ನವದೆಹಲಿ: ದೇಶ ಕೊನೆಯ ಹಂತದ ಮತದಾನಕ್ಕೆ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಹೊಸ ಹ್ಯಾಶ್ ಟ್ಯಾಗ್ ಅನ್ನು ಟ್ರೆಂಡ್ ಮಾಡಿದೆ. #ಅಪ್ನಾಮೋದಿಆಯೇಗಾ ಟ್ವಿಟರಿನಲ್ಲಿ ಟ್ರೆಂಡ್ ಆಗಿದ್ದು, ಸುಮಾರು 20.8 ಸಾವಿರ ಮಂದಿ ಈ ಹ್ಯಾಶ್ಟ್ಯಾಗ್ ಬಳಸಿಕೊಂಡು ಟ್ವಿಟ್ಗಳನ್ನು ಮಾಡಿದ್ದಾರೆ.
ಪಕ್ಷದ ಅಧಿಕೃತ ಮತ್ತು ಪ್ರಾದೇಶಿಕ ಟ್ವಿಟರ್ ಹ್ಯಾಂಡಲ್ಗಳು ಈ ಹೊಸ ಹ್ಯಾಶ್ಟ್ಯಾಗ್ ಮೂಲಕ ಹಲವಾರು ಟ್ವಿಟ್ಗಳನ್ನು ಮಾಡಿದೆ.
ಈ ಹ್ಯಾಶ್ಟ್ಯಾಗ್ ಬಳಸಿ ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರ ಕಛೇರಿಯೂ ಟ್ವಿಟ್ ಮಾಡಿದ್ದು, “ಬಂಗಾಳದ ಮೂಡ್ ಬದಲಾವಣೆಗಾಗಿ ಮೂಡಿ ಬಂದಿದೆ, ಟಿಎಂಸಿ ಆಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ. ಪಶ್ಚಿಮಬಂಗಾಳದ ಜನರು ಪಿಎಂ ಮೋದಿಗಾಗಿ ಮತ ಹಾಕುತ್ತಾರೆ #ಅಪ್ನಾಮೋದಿ ಆಯೇಗಾ” ಎಂದಿದೆ.
ಬಿಜೆಪಿಯು 2019ರ ಲೋಕಸಭಾ ಚುನಾವಣೆಗೆ “ಫಿರ್ ಏಕಾ ಬಾರ್ ಮೋದಿ ಸರ್ಕಾರ್”, ಅಲ್ಲದೆ ‘ಚಲೋ ಫಿರ್ ಏಕ್ ಬಾರ್ ಹಂ ಮೋದಿ ಸರ್ಕಾರ್ ಬನಾತೆ ಹೈ, ಚಲೋ ಮಿಲ್ಕೆ ಸಾಥ್ ಆಗೇ ದೇಶ್ ಕೊ ಬಡಾತೇ ಹೈ” ಗೀತೆಯನ್ನು ಏಪ್ರಿಲ್ 7 ರಂದು ಅನಾವರಣಗೊಳಿಸಿತ್ತು.
3.24 ನಿಮಷದ ಈ ಗೀತೆಯು ಭಯೋತ್ಪಾದನೆ ವಿರುದ್ಧ ಹೋರಾಟ, ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್, ಕಳೆದ 5 ವರ್ಷಗಳಲ್ಲಿ ನೀಡಿದ ಜನಪರ ಯೋಜನೆಗಳು ಸೇರಿದಂತೆ ಸರ್ಕಾರದ ಸಾಧನೆಗಳನ್ನು ಒಳಗೊಂಡಿದೆ.
चलो फिर एक बार हम मोदी सरकार बनाते हैं,
चलो मिलकर साथ आगे देश को बढ़ाते हैं। #PhirEkBaarModiSarkar #IsBaarPhirModi pic.twitter.com/6I5vi6B71Y
— BJP (@BJP4India) April 7, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.