ನವದೆಹಲಿ : ಹತ್ತರಲ್ಲಿ ಏಳು ಜನ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಸುರಕ್ಷಿತ ಭಾವನೆಯನ್ನು ಹೊಂದಿದ್ದಾರೆ ಎಂಬುದಾಗಿ ನೂತನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಮೋದಿಯವರು ಆಡಳಿತಕ್ಕೆ ಏರಿದ ಮೊದಲ ವರ್ಷದಿಂದ ಸುರಕ್ಷಿತ ಭಾವನೆಯನ್ನು ವ್ಯಕ್ತ ಪಡಿಸುತ್ತಿರುವವರ ಸಂಖ್ಯೆ ಈಗ ಹೆಚ್ಚಾಗಿದೆ.
2005 ರಿಂದ ವಿಶ್ವದಾದ್ಯಂತ ಆಹಾರದ ಲಭ್ಯತೆ, ಉದ್ಯೋಗ, ನಾಯಕತ್ವ ಪ್ರದರ್ಶನದ ಬಗ್ಗೆ ಸಮೀಕ್ಷೆಯನ್ನು ನಡೆಸುತ್ತಾ ಬಂದಿರುವ ಗಲ್ಲಪ್ ಸಂಸ್ಥೆಯು, 2018 ಅಕ್ಟೋಬರ್-ಡಿಸೆಂಬರ್ ನಡುವೆ ಭಾರತದ ಸುರಕ್ಷತೆಯ ಬಗ್ಗೆ ಸಮೀಕ್ಷೆಯನ್ನು ನಡೆಸಿದೆ. ಈ ಸಮೀಕ್ಷೆಯಿಂದ ಭಾರತೀಯರಲ್ಲಿ ಭದ್ರತಾ ಭಾವನೆಯು ಹೆಚ್ಚಿದೆ ಎಂಬುದು ತಿಳಿದುಬಂದಿದೆ.
ಪೂರ್ವ ಭಾರತದ ಶೇಕಡ 78ರಷ್ಟು ನಿವಾಸಿಗಳು, ದಕ್ಷಿಣ ಭಾರತದ ಶೇಕಡ 75ರಷ್ಟು ನಿವಾಸಿಗಳು ತಾವು ಸುರಕ್ಷಿತವಾಗಿದ್ದೇವೆ, ರಾತ್ರಿ ವೇಳೆಯಲ್ಲಿ ನಿರ್ಭೀತಿಯಿಂದ ಓಡಾಡುತ್ತೇವೆ ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಉತ್ತರ ಭಾರತದ ಶೇಕಡ 60ರಷ್ಟು ಮಂದಿ ಇದೇ ರೀತಿಯಾದ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಮಹಿಳೆಯರ ವಿಷಯಕ್ಕೆ ಬಂದರೆ ಭಾರತದ ಶೇಕಡ 65ರಷ್ಟು ಮಹಿಳೆಯರು ತಾವು ಸುರಕ್ಷಿತವಾಗಿದ್ದೇವೆ ಎಂದಿದ್ದಾರೆ ಶೇಕಡ 73ರಷ್ಟು ಪುರುಷರು ಸುರಕ್ಷಿತ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಭಾಗದ ಶೇಕಡ 64 ರಷ್ಟು ಮಹಿಳೆಯರು ಮತ್ತು ನಗರ ಭಾಗದ ಶೇಕಡ 75ರಷ್ಟು ಮಹಿಳೆಯರು ಸುರಕ್ಷಿತ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಶೇಕಡಾ 95ರಷ್ಟು ಮಂದಿ ಭಾರತೀಯರು ತಮ್ಮ ಸೇನೆಯಲ್ಲಿ ವಿಶ್ವಾಸವನ್ನು ಹೊಂದಿದ್ದಾರೆ ಎಂಬುದನ್ನು ಈ ಸಮೀಕ್ಷೆ ತಿಳಿಸಿದೆ ಇಷ್ಟೊಂದು ಪ್ರಮಾಣದ ಜನರು ನಂಬಿಕೆ ಇಟ್ಟಿರುವ ದಕ್ಷಿಣ ಏಷ್ಯಾದ ಎರಡನೇ ಸೇನೆ ಭಾರತೀಯ ಸೇನೆಯಾಗಿ ಹೊರಹೊಮ್ಮಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.