News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಒರಿಸ್ಸಾದ ಈ ಗ್ರಾಮ ಶ್ರೀಮಂತ ಕಲೆಗಳ ಸಮೃದ್ಧ ತಾಣ

ಒರಿಸ್ಸಾದ ಪುರಿ ಸಮೀಪದ ಸಣ್ಣ ಗ್ರಾಮ ರಘುರಾಜ್‌ಪುರ. ಕಲೆ ಮತ್ತು ಕರಕುಶಲತೆಗೇ ಸಮರ್ಪಿತಗೊಂಡ ಗ್ರಾಮವಾಗಿದೆ. ಇದೇ ಗ್ರಾಮದಲ್ಲಿ 5ನೇ ಶತಮಾನದಲ್ಲಿ ಪಟ್ಟ ಚಿತ್ರ ಮಾದರಿಯ ಪೇಂಟಿಂಗ್ಸ್ ಉಗಮಗೊಂಡಿತ್ತು. ಇದು ಒಡಿಸ್ಸಿ ಗುರು ಕೆಲುಚರಣ್ ಮಹಾಪಾತ್ರ ಅವರ ಜನ್ಮಸ್ಥಾನ ಮತ್ತು ನೃತ್ಯ ಶೈಲಿ ಗೋಟಿಪುವದ ಉಗಮ ಸ್ಥಾನವೂ ಹೌದು.

ಈ ಅದ್ಭುತ ಪಟ್ಟಣದಲ್ಲಿ ಒಂದು ಬಾರಿ ನಡೆದಾಡಿದರೆ ಸ್ಥಳಿಯ ಕಲೆಗಳ ದರ್ಶನವೇ ಆಗುತ್ತದೆ. ಇಲ್ಲಿನ ಮನೆಗಳ ಗೋಡೆಗಳ ಮೇಲೆ ನೆಲಗಳ ಮೇಲೆ ವಿಧವಿಧದ ಕಲೆಗಳ ಚಿತ್ರಗಳು ಕಾಣ ಸಿಗುತ್ತವೆ, ಕರಕುಶಲಗಳ ಭಂಡಾರವೇ ಇರುತ್ತದೆ. ಪ್ರತಿ ಮನೆಯು ವರ್ಣರಂಜಿತ ಆರ್ಟ್ ಗ್ಯಾಲರಿಯಂತೆ ಕಂಗೊಳಿಸುತ್ತದೆ. ಪಟ್ಟಚಿತ್ರ ಪೇಂಟಿಂಗ್ ಅನ್ನು ಹೊರತುಪಡಿಸಿಯೂ ನಾನಾ ತರಹದ ಕಲೆಗಳ ಪ್ರಾಕಾರಗಳನ್ನು ನಾವಿಲ್ಲಿ ನೋಡಬಹುದು. ಕಲ್ಲಿನ ಶಿಲ್ಪ, ಪೇಪರ್ ಆಟಿಕೆಗಳು, ಮುಖವಾಡಗಳು, ಮರದ ಕೆತ್ತನೆಗಳು, ಮರದ ಆಟಿಕೆಗಳು, ಸೆಗಣಿಯಿಂದ ತಯಾರಿಸಿದ ಆಟಿಕೆಗಳು, ಎಲೆಯಿಂದ ಮಾಡಿದ ವಿನ್ಯಾಸಗಳು ಇಲ್ಲಿ ಕಾಣಸಿಗುತ್ತವೆ.

ಈ ಶ್ರೀಮಂತ ಕಲಾ ಪ್ರತಿಭೆಯು ಇಲ್ಲಿನ ಜನರಿಗೆ ಅವರ ಪೂರ್ವಜರಿಂದ ಬಳುವಳಿಯಾಗಿ ಬಂದಿರುವಂತದ್ದು, ಇವರ ಸೃಜನಶೀಲತೆ ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆ ಆಗುತ್ತಲೇ ಇದೆ. ಬಹುವಿಧದ ಕಲಾ ಕಾರ್ಯಗಳು ಮತ್ತು ಕಲಾವಿದರ ಮಹಾ ಸಂಗಮವನ್ನು ಒಂದೇ ಜಾಗದಲ್ಲಿ ಕಾಣುವಂತಹ ಭಾರತದ ಏಕೈಕ ಸ್ಥಳ ಎಂಬ ಹೆಗ್ಗಳಿಕೆಗೆ ರಘುರಾಜಪುರ ಪಾತ್ರವಾಗಿದೆ. ಕಲಾ ಆರಾಧಕರಿಗೆ ಭೇಟಿ ನೀಡುವಂತಹ ಅದ್ಭುತವಾದ ತಾಣ ಇದೆಂದರೆ ಅತಿಶಯೋಕ್ತಿಯಾಗಲಾರದು.

ಪಟ್ಟಚಿತ್ರದ ಪಾರಂಪರಿಕ ಕರಕುಶಲವನ್ನು ಜಗತ್ತಿಗೆ ಒಡೆಯನಾದ ಶ್ರೀ ಜಗನ್ನಾಥನನ್ನು ಅಲಂಕರಿಸಲು ಬಳಕೆ ಮಾಡಲಾಗುತ್ತದೆ, ಈ ಕಾರಣದಿಂದಲೇ ಈ ಕಲಾ ಶೈಲಿ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಬಹಳ ಮುಖ್ಯವಾಗಿ, ಭಾರತದ ಭವ್ಯತೆಯನ್ನು ಒಂದು ಬಟ್ಟೆಯ ತುಂಡಿನಲ್ಲಿ ಅತ್ಯಂತ ಅದ್ಭುತವಾಗಿ ಚಿತ್ರ ಚಿತ್ತಾರವಾಗಿ ಪ್ರತಿನಿಧಿಸಲಾಗುತ್ತದೆ. ಈ ಕಲೆಯಲ್ಲಿ ಕುಶಲಕರ್ಮಿ ಮತ್ತು ಆತನ ಕಲ್ಪನೆಯ ಶ್ರೇಷ್ಠತೆಯನ್ನು ನಾವು ಕಾಣಬಹುದಾಗಿದೆ.

ರಘುರಾಜಪುರ ಗ್ರಾಮ ಪುರಿಯಿಂದ 15 ಕಿಲೋ ಮೀಟರ್ ದೂರದಲ್ಲಿದೆ ಮತ್ತು ಭುವನೇಶ್ವರದಿಂದ 55 ಕಿಲೋಮೀಟರ್ ದೂರದಲ್ಲಿದೆ.

ರಘುರಾಜ್‌ಪುರ ರಸ್ತೆಯ ಇಕ್ಕೆಲಗಳಲ್ಲಿ 150 ಮನೆಗಳನ್ನು ಒಳಗೊಂಡ ಒಂದು ಸಣ್ಣ ಪ್ರದೇಶವಾಗಿದ್ದು, ಇಲ್ಲಿರುವ ಒಂದೆರಡು ದೇಗುಲಗಳು ಭೇಟಿಗೆ ಅತ್ಯಂತ ಯೋಗ್ಯ ತಾಣಗಳಾಗಿವೆ. ಈ ಪ್ರದೇಶಕ್ಕೆ ಭೇಟಿ ನೀಡಿದ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಲು ಶ್ರೇಷ್ಠ ಗೈಡ್­ಗಳ ಲಭ್ಯತೆಯೂ ಇಲ್ಲಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top