News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಘುವಾರ್ ಎಂಬ ಮಾದರಿ ಗ್ರಾಮ

ನಿಜವಾದ ಭಾರತ ತನ್ನ ಹಳ್ಳಿಗಳಲ್ಲಿ ಅಸ್ತಿತ್ವದಲ್ಲಿದೆ ಎಂಬುದು ಸ್ಥಾಪಿತವಾದ ಸತ್ಯ. ನಿಜವಾದ ಮಾದರಿ ಗ್ರಾಮವನ್ನು ಪತ್ತೆ ಹಚ್ಚುವುದು ತುಂಬಾ ಕಷ್ಟ. ಆದರೆ ನಾವು ಮಧ್ಯಪ್ರದೇಶದ ನರಸಿಂಗ್ಪುರ ಜಿಲ್ಲೆಯ ಬಘುವಾರ್ ಗ್ರಾಮಕ್ಕೆ ಭೇಟಿ ನೀಡಿದರೆ ಅಂತಹ ಮಾದರಿ ಗ್ರಾಮ ಅಸ್ತಿತ್ವದಲ್ಲಿದೆ ಎಂಬುದು ನಮಗೆ ಅರಿವಾಗುತ್ತದೆ. ಬಘುವಾರ್­ನಲ್ಲಿ ನಾವು ಅತ್ಯುತ್ತಮ ರಸ್ತೆಗಳನ್ನು, ಅತ್ಯುತ್ತಮ ಅಂಡರ್ ಗ್ರೌಂಡ್ ಒಳಚರಂಡಿ ವ್ಯವಸ್ಥೆಯನ್ನು, ಪ್ರತಿ ಮನೆಯಲ್ಲಿ ಶೌಚಾಲಯ,  ಒಳಾಂಗಣ ಕ್ರೀಡಾಂಗಣ ಮತ್ತು ಕೊನೆಯದಾಗಿ “ಜೈವಿಕ ಅನಿಲ ಸ್ಥಾವರ”ವನ್ನು ಕೂಡ ನಾವು ಕಾಣಬಹುದಾಗಿದೆ. ಗ್ರಾಮ ಸಮುದಾಯದೊಳಗೂ ಪ್ರತಿಯೊಬ್ಬರು ಸೌಹಾರ್ದವಾಗಿ ಬದುಕುತ್ತಿದ್ದಾರೆ. ಅತ್ಯುತ್ತಮ ಸಾಮರಸ್ಯ ನೆಲೆ ನಿಂತಿದೆ. ಪ್ರತಿ ಗಲಾಟೆಯನ್ನೂ ಸಮುದಾಯದೊಳಗೆ ಕೂತು ಬಗೆಹರಿಸಲಾಗುತ್ತದೆ.  ಕಳೆದ ಹಲವಾರು ವರ್ಷಗಳಿಂದ ಯಾರೂ ಕೂಡ ಪೊಲೀಸ್ ಠಾಣೆಯ ಮೆಟ್ಟಿಲನ್ನೇರಿಲ್ಲ. ಈ ಗ್ರಾಮದಲ್ಲಿ ಶಾಲೆ ಮತ್ತು ಸಮುದಾಯ ಸಭಾಂಗಣ ನಿರ್ಮಾಣಕ್ಕಾಗಿ ಸರಕಾರದ ಹಣ ಕಡಿಮೆ ಬಿದ್ದಾಗಲೂ ಇಲ್ಲಿ ಗ್ರಾಮಸ್ಥರು ಮುಂದೆ ಬಂದು ಹಣವನ್ನು ಕೊಡುಗೆ ನೀಡಿದರು. ಈ ಕಟ್ಟಡಗಳ ನಿರ್ಮಾಣ ಕಾರ್ಯದಲ್ಲೂ ಕಾರ್ಮಿಕರಂತೆ ದುಡಿದು ಸೇವೆ ಸಲ್ಲಿಸಿದ್ದಾರೆ.

ಈ ಪವಾಡವು ರಾತೋರಾತ್ರಿ ಸಂಭವಿಸಿದ್ದಲ್ಲ.  ಕಳೆದ 50 ವರ್ಷಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳು ಮತ್ತು  ಸ್ವಯಂಸೇವಕರ ಗ್ರಾಮೀಣ ಅಭಿವೃದ್ಧಿಯ ಪ್ರಯತ್ನಗಳ ಪರಿಣಾಮವಾಗಿ ಇದು ಸಂಭವಿಸಿದೆ. 50 ವರ್ಷಗಳ ಹಿಂದೆ ಠಾಕೂರ್ ಸುರೇಂದ್ರ ಸಿಂಗ್, ಠಾಕೂರ್ ಸಂಗ್ರಾಮ್ ಸಿಂಗ್ ಮತ್ತು ಹರಿಶಂಕರ್ ಲಾಲ್ ಮತ್ತು ಈ ಗ್ರಾಮದ ಇತರ ಸಮಾನಮನಸ್ಕ ಯುವಕರು ತಮ್ಮ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ರೂಪಿಸಲು ನಿರ್ಧರಿಸಿದರು.  ಸಹ ಸರಕಾರ್ಯವಾಹ  ಭೌರೋವ್ ದೇವ್ರಾಸ್ ಅವರಿಂದ  ಸ್ಫೂರ್ತಿಯನ್ನು ಪಡೆದುಕೊಂಡು, ಕಳೆದ 50 ವರ್ಷಗಳಿಂದ ಸ್ಥಿರವಾಗಿ ಗ್ರಾಮದ ಏಳಿಗೆಗೆ ಶ್ರಮಿಸಿದರು. ಅವರ ಪ್ರಯತ್ನಗಳ ಪರಿಣಾಮಗಳನ್ನು ಇಂದು ನಾವು ನಿಯಮಿತವಾಗಿ ನಡೆಸಲ್ಪಡುವ “ಪ್ರಭಾತ್ ಫೆರಿ”, ಪ್ರತಿ ಮನೆಯ ಗೋಡೆಗಳ ಮೇಲೆ ಬರೆದ ಪ್ರೇರಣಾದಾಯಕ ಬರಹಗಳು ಅಥವಾ ಮಳೆನೀರನ್ನು ಕೊಯ್ಲು ಮಾಡುವ ಅಭ್ಯಾಸ ಇವುಗಳ ರೂಪದಲ್ಲಿ ಕಾಣಬಹುದಾಗಿದೆ. ಇವರೆಲ್ಲರೂ ಬಘುವಾರ್ ಅನ್ನು ಎಲ್ಲರಿಗೂ ಒಂದು ಉತ್ತಮ ಉದಾಹರಣೆಯನ್ನಾಗಿ ಮಾಡಿದ್ದಾರೆ. ಗ್ರಾಮದ ಕಲ್ಯಾಣದ ಕಡೆಗೆ ನಿಷ್ಠಾವಂತ ಸಮರ್ಪಣೆಯ ಪರಿಣಾಮವಾಗಿ, ಠಾಕೂರ್ ಸುರೇಂದ್ರ ಸಿಂಗ್ ಈ ಗ್ರಾಮದ ಸರಪಂಚ್ ಆಗಿ  ಕಳೆದ 25 ವರ್ಷಗಳಿಂದ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಾರೆ.

1950 ರಿಂದಲೂ, ಬಘುವಾರ್­­ನ ಗ್ರಾಮ ಅಭಿವೃದ್ಧಿ ಸಮಿತಿಯು ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ. ಬಘುವಾರ್ ತಲುಪುವ ಮೂರು ಕಿಲೋಮೀಟರ್ ಉದ್ದದ ರಸ್ತೆಯನ್ನು ಈ ಗ್ರಾಮದ ಯುವಕರೇ ನಿರ್ಮಿಸಿದ್ದಾರೆ. ತನ್ನ ಗ್ರಾಮವು ತನ್ನ ಅಭಿವೃದ್ಧಿಗಾಗಿ ಕೇವಲ ಸರ್ಕಾರವನ್ನು ಅವಲಂಬಿಸಿಲ್ಲ ಎಂದು  ಕೃಷಿ ಪರಿಣಿತರಾದ ಬಘುವಾರ್ ನಿವಾಸಿ ಮತ್ತು ಮೂರು ವರ್ಷ ತರಬೇತಿ ಪಡೆದ ಸ್ವಯಂಸೇವಕ ಎಂ. ಪಿ. ನರೋಲಿಯಾ ಹೇಳುತ್ತಾರೆ. ಹಳ್ಳಿಗರು ಶಾಲೆಯ ಕಟ್ಟಡವನ್ನು ಪೂರ್ಣಗೊಳಿಸಲು ಸರಕಾರ ಒದಗಿಸಿದ ಅನುದಾನಕ್ಕೆ 1.5 ಲಕ್ಷ ರೂ. ಅನ್ನು ತಮ್ಮ ಕೈಯಿಂದ ಸೇರಿಸಿ ಕೊಟ್ಟಿದ್ದಾರೆ ಮತ್ತು ಭ್ರಾಮರಿ ನದಿಗೆ ಅಡ್ಡಲಾಗಿ  ಅಣೆಕಟ್ಟು ಕಟ್ಟಲು 2.5 ಲಕ್ಷ ರೂಪಾಯಿಗಳನ್ನು ಕೊಡುಗೆ ನೀಡಿದ್ದಾರೆ ಎಂದು ಹೇಳುತ್ತಾರೆ.  ಅಣೆಕಟ್ಟಿನ ನಿರ್ಮಾಣವು ಕೃಷಿ ಉತ್ಪನ್ನಗಳಿಗೆ ನೀರಿನ ಕೊರತೆಯ ಸಮಸ್ಯೆಯನ್ನು ಬಗೆಹರಿಸಿದೆ. ನಿಯಮಿತ ಸ್ವಚ್ಛತೆ, ಪ್ರತಿ ಮನೆಯ ಮುಂಭಾಗದಲ್ಲಿ ನೀರು ಸಂರಕ್ಷಣಾ ಹೊಂಡಗಳ ನಿರ್ಮಾಣ, ಅಂಡರ್ ಗ್ರೌಂಡ್ ಒಳಚರಂಡಿ ವ್ಯವಸ್ಥೆ, ಮರ  ಬೆಳೆಸುವಿಕೆ ಮತ್ತು ನೀರಿನ ಕೊಯ್ಲುಗಳನ್ನು ಮಾಡುವುದು ಪ್ರತಿ ಬಘುವಾರ್ ನಿವಾಸಿಗಳ ಅಭ್ಯಾಸವಾಗಿದೆ.

ಪ್ರತಿ ಮನೆಯ ಗೋಡೆಗಳ ಮೇಲೆ ಮೂಡಿರುವ ಸಂಪೂರ್ಣ ಸಾಕ್ಷರತೆಯ, ಪ್ರೇರಣೆಯ, ಶೈಕ್ಷಣಿಕ ಮಹತ್ವದ ಸಾರುವ ಉಲ್ಲೇಖಗಳು ಆಳವಾದ ಪ್ರಭಾವವನ್ನು ಬೀರುತ್ತವೆ. ಶೇ.40ರಷ್ಟು ಮನೆಗಳಲ್ಲಿ ಅಡುಗೆಗೆ ಇಂಧನವಾಗಿ ಗೋಬರ್-ಗ್ಯಾಸ್ ಅನ್ನು ಬಳಸಲಾಗುತ್ತಿದೆ. ಈ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಹೆಚ್ಚಿನ ಹಾಜರಾತಿ ಇದೆ. ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಗುಣಮಟ್ಟ ಕಾಯ್ದುಕೊಳ್ಳಲು ಸಮಿತಿಯ ಸದಸ್ಯರು ನವೀನ ಪರಿಕಲ್ಪನೆಗಳನ್ನು ಬಳಸುತ್ತಾರೆ. ಈ ಶಾಲೆಯ ಹಿಂದಿನ ವಿದ್ಯಾರ್ಥಿ ಶ್ರೀ ನಾರಾಯಣ್ ಪ್ರಸಾದ್ ನರೋಲಿಯಾ, ಶಿಶು ಮಂದಿರದ ಮಾಜಿ ಮುಖ್ಯಸ್ಥ ಮತ್ತು ಕೃಷಿಯ ಮಾಜಿ ನಿರ್ದೇಶಕರಾಗಿದ್ದಾರೆ. ಬಿಡುವಿನ ವೇಳೆ  ಈ ಶಾಲೆಯಲ್ಲಿ ಬೋಧಿಸಲು ತನ್ನ ಸಮಯವನ್ನು ಅರ್ಪಿಸುತ್ತಾರೆ. ಈ ಶಾಲೆಯ ಮಾಜಿ ವಿದ್ಯಾರ್ಥಿ ಅವೇಶ್ ಶರ್ಮಾ ಅವರು, ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿದ್ದರು. ಈ ಶಾಲೆಯ ಕೆಲವು ಹಳೆ ವಿದ್ಯಾರ್ಥಿಗಳು ವೈದ್ಯರಾಗಿದ್ದಾರೆ ಮತ್ತು ಮೂರು ಮಾಜಿ ವಿದ್ಯಾರ್ಥಿಗಳು  ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ನರಸಿಂಗಪುರದ ಕಲೆಕ್ಟರ್ ಮನೀಶ್ ಸಿಂಗ್ ಅವರು ಈ ಗ್ರಾಮದ ಬಗ್ಗೆ ಎಷ್ಟು ಪ್ರಭಾವಿತರಾಗಿದ್ದಾರೆ ಎಂದರೆ, ಐಎಎಸ್ ಆಕಾಂಕ್ಷಿಗಳು ತಮ್ಮ ಪರೀಕ್ಷೆಗಳಿಗೆ ಮುಂಚಿತವಾಗಿ ಈ ಗ್ರಾಮಕ್ಕೆ ಭೇಟಿ ನೀಡುವಂತೆ ಅವರು ಉತ್ತೇಜಿಸುತ್ತಾರೆ. ಅಲ್ಲಿಂದೀಚೆಗೆ ಅನೇಕ ಬ್ಯಾಚ್­ಗಳ ವಿದ್ಯಾರ್ಥಿಗಳು ಮಾದರಿ ಗ್ರಾಮವಾದ ಬಘುವಾರ್ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.

ಹೀಗೆ ಎಲ್ಲಾ ಗ್ರಾಮಗಳಲ್ಲೂ ಸಮಾನ ಮನಸ್ಕರಾಗಿ ಗ್ರಾಮದ ಅಭ್ಯುದಯಕ್ಕೆ ಶ್ರಮಿಸಿದರೆ ರಾಮರಾಜ್ಯ ನಿರ್ಮಾಣವಾಗುವುದು ಬಹುದೂರವಿಲ್ಲ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top