ಕೋಲ್ಕತ್ತಾ: ಪಶ್ಚಿಮಬಂಗಾಳದ ಡೈಮಂಡ್ ಹಾರ್ಬರ್ ಕ್ಷೇತ್ರದ ಬಿಶ್ನಾಪುರ ಬ್ಲಾಕಿನ ಬಗಖಾಲಿಯಲ್ಲಿ ಹಿಂದೂಗಳ ಮೇಲೆ ನಿರಂತರವಾದ ದೌರ್ಜನ್ಯಗಳನ್ನು ಎಸಗಲಾಗುತ್ತಿದೆ. ಈ ನಡುವೆ ಹಿಂದೂಗಳನ್ನು ಕೊಲ್ಲುವಂತೆ ಕರೆ ನೀಡುವ ವೀಡಿಯೋವೊಂದು ವೈರಲ್ ಆಗಿದ್ದು, ಇದರಿಂದ ಭಯಭೀತಗೊಂಡಿರುವ ಹಿಂದೂ ಕುಟುಂಬಗಳು ಮನೆಯನ್ನು ತೊರೆಯುತ್ತಿವೆ ಎನ್ನಲಾಗಿದೆ.
ಮುಸ್ಲಿಂಯೇತರರನ್ನು ಕೊಲ್ಲಿ, ಅವರನ್ನು ಈ ಭಾಗದಿಂದ ಓಡಿಸಿ ಎಂದು ಕರೆ ನೀಡಿರುವುದು ಅಲ್ಲಿನ ಹಿಂದೂಗಳಲ್ಲಿ ಆತಂಕ ಮೂಡಿಸಿದೆ. ಇಲ್ಲೇ ಇದ್ದರೆ ನಮ್ಮ ಮೇಲೆ ದಾಳಿಗಳಾಗಬಹುದು ಎಂಬ ಭಯ ಅವರನ್ನು ಕಾಡುತ್ತಿದೆ. ಹೀಗಾಗಿ ಮಕ್ಕಳು ಮರಿಗಳೊಂದಿಗೆ ಅವರು ಜಾಗ ಖಾಲಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ನಮ್ಮ ಮೇಲೆ ಇಲ್ಲಿ ದೌರ್ಜನ್ಯ ನಡೆಯುತ್ತಿದೆ, ಅದಕ್ಕಾಗಿ ಮನೆ ಬಿಟ್ಟು ಹೋಗುತ್ತಿದ್ದೇವೆ ಎಂದು ಕುಟುಂಬವೊಂದು ಹೇಳುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.
ಮೈನೇಷನ್ ವರದಿಯ ಪ್ರಕಾರ, ಹಿಂದೂ ಸಮುದಾಯದವರಿಗೆ ಸೇರಿದ ಸುಮಾರು 200 ಮನೆಗಳನ್ನು ಮುಸ್ಲಿಂ ದುಷ್ಕರ್ಮಿಗಳು ಲೂಟಿ ಮಾಡಿದ್ದಾರೆ. ಮೇ 11 ರಿಂದ ಇಂತಹ ಘಟನೆಗಳು ಜರುಗುತ್ತಿವೆ. ಮೇ 19 ರಂದು ಈ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ, ಮತ ಹಾಕದಂತೆ ಹಿಂದೂಗಳನ್ನು ಬೆದರಿಸಲಾಗುತ್ತಿದೆ ಎನ್ನಲಾಗಿದೆ.
ಮುಸ್ಲಿಂ ಪ್ರಾಬಲ್ಯವುಳ್ಳ ರಾಯ್ಗಂಜ್ ಲೋಕಸಭಾ ಕ್ಷೇತ್ರಗಳಲ್ಲಿ ಹಿಂದೂಗಳಿಗೆ ಮತದಾನವನ್ನು ಮಾಡಲು ಅವಕಾಶ ನೀಡಲಾಗಿಲ್ಲ ಎಂದು ಇತ್ತೀಚಿಗೆ ವರದಿಯಾಗಿತ್ತು.
ಈ ಎಲ್ಲಾ ಘಟನೆಗಳ ಹಿಂದೆ ಟಿಎಂಸಿಯ ಕೈವಾಡ ಇರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.
Kashmir style announcements from mosques in WB. Hindus moving to safer places. Bagalkhali, Bishnupur, Dismond Harbour. Via FB pic.twitter.com/mXjAmDctdt
— SahaJio🇮🇳 (@oldhandhyd) May 14, 2019
Bengal on communal edge as 200 ransack, burn down properties of Hindus
At least 200 people recently ransacked houses in Bengal’s Satgachia area, which falls under Diamond Harbour Lok Sabha constituency. It is alleged that the perpetrators were Muslims and they attacked people from the Hindu community. The attack started on May 11. It is also said that the incident was at all political but was actually a communal one.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.