ನವದೆಹಲಿ: ಖಾದಿ ಉದ್ಯಮ ಅತ್ಯುತ್ತಮ ರೀತಿಯಲ್ಲಿ ಬೆಳವಣಿಗೆಯನ್ನು ಕಾಣುತ್ತಿದೆ. ಬೇಡಿಕೆ ಹೆಚ್ಚಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣ. 2018-19ರ ಸಾಲಿನಲ್ಲಿ ಶೇ.28ರಷ್ಟ ಪ್ರಗತಿಯನ್ನು ಖಾದಿ ಉದ್ಯಮ ಸಾಧಿಸಿದ್ದು, ಇದು ಇತ್ತೀಚಿನ ವರ್ಷಗಳಲ್ಲೇ ಅತ್ಯಧಿಕ ಪ್ರಮಾಣದ ಪ್ರಗತಿಯಾಗಿದೆ.
‘ಖಾದಿ ಫ್ಯಾಬ್ರಿಕ್, ರೆಡಿಮೇಡ್ ಗಾರ್ಮೆಂಟ್, ಸೋಲಾರ್ ವಸ್ತ್ರ ಇತ್ಯಾದಿ ಏನೇ ಬಟ್ಟೆಯಿದ್ದರೂ ಖಾದಿಗೆ ಒಳ್ಳೆಯ ಬೇಡಿಕೆ ಬಂದಿದೆ. ಕಳೆದ ಐದು ವರ್ಷಗಳಲ್ಲಿ ವಾರ್ಷಿಕ ಜಿಗಿತವನ್ನು ಉದ್ಯಮ ಕಾಣುತ್ತಿದೆ’ ಎಂದು ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಮಂಡಳಿ ಮುಖ್ಯಸ್ಥ ವಿ.ಕೆ ಸಕ್ಸೇನಾ ಹೇಳಿದ್ದಾರೆ. 2018-19ರ ಸಾಲಿನಲ್ಲಿ ಉತ್ಪಾದನೆ ಶೇ.17ರಷ್ಟು ಜಿಗಿತ ಕಂಡಿದೆ, ಕಳೆದ ವರ್ಷ ಇದು ಶೇ.7ರಷ್ಟು ಇತ್ತು.
ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಮಂಡಳಿಗೆ ಬಟ್ಟೆಗಳಿಗಿಂತಲೂ ಆಹಾರ ಮತ್ತು ಕಾಸ್ಮೆಟಿಕ್ಗಳಿಂದ ಹೆಚ್ಚಿನ ಆದಾಯಗಳು ಬರುತ್ತಿವೆ. ಖಾದಿ ಮಾರಾಟ ಬೆಳೆದಿರುವುದರಿಂದ ಮಂಡಳಿಗೆ ಪ್ರಮುಖ ಗಾರ್ಮೆಂಟ್ ದಿಗ್ಗಜರೊಂದಿಗೆ ಸ್ಪರ್ಧೆ ನಡೆಸಲು ಸಾಧ್ಯವಾಗಿದೆ.
2017-18ರಲ್ಲಿ, ಆದಿತ್ಯ ಬಿರ್ಲಾ ಫ್ಯಾಶನ್ ಮತ್ತು ರಿಟೇಲ್, 7,181 ಕೋಟಿ ರೂ.ಗಳ ಮಾರಾಟ ಮಾಡಿದೆ. ರೇಮಂಡ್ ಒಟ್ಟು 6,000 ಕೋಟಿ ರೂ. ಆದಾಯವನ್ನು ಪಡೆದುಕೊಂಡಿದೆ. ಆದರೆ ಎರಡೂ ಕಂಪೆನಿಗಳು ಶೇ.10ರಷ್ಟು ಬೆಳವಣಿಗೆಯನ್ನು ಕಂಡಿವೆ. ಖಾದಿಗೆ ಪ್ರತಿಸ್ಪರ್ಧಿಯಾಗಿರುವ ಫ್ಯಾಬಿಂಡಿಯಾ 1,000 ಕೋಟಿ ರೂಪಾಯಿಗಳಷ್ಟು ಮಾರಾಟ ಕಂಡಿದೆ ಆದರೆ ಬೆಳವಣಿಗೆ ಬಹುತೇಕ ಬಿದ್ದು ಹೋಗಿದೆ.
ಖಾದಿ ಬೇಡಿಕೆಯಲ್ಲಿ ಹೆಚ್ಚಳದಿಂದಾಗಿ, ಪ್ರಸಕ್ತ ಹಣಕಾಸು ವರ್ಷಕ್ಕೆ 5,000 ಕೋಟಿ ರೂಪಾಯಿಗಳಷ್ಟು ಮಾರಾಟದ ಗುರಿಯನ್ನು ಹೊಂದಲಾಗಿದೆ, ಇದು ಮಹತ್ವಾಕಾಂಕ್ಷೆಯ ಗುರಿಯಾಗಿದ್ದು, ಇದಕ್ಕೆ 55% ನಷ್ಟು ಬೆಳವಣಿಗೆಯ ಅಗತ್ಯವಿರುತ್ತದೆ ಎಂದು ಸಕ್ಸೇನಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.