ನವದೆಹಲಿ: ಅರುಣಾಚಲ ಪ್ರದೇಶ ಕೊನೆಗೂ ತನ್ನದೇ ಆದ 24×7 ಟಿಲಿವಿಶನ್ ಚಾನೆಲ್ನ್ನು ಹೊಂದುತ್ತಿದೆ. ಡಿಡಿ ಅನುಪ್ರಭಾವನ್ನು ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಇಟನಗರದಲ್ಲಿ ಲೋಕಾರ್ಪಣೆಗೊಳಿಸುತ್ತಿದ್ದಾರೆ. ಇದೇ ದಿನ, ಇಟನಗರ ವಿಮಾನನಿಲ್ದಾಣವನ್ನೂ ಅವರು ಉದ್ಘಾಟಿಸುತ್ತಿದ್ದಾರೆ.
‘ಆಕ್ಟ್ ಈಸ್ಟ್ ಪಾಲಿಸಿ’ಯಡಿ ಈಶಾನ್ಯ ಭಾಗಗಳನ್ನು ಅಭಿವೃದ್ಧಿಗೊಳಿಸುವ ತನ್ನ ಯೋಜನೆಯ ಭಾಗವಾಗಿ, ಟಿವಿ ಚಾನೆಲ್ನ್ನು ಆರಂಭಿಸಲಾಗುತ್ತಿದೆ ಮತ್ತು ವಿಮಾನನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೇ, ರಸ್ತೆ, ವಾಯುಮಾರ್ಗ, ವಿದ್ಯುತ್, ಜಲ ಮಾರ್ಗ ಇತ್ಯಾದಿಗಳ ಮೂಲಕ ಈ ಭಾಗದ ಆಲ್ರೌಂಟ್ ಕನೆಕ್ಟಿವಿಟಿಯನ್ನು ಸುಧಾರಿಸುವತ್ತ ಮೋದಿ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ.
‘ಅನುಪ್ರಭಾ ಚಾನೆಲ್, ದಿನದ 24 ಗಂಟೆಯೂ, ಕುಗ್ರಾಮಗಳಿಂದಲೂ ನೇರ ಪ್ರಸಾರಗಳನ್ನು ಮಾಡಲು ಅನುವು ಮಾಡಿಕೊಡುವಂತಹ ಡಿಜಿಟಲ್ ಸೆಟ್ಲೈಟ್ ನ್ಯೂಸ್ ಸಂಗ್ರಹ ಘಟಕ ಸೇರಿದಂತೆ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ’ಎಂದು ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಮಿತ್ ಖಾರೆ ತಿಳಿಸಿದ್ದಾರೆ.
ಅಡೆತಡೆಯಿಲ್ಲ ಪ್ರಸರಣಕ್ಕಾಗಿ ಡಿಡಿಕೆ ಇಟನಗರದಲ್ಲಿ ಪ್ಲೇಔಟ್ ಫೆಸಿಲಿಟಿ ಮತ್ತು ಅರ್ಥ್ ಸ್ಟೇಶನ್ಗಳನ್ನು ಸ್ಥಾಪನೆ ಮಾಡಲಾಗಿದೆ. ಸುಮಾರು 60 ಕೋಟಿ ರೂಪಾಯಿಯ ಯೋಜನೆ ಇದಾಗಿದೆ, ಪ್ರಸಾರ ಭಾರತಿಯ ಪ್ರಸಾರ ಮೂಲಸೌಕರ್ಯ ಮತ್ತು ನೆಟ್ವರ್ಕ್ ಅಭಿವೃದ್ಧಿಗೆ ಸಂಪುಟ ರೂ.1,054.52 ಕೋಟಿ ಅನುದಾನವನ್ನು ಅನುಮೋದಿಸಿದ್ದು, ಈ ಪಾಜೆಕ್ಟ್ ಅದರ ಭಾಗವಾಗಿದೆ.
ಈಶಾನ್ಯ ಭಾಗದ ಜನರ ಆಶೋತ್ತರಗಳನ್ನು ಈಡೇರಿಸುವ ಸಲುವಾಗಿ ಡಿಡಿ ಅನುಪ್ರಭಾವನ್ನು ಆರಂಭಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.