ಕಾಸರಗೋಡು : ಅಂತಾರಾಷ್ಟ್ರೀಯ ಯೋಗದಿನಾಚರಣೆಯ ಅಂಗವಾಗಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಯೋಗದಿನವನ್ನು ಆಚರಿಸಲಾಯಿತು.ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಏಕೈಕ ಸಾಧನೆ ಯೋಗ, ಯಮನಿಯಮಗಳಿಂದ ವ್ಯಕ್ತಿ ಮತ್ತು ಸಮಾಜದಲ್ಲಿ ಅನುಸರಿಸಬೇಕಾದ ಜೀವನ ಮೌಲ್ಯ ಹಾಗೂ ಆಸನ, ಪ್ರಾಣಾಯಾಮ, ಪ್ರತ್ಯಹಾರ, ಧಾರಣ ಧ್ಯಾನ, ಸಮಾಧಿಯಿಂದ ಶರೀರ ಮನಸ್ಸಿಗೆ ಬೇಕಾದ ಚೈತನ್ಯವನ್ನು ನೀಡುವ ಅಷ್ಟಾಂಗಯೋಗವನ್ನು ಪತಂಜಲಿ ಮುನಿಗಳು ಜಗತ್ತಿಗೆ ನೀಡಿರುತ್ತಾರೆ.
ಈ ವರ್ಷ ವಿಶ್ವ ವ್ಯಾಪಿಯಾಗಿ ನಡೆಸಲಾಗುತ್ತಿರುವ ಯೋಗದಿನದ ಅಂಗವಾಗಿ ಶ್ರೀ ಭಾರತೀ ವಿದ್ಯಾಪೀಠ ಬದಿಯಡ್ಕ ಶಾಲೆಯಲ್ಲಿ ಯೋಗದಿನವನ್ನು ಸೋಮವಾರ ಆಚರಿಸಲಾಯಿತು. ಬೆಳಗ್ಗೆ 9.30ಕ್ಕೆ ದೀಪ ಪ್ರಜ್ವಲನೆ, ಆಸನಪ್ರದರ್ಶನ ಹಾಗೂ ವಿದ್ಯಾಪೀಠದ ಮಕ್ಕಳಿಂದ `ಆಹಾರ-ಆರೋಗ್ಯ’, `ಆಸನ-ಆರೋಗ್ಯ’ ವಿಷಯಗಳ ಕುರಿತು ಪ್ರಬಂಧ ಮಂಡನೆ ನಡೆಯಿತು. ಮಾರ್ಗದರ್ಶಕರಾಗಿ ಶಾಲಾ ಯೋಗ ಅಧ್ಯಾಪಕ ಶ್ರೀ ಪುಂಡರೀಕಾಕ್ಷ ಬೆಳ್ಳೂರು ಹಾಗೂ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ನೇತೃತ್ವ ನೀಡಲಿರುವರು.
ಇದೇ ಸಂದರ್ಭದಲ್ಲಿ ಪಾಲಕರಿಗೆ ಮುದ್ರಾ ವಿಜ್ಞಾನ ತರಬೇತಿ ನಡೆಯಿತು. ಬೆಳ್ಳೂರು ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅವರು ತರಬೇತಿ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.