ಕೆಲವರಿಗೆ ಗಾರ್ಡನಿಂಗ್ ಎನ್ನುವುದು ಒಂದು ಹವ್ಯಾಸವಾಗಿರುತ್ತದೆ, ಇನ್ನೂ ಕೆಲವರಿಗೆ ಅದು ಹವ್ಯಾಸಕ್ಕಿಂತಲೂ ಹೆಚ್ಚಿನದ್ದಾಗಿರುತ್ತದೆ, ಬದುಕನ್ನೇ ಅವರು ಸುಂದರ ಹೂದೋಟ ನಿರ್ಮಾಣಕ್ಕಾಗಿ ಮುಡುಪಾಗಿಟ್ಟಿರುತ್ತಾರೆ.
ಮೈಸೂರಿನ ಹಶ್ಮತ್ ಫಾತಿಮಾ ಕೂಡ ಅಂತವರಲ್ಲಿ ಒಬ್ಬರು. ಬಾಲ್ಯದಿಂದಲೇ ಅವರಿಗೆ ಗಿಡ, ಮರ, ಹೂಗಳೆಂದರೆ ಅಚ್ಚುಮೆಚ್ಚು. ಇಂದು ಕಲ್ಯಾಣಗಿರಿಯಲ್ಲಿನ ಅವರ ಮನೆಯಲ್ಲಿ 40ಕ್ಕೂ ಅಧಿಕ ಜಾತಿಯ ಗಿಡ, ಮರ ಮತ್ತು ಬಳ್ಳಿಗಳಿವೆ. 800ಕ್ಕೂ ಅಧಿಕ ಪಾಟ್ ಗಳಲ್ಲಿ ಇವುಗಳನ್ನು ಅವರು ನೆಟ್ಟಿದ್ದಾರೆ. ಅದನ್ನು ಅವರೇ ಅತ್ಯಂತ ಜತನದಿಂದ ನೆಟ್ಟು ಬೆಳೆಸಿದ್ದಾರೆ.
ಅವರ ಮನೆಯ 40×70 ಚದರ ಅಡಿಯಲ್ಲಿ ಮಾತ್ರ ಅವರು ಬದುಕುತ್ತಾರೆ, ಉಳಿದೆಲ್ಲಾ ಕಡೆಯು ಸಸ್ಯ, ಹೂಗಳೇ ರಾರಾಜಿಸುತ್ತಿವೆ. 800 ಪಾಟ್ ಮಾತ್ರವಲ್ಲದೇ, ಪ್ಲಾಸ್ಟಿಕ್ ಬಾಟಲ್, ತುಂಡು ಮಾಡಿದ ಬಿದಿರು, ಶೂ, ಬಳಕೆ ಮಾಡಿದ ಟಯರ್ಗಳಲ್ಲಿ ಗಿಡಗಳನ್ನು ಬೆಳೆಸಿದ್ದಾರೆ.
ಕೊಕೊ ಕೋಲಾದ ಬಾಟಲ್ಗಳನ್ನು ಮಧ್ಯದಲ್ಲಿ ಓಪನ್ ಮಾಡಿ ಅದರಲ್ಲಿ ಮಣ್ಣು ತುಂಬಿಸಿ ಅದರಲ್ಲಿ ಸಸಿಯನ್ನು ನೆಟ್ಟಿದ್ದಾರೆ. ಈ ಬಾಟಲಿಗಳನ್ನು ಒಂದಕ್ಕೊಂದು ಸುರಿದು ಮೇಲಿಂದ ನೇತು ಹಾಕಿದ್ದಾರೆ. ಇದು ವರ್ಟಿಕಲ್ ಗಾರ್ಡನ್ ಆಗಿ ಕಂಗೊಳಿಸುತ್ತಿದೆ.
‘ನಾನು ಇಂಟರ್ನೆಟ್ನಲ್ಲಿ ಸಾಕಷ್ಟು ತೋಟಗಾರಿಕೆ ಚಾನಲ್ಗಳನ್ನು ಮತ್ತು ಪೇಜ್ಗಳನ್ನು ನೋಡುತ್ತಿದ್ದೆ ಮತ್ತು ಅವುಗಳನ್ನು ಅನುಸರಿಲಾರಂಭಿಸಿದೆ. ಅಲ್ಲಿ ನನಗೆ ಪ್ಲಾಸ್ಟಿಕ್ ಬಾಟಲಿಗಳು, ಹಳೆಯ ಬೂಟುಗಳು, ಮತ್ತು ಟೈಯರ್ಗಳನ್ನು ಬಳಸಿಕೊಂಡು ಗಾರ್ಡನಿಂಗ್ ಮಾಡುವ ಐಡಿಯಾ ದೊರೆಯಿತು. ಕಳೆದ ಮೂರು ವರ್ಷಗಳಿಂದ ಅವುಗಳನ್ನು ಬಳಸಿಕೊಂಡು ಗಾರ್ಡನಿಂಗ್ ಮಾಡುತ್ತಿದ್ದೇನೆ’ ಎಂದಿದ್ದಾರೆ.
ಅವರ ಮನೆಯ ಸುತ್ತಲೂ ನೋಡಿದಾಗ, ಮಾವಿನ ಮರಗಳು, ಡೇಲಿಯಾ, ಮಾರಿಗೋಲ್ಡ್, ಝಿನಿಯಾ, ದಾಸವಾಳ, ಬಾಗೋನಿಯಾ, ಡೈಸಿ, ಡಯಾನ್ಥಸ್, ವರ್ಬೆನಾ, ಪೆಟುನಿಯಾ, ಆಂಥೂರಿಯಮ್, ಜೆನೊಬಿಯ, ಜೆರೇನಿಯಮ್ ಮತ್ತು ಗ್ಲಾಡಿಯೊಲಾಗಳಂತಹ ಹೂಬಿಡುವ ಸಸ್ಯಗಳು ಕಾಣುತ್ತವೆ. ಅದರ ನಡು ನಡುವೆ ಕೊಕ್ಕರೆ, ಮೀನು ಮುಂತಾದ ಪ್ರಾಣಿಗಳ ಸಣ್ಣ ಪುಟ್ಟ ಪ್ರತಿಮೆಗಳನ್ನು ಇಟ್ಟು ಗಾರ್ಡನ್ ಅನ್ನು ಇನ್ನಷ್ಟು ಆಕರ್ಷಕಗೊಳಿಸಿದ್ದಾರೆ.
‘ಕೆಲವು ಮರಗಳು ಮತ್ತು ಸಸ್ಯಗಳು ಮೊದಲಿನಿಂದಲೂ ಆ ಜಾಗದಲ್ಲಿ ಇವೆ, ಹೆಚ್ಚಿನ ಹೂಬಿಡುವ ಸಸ್ಯಗಳು ಸೀಸನಲ್ ಆಗಿವೆ. ನಾನು ನೈಸರ್ಗಿಕವಾಗಿ ನಾನೇ ಮಿಕ್ಸ್ ಮಾಡುವ ಮ್ಯಾನ್ಯೂರ್ಗಳನ್ನು ಸಸ್ಯಗಳಿಗೆ ಹಾಕುತ್ತೇನೆ, ಈಗ ನಾನು ನನ್ನ ಗಾರ್ಡನಿಂಗ್ ಕೆಲಸಕ್ಕೆ ಓರ್ವ ಕಾರ್ಮಿಕರನ್ನೂ ನೇಮಿಸಿದ್ದೇನೆ. ಬಾಟಿಕ್ ಅನ್ನು ನಡೆಸುತ್ತಿರುವುದರಿಂದ ಹೆಚ್ಚಿನ ಸಮಯ ನನಗೆ ಬೇಕಾಗುತ್ತದೆ. ಆದರೂ ದಿನದ ಎರಡು ಗಂಟೆ ನಾನು ಗಾರ್ಡನ್ನಲ್ಲಿ ಕಳೆಯುತ್ತೇನೆ’ ಎಂದು ಫಾತಿಮ ಹೇಳುತ್ತಾರೆ.
ಫಾತಿಮಾ ಅವರ ಹೂದೋಟದ ಮೇಲಿನ ಪ್ರೀತಿ ಮತ್ತು ಕಾಳಜಿಗೆ ಅವರಿಗೆ ಗೌರವವೂ ಸಿಗುತ್ತಿದೆ. ಮೈಸೂರು ದಸರಾದಲ್ಲಿ ತೋಟಗಾರಿಕಾ ಇಲಾಖೆಯು ಆಯೋಜನೆಗೊಳಿಸಿದ್ದ ಫ್ಲವರ್ ಶೋ ಕಾರ್ಯಕ್ರಮದಲ್ಲಿ ಫಾತಿಮಾ ಅವರಿಗೆ ‘ಹೋಮ್ ಗಾರ್ಡನ್ ಸಿರೀಸ್’ನಲ್ಲಿ ಸತತ 11ನೇ ಬಾರಿಗೆ ಪ್ರಶಸ್ತಿಗಳು ಸಿಕ್ಕಿವೆ.
ಗುಲ್ಬರ್ಗಾ, ಭಟ್ಕಳ, ಹೈದರಾಬಾದ್ ಮುಂತಾದ ಕಡೆಗಳಿಂದ ಬಂದ ಜನರು ಇವರಿಂದ ಗಾರ್ಡನಿಂಗ್ ಸಲಹೆಗಳನ್ನು ಪಡೆದುಕೊಂಡು ಹೋಗುತ್ತಾರೆ.
ದಸರಾ ಸಂದರ್ಭದಲ್ಲಿ ನನ್ನ ಗಾರ್ಡನ್ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗುತ್ತದೆ, ಎಲ್ಲರ ಗಮನವನ್ನೂ ಅದು ಸೆಳೆಯುತ್ತದೆ ಎಂದು ಫಾತಿಮ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.