀರ ಆರೋಪವಿದೆ. ಈ ಸಂಬಂಧ ಅವರ ವಿಚಾರಣೆ ನಡೆಸಲು ಮುಂದಾಗಿದ್ದ ಸಿಬಿಐ ಅಧಿಕಾರಿಗಳನ್ನು ಕೋಲ್ಕತಾ ಪೊಲೀಸರು ಬಂಧಿಸಿದ್ದರು. ಈ ವೇಳೆ ಪಶ್ಚಿಮ ಬಂಗಾಳದಲ್ಲಿ ದೊಡ್ಡ ವಿವಾದವೇ ಭುಗಿಲೆದ್ದಿತ್ತು. ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರ ವಿರುದ್ಧ ಧರಣಿ ನಡೆಸಿದ್ದರು. ಬಳಿಕ ಸುಪ್ರೀಂಕೋರ್ಟ್ ರಾಜೀವ್ ಅವರಿಗೆ ‘ಬಂಧನ ಸುರಕ್ಷತೆ’ಯನ್ನು ನೀಡಿತ್ತು.
ಇದೀಗ ‘ಬಂಧನ ಸುರಕ್ಷತೆ’ ಆದೇಶವನ್ನು ಸುಪ್ರೀಂಕೋರ್ಟ್ ಹಿಂಪಡೆದುಕೊಂಡಿದ್ದು, ಸಿಬಿಐಗೆ ಅವರನ್ನು ವಶಕ್ಕೆ ಪಡೆಯುವ ಅವಕಾಶ ಲಭಿಸಿದೆ. ಇದು ಮಮತಾ ಬ್ಯಾನರ್ಜಿಗೆ ತೀವ್ರ ಹಿನ್ನಡೆಯನ್ನು ತಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.