ಚೆನ್ನೈ: ನರೇಂದ್ರ ಮೋದಿ ಸರ್ಕಾರದ ಮಹತ್ವದ ಯೋಜನೆಗಳಲ್ಲೊಂದಾದ ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ತಮಿಳುನಾಡು ಶೀಘ್ರದಲ್ಲೇ ಶೇ.100ರಷ್ಟು ಅಡುಗೆ ಅನಿಲ ಹೊಂದಿದ ರಾಜ್ಯವಾಗಿ ಹೊರಹೊಮ್ಮಲಿದೆ.
ತಮಿಳುನಾಡಿನಲ್ಲಿ ಪ್ರಸ್ತುತ 2.02 ಕೋಟಿ ಅಡುಗೆ ಅನಿಲಗಳಿವೆ, ಅಂದರೆ ಶೇ.97.09ರಷ್ಟು ಮನೆಗಳಲ್ಲಿ ಎಲ್ಪಿಜಿಯ ಮೂಲಕವೇ ಅಡುಗೆ ನಡೆಯುತ್ತಿದೆ. ದೇಶದ ಇತರ ಯಾವುದೇ ರಾಜ್ಯಕ್ಕಿಂತಲೂ ಇಲ್ಲಿ ಹೆಚ್ಚಿನ ಪ್ರಮಾಣದ ಅಡುಗೆ ಅನಿಲಗಳಿವೆ, ಕಳೆದ ಮೂರು ವರ್ಷಗಳಲ್ಲಿ ಅತೀ ಹೆಚ್ಚು ಸಂಖ್ಯೆಯ ಕುಟುಂಬಗಳು ಎಲ್ಪಿಜಿಯನ್ನು ಪಡೆದುಕೊಂಡಿವೆ. 2016ರ ಎಪ್ರಿಲ್ನಲ್ಲಿ 1.61 ಕೋಟಿ ಕೋಟಿ ಅಡುಗೆ ಅನಿಲ ಹೊಂದಿದ ಕುಟುಂಬ ಇಲ್ಲಿದ್ದವು, ಈಗ ಆ ಸಂಖ್ಯೆ 2.02 ಕೋಟಿಗೆ ಏರಿಕೆಯಾಗಿದೆ.
ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ತೈಲ ಕಂಪನಿಗಳು, ವಾರ್ಷಿಕ ತಲಾ 6 ಲಕ್ಷ ಎಲ್ಪಿಜಿ ಕನೆಕ್ಷನನ್ನು ಇಲ್ಲಿನ ಕುಟುಂಬಗಳಿಗೆ ನೀಡುತ್ತಿವೆ. ಉಜ್ವಲ ಯೋಜನೆಯಡಿ ಈ ಕಂಪನಿಗಳು ಸುಮಾರು 9 ಲಕ್ಷ ಎಲ್ಪಿಜಿಯನ್ನು ನೀಡಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಂಡಿಯನ್ ಆಯಿಲ್ನ ಕಾರ್ಯನಿರ್ವಾಹಕ ಅಧಿಕಾರಿ ಆರ್.ಸೀತಾರಾಮನ್ ಅವರು, ‘ದೇಶೀಯ ಎಲ್ಪಿಜಿ ಕನೆಕ್ಸನ್ ತಮಿಳುನಾಡಿನಲ್ಲಿ ಶೇ.97.6ಕ್ಕೆ ಏರಿಕೆಯಾಗಿದೆ. ಉಜ್ವಲ ಯೋಜನೆಗೆ ಧನ್ಯವಾದಗಳು. ಈ ಯೋಜನೆಯಿಂದ ಬಡವರ್ಗಗಳು ಎಲ್ಪಿಜಿಯನ್ನು ಪಡೆಯುವಂತಾಯಿತು’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.