ಕಾಂಗ್ರೆಸ್ ಪಕ್ಷ ಬಿಜೆಪಿ ಆಡಳಿತದ ವಿರುದ್ಧ ನಿರಂತರ ವಾಗ್ದಾಳಿಗಳನ್ನು ನಡೆಸುತ್ತಲೇ ಇದೆ. ಅದು ಅವರ ರಾಜಕೀಯ ಅನಿವಾರ್ಯ ಎಂಬುದು ಎಲ್ಲರೂ ಅರ್ಥಮಾಡಿಕೊಳ್ಳಬೇಕಾದ ಸಂಗತಿ. ಆದರೆ ಈ ವಾಗ್ದಾಳಿಗಳ ನಡುವೆಯೂ, ಮೋದಿ ಸರ್ಕಾರ ಎಲ್ಲರಿಗೂ ಅಭಿವೃದ್ಧಿ ಎಂಬ ತನ್ನ ಧ್ಯೇಯವನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ.
ಉದಾಹರಣೆಗೆ ಪ್ರಧಾನಮಂತ್ರಿ ಆವಾಸ್ ಯೋಜನೆ, ಮೋದಿ ಆಡಳಿತದ ನಾಲ್ಕು ವರ್ಷಗಳಲ್ಲಿ 45.86 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲು ಅನುಮೋದನೆ ನೀಡಿದರೆ, ಯುಪಿಎ 10 ವರ್ಷಗಳ ಆಡಳಿತದಲ್ಲಿ ಅನುಮೋದನೆ ನೀಡಿದ್ದು ಕೇವಲ 13.45 ಲಕ್ಷ ಮನೆಗಳಿಗೆ ಮಾತ್ರ
ಪ್ರಧಾನ್ ಮಂತ್ರಿ ಆವಾಸ್ ಯೋಜನಾ: ಆರಂಭ
ವಸತಿ ಮತ್ತು ವಾಣಿಜ್ಯ ಸ್ಥಳಗಳಿಗೆ ಹೆಚ್ಚಿನ ಬೇಡಿಕೆಯ ಕಾರಣದಿಂದಾಗಿ ರಿಯಲ್ ಎಸ್ಟೇಟ್ ಕ್ಷೇತ್ರವು ಭಾರತದಲ್ಲಿ ವೃದ್ಧಿಯನ್ನು ಕಾಣುತ್ತಿದೆ. ಆರ್ಥಿಕತೆ ಸುಧಾರಣೆಯಾದಂತೆ, ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರವು ಒಂದು ಟ್ರಿಲಿಯನ್ ಡಾಲರ್ಗಳಷ್ಟು ಮಾರುಕಟ್ಟೆ ಗಾತ್ರವನ್ನು ವಿಸ್ತರಿಸಲಿದೆ, ಈ ಮೂಲಕ ರಾಷ್ಟ್ರದ ಒಟ್ಟು ಜಿಡಿಪಿಗೆ 13% ರಷ್ಟು ಕೊಡುಗೆ ನೀಡಲಿದೆ.
ಸ್ಮಾಟ್ಸಿಟಿ ಯೋಜನೆ, ನ್ಯಾಷನಲ್ ಅರ್ಬನ್ ಹೌಸಿಂಗ್ ಫಂಡ್, ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಇತ್ಯಾದಿಗಳ ಮೂಲಕ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಜೊತೆಗೂಡಿ ಈ ವಲಯದ ಅಭಿವೃದ್ಧಿಗೆ ಉತ್ತೇಜನವನ್ನು ನಿಡುತ್ತಿದೆ.
ಭಾರತ ಕೋಟ್ಯಾಂತರ ಜನರ ದೇಶವಾಗಿದ್ದು, ಕೋಟ್ಯಾಂತರ ಜನರಿಗೆ ವಾಸಿಸಲು ಒಂದು ನೆಲೆ ಬೇಕಾಗಿರುವುದು ಅವಶ್ಯ, ಮನೆ ಎಂದು ಕರೆಯುವ ನೆಲೆಯನ್ನು ಪಡೆಯುವುದು ನಮ್ಮೆಲ್ಲರ ಕನಸಾಗಿರುತ್ತದೆ. ಇದೇ ಕಾರಣಕ್ಕೆ ’ಪ್ರಧಾನ ಮಂತ್ರಿ ಆವಾಸ್ ಯೋಜನೆ’ಯ ಮೂಲಕ ಸರ್ಕಾರ ಎಲ್ಲರ ಕನಸನ್ನು ನನಸಾಗಿಸಲು ಪ್ರಯತ್ನಿಸುತ್ತಿದೆ.
ದೇಶ ಸ್ವಾತಂತ್ರ್ಯ ಪಡೆದು 75 ವರ್ಷಗಳನ್ನು ಪೂರೈಸುವ 2022ರ ವೇಳೆಗೆ ಎಲ್ಲರಿಗೂ ಮನೆ ಕಲ್ಪಿಸುವುದು ಪ್ರಧಾನಿ ಮೋದಿಯವರ ಗುರಿಯಾಗಿದೆ. ಈ ಗುರಿಯನ್ನು ತಲುಪಲು ’ಪ್ರಧಾನ ಮಂತ್ರಿ ಆವಾಸ್ ಯೋಜನಾ-ಹೌಸಿಂಗ್ ಫಾರ್ ಆಲ್’ ಎಂಬ ಬೃಹತ್ ಯೋಜನೆಯನ್ನು ಕೇಂದ್ರ ಕೈಗೆತ್ತಿಕೊಂಡಿದೆ, ಈ ಯೋಜನೆಯಡಿ ದೇಶದಾದ್ಯಂತ ಅಗ್ಗದ ದರದ ಮನೆಗಳು ಪರಿಸರ ಸ್ನೇಹಿ ವಿಧಾನದಲ್ಲಿ ನಿರ್ಮಾಣಗೊಳ್ಳಲಿದ್ದು, ಇದರ ಪ್ರಯೋಜನ ದೇಶದ ಬಡವರಿಗೆ ಸಿಗಲಿದೆ.
ಈ ಯೋಜನೆಯಡಿ ಎರಡು ವಿಭಾಗಗಳಿದ್ದು, ಪ್ರಧಾನಮಂತ್ರಿ ಆವಾಸ್ ಯೋಜನಾ (ನಗರ)-ಇದು ನಗರ ಪ್ರದೇಶದ ಬಡವರಿಗೆ, ಮತ್ತೊಂದು ಪ್ರಧಾನಮಂತ್ರಿ ಆವಾಸ್ ಯೋಜನಾ (ಗ್ರಾಮೀಣ)-ಇದು ಗ್ರಾಮೀಣ ಭಾಗದ ಬಡವರಿಗೆ. ಈ ಯೋಜನೆಯಡಿ 2022ರ ಮಾರ್ಚ್ನೊಳಗೆ 20 ಮಿಲಿಯನ್ ಮನೆ ನಿರ್ಮಿಸುವ ಗುರಿ ಹೊಂದಲಾಗಿದೆ.
ಈ ಯೋಜನೆಯು ಸ್ಲಂ ನಿವಾಸಿಗಳು ಸೇರಿದಂತೆ ನಗರದ ಬಡವರ ವಸತಿ ಅಗತ್ಯವನ್ನು ಕೆಳಗಿನ ಕಾರ್ಯಕ್ರಮಗಳ ಮೂಲಕ ಬಗೆಹರಿಸಲು ಪ್ರಯತ್ನಿಸುತ್ತದೆ:
1. ಭೂಮಿಯನ್ನು ಸಂಪನ್ಮೂಲವಾಗಿ ಬಳಸಿ, ಖಾಸಗಿಯವರ ಭಾಗವಹಿಸುವಿಕೆಯೊಂದಿಗೆ ಸ್ಲಂಗಳಿಗೆ ಪುನರ್ವಸತಿ ಕಲ್ಪಿಸುವುದು.
2. ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಮೂಲಕ ಸಮಾಜದ ದುರ್ಬಲ ವರ್ಗಗಳಿಗೆ ಒಳ ವಸತಿ ಸಿಗುವಂತೆ ಮಾಡುವುದು.
3. ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಪಾಲುದಾರಿಕೆಯಲ್ಲಿ ಕೈಗೆಟುಕುವ ವಸತಿ.
4.ಫಲಾನುಭವಿ-ನೇತೃತ್ವದ ವೈಯಕ್ತಿಕ ಮನೆ ನಿರ್ಮಾಣ /ವಿಸ್ತರಣೆಗೆ ಸಬ್ಸಿಡಿ.
ಪ್ರಧಾನ್ ಮಂತ್ರಿ ಆವಾಸ್ ಯೋಜನೆ: ಅನುಷ್ಠಾನ ತಂತ್ರ
ಫಲಾನುಭವಿಗಳು, ಯುಎಲ್ಬಿಗಳು ಮತ್ತು ರಾಜ್ಯ ಸರ್ಕಾರಗಳಿಗೆ ನಾಲ್ಕು ಆಯ್ಕೆಯನ್ನು ನೀಡುವ ಮೂಲಕ ಈ ಮಿಷನ್ ಅನ್ನು ಜಾರಿಗೆ ತರಲಾಗುತ್ತದೆ. ಈ ನಾಲ್ಕು ಆಯ್ಕೆಗಳು ಕೆಳಗಿವೆ:
ಅನುಷ್ಠಾನ ತಂತ್ರವು ಸ್ಲಂ ಪುನರಾಭಿವೃದ್ಧಿಗೆ 4 ವಿಭಾಗಗಳನ್ನು ಒಳಗೊಂಡಿದೆ, ಕಡಿಮೆ ಆದಾಯದ ಗುಂಪು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸಾಲ ಸಬ್ಸಿಡಿಯನ್ನು ನೀಡುವ ಮೂಲಕ, ಖಾಸಗಿ ಅಥವಾ ಸಾರ್ವಜನಿಕ ಏಜೆನ್ಸಿಗಳೊಂದಿಗೆ ಪಾಲುದಾರಿಕೆಗಳ ಮೂಲಕ ಒಳ್ಳೆ ವಸತಿ ನೀಡುವಿಕೆ, ನಿರ್ಮಾಣ ಅಥವಾ ವಿಸ್ತರಣೆಯ ಫಲಾನುಭವಿಗಳಿಗೆ ಸಬ್ಸಿಡಿ ನೀಡುವ ಮೂಲಕ ಕೈಗೆಟುಕುವ ವಸತಿಗಳನ್ನು ನೀಡುವುದು.
ಪ್ರಧಾನ ಮಂತ್ರಿ ಆವಾಸ್ ಯೋಜನಾ: ಇಂದಿನವರೆಗಿನ ಕಥೆ
ಮಹಾರಾಷ್ಟ್ರ, ಆಂಧ್ರ, ಮಧ್ಯಪ್ರದೇಶದಲ್ಲಿ ಯೋಜನೆಯ ಆರ್ಥಿಕ ಮತ್ತು ಬಾಹ್ಯ ಪ್ರಗತಿ ಹೆಚ್ಚಿದೆ, ಗುಜರಾತ್, ಎಂಪಿ, ಮಹಾರಾಷ್ಟ್ರದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ನಗರದಡಿ ಹೆಚ್ಚಿನ ಮನೆಗಳು ನಿರ್ಮಾಣವಾಗಿದೆ, ಒಟ್ಟು 3,68,076 ಕೋಟಿ ಹೂಡಲಾಗಿದ್ದು, 2014೪ರಿಂದ ಒಟ್ಟು 12,87,564 ಮನೆಗಳು ನಿರ್ಮಾಣಗೊಂಡಿವೆ
ಪ್ರಧಾನ್ ಮಂತ್ರಿ ಆವಾಸ್ ಯೋಜನೆ: ಪ್ರಭಾವ ವಿಶ್ಲೇಷಣೆ
ಪಿಎಂಎವೈ-ಜಿ ಅಡಿಯಲ್ಲಿ ಮಾರ್ಚ್ 5,2018 ರವರೆಗೆ ನಿರ್ಮಾಣಗೊಂಡ ಮತ್ತು ನಿರ್ಮಾಣ ಹಂತದಲ್ಲಿರುವ ಪೂರ್ಣಗೊಂಡ ಮನೆಗಳು ಅನುಕ್ರಮವಾಗಿ 23.52 ಲಕ್ಷ ಮತ್ತು 21.28 ಲಕ್ಷಗಳಾಗಿವೆ. ಸರ್ಕಾರದಿಂದ ಫಲಾನುಭವಿಗಳಿಗೆ ಒದಗಿಸಿದ ಒಟ್ಟು ಹಣಕಾಸಿನ ನೆರವು ಕ್ರಮವಾಗಿ 1.47 ಲಕ್ಷ ರೂ. ಮತ್ತು 1.59 ಲಕ್ಷ ರೂ.
ಪಿಎಂಎವೈ-ಜಿ ಅಡಿಯಲ್ಲಿ ಮನೆಗಳ ನಿರ್ಮಾಣಕ್ಕೆ ಮಾರ್ಚ್ 5, 2018 ರವರೆಗೆ ಖರ್ಚಾದ ಒಟ್ಟು ರೂ. 35,135 ಕೋಟಿ ಎಂದು ಅಂದಾಜಿಸಲಾಗಿದೆ.
ಉದ್ಯೋಗದ ವಿಷಯದಲ್ಲಿ, ಗುಡ್ಡಗಾಡು / ಐಎಪಿ ಜಿಲ್ಲೆಗಳಲ್ಲಿ ಪಿಎಂಎವೈ-ಜಿ ಮನೆ ನಿರ್ಮಾಣವು ನಿತ್ಯ 48 ಪರಿಣಿತ ಕಾರ್ಮಿಕರಿಗೆ ಮತ್ತು 105 ಪರಿಣತಿಯಿಲ್ಲದ ಕಾರ್ಮಿಕರಿಗೆ ಉದ್ಯೋಗ ಒದಗಿಸಿದೆ. ಸರಳ ಪ್ರದೇಶಗಳಲ್ಲಿ ದಿನಾ ಅಂದಾಜು 75 ಪರಿಣತ ವ್ಯಕ್ತಿಗಳು ಮತ್ತು 92 ಪರಿಣತಿಯಿಲ್ಲದ ಕಾರ್ಮಿಕರ ಉದ್ಯೋಗ ಪಡೆದಿದ್ದಾರೆ. ಮಾರ್ಚ್ ೦೫, ೨೦೧೮ ರವರೆಗೆ ನಿರ್ಮಾಣ ಹಂತದ ಮನೆಗಳು ಎರಡೂ ವರ್ಷಗಳಿಂದ 4.82 ಕೋಟಿ ಪರಿಣತ ಕಾರ್ಮಿಕರಿಗೆ ಮತ್ತು 7.60 ಕೋಟಿ ಪರಿಣತಿಯಿದ್ದ ವ್ಯಕ್ತಿಗಳ ಉದ್ಯೋಗವನ್ನು ಕಲ್ಪಿಸಿಕೊಟ್ಟಿದೆ.
ಎಲ್ಲರಿಗೂ ವಸತಿ: ಬಿಜೆಪಿ ವರ್ಸಸ್ ಕಾಂಗ್ರೆಸ್
ಬಿಜೆಪಿ ಸರ್ಕಾರವು 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ 45.86 ಲಕ್ಷ ಮನೆಗಳನ್ನು ನಗರ ಪ್ರದೇಶದ ಬಡವರಿಗೆ ನಿರ್ಮಾಣ ಮಾಡಿದೆ. ಯುಪಿಎ ಸರ್ಕಾರದ 10 ವರ್ಷಗಳ ಆಡಳಿತಕ್ಕೆ ಹೋಲಿಸಿದರೆ ಇದು ಶೇ.240ರಷ್ಟು ಹೆಚ್ಚಳ.
ವಸತಿ ಸಚಿವಾಲಯದ ದಾಖಲೆಯ ಪ್ರಕಾರ, ಯುಪಿಎ 1 ಮತ್ತು ಯುಪಿ 2 ಆಡಳಿತದಲ್ಲಿ ಜವಹಾರ್ಲಾಲ್ ನೆಹರೂ ನ್ಯಾಷನಲ್ ಅರ್ಬನ್ ರಿನಿವಲ್ ಮಿಶನ್ನಡಿ ಮತ್ತು ರಾಜೀವ್ ಆವಾಸ್ ಯೋಜನೆಯಡಿ 13.45 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗಿದೆ.
2014ರಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 45.86 ಲಕ್ಷ ಮನೆ ನಿರ್ಮಾಣವಾಗಿದೆ. ಪಿಎಂಎವೈ ನಗರದಡಿ 2022ರ ವೇಳೆಗೆ 1.2 ಕೋಟಿ ಮನೆ ನಿರ್ಮಾಣದ ಗುರಿಯನ್ನು ಹೊಂದಲಾಗಿದೆ. ಈಗಾಗಲೇ ಎನ್ಡಿಎ ಸರ್ಕಾರ 70.716 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮೋದನೆಯನ್ನು ನೀಡಿದೆ. ಇದರಲ್ಲಿ 45.86 ಲಕ್ಷ ಪೂರ್ಣಗೊಂಡಿದೆ.
ಪ್ರಧಾನಮಂತ್ರಿ ಆವಾಸ್ ಯೋಜನಾ : ಮುಂದಿರುವ ಸವಾಲು
ತನ್ನ ವಿವಿಧ ಯೋಜನೆಗಳ ಗುರಿಯನ್ನು ತಲುಪಲು ಸರ್ಕಾರ 5-6 ವರ್ಷಗಳಲ್ಲಿ 4 ಟ್ರಿಲಿಯನ್ ಡಾಲರ್ ಹೂಡಿಕೆ ಮಾಡಬೇಕಾಗಿದೆ. ಎಲ್ಲರಿಗೂ ವಸತಿಯ ಗುರಿ ತಲುಪಲು 2025ರೊಳಗೆ ವಸತಿ ವಲಯದಲ್ಲಿ 1.3 ಟ್ರಿಲಿಯನ್ ಡಾಲರ್ ಹೂಡಿಕೆ ಮಾಡುವ ಅಗತ್ಯವಿದೆ.
ಈ ಕಡಿಮೆ ವೆಚ್ಚದ ಮನೆಗಳ ನಿರ್ಮಾಣದ ಯೋಜನೆಗೆ ಖಾಸಗಿ ಮಾಲಿಕತ್ವದ ಭೂಮಿಯನ್ನು ಬಳಸುವ ಸಂಭಾವ್ಯತೆಗಳು ಕುಗ್ಗಿರುವುದರ ಕಾರಣ, ಸಾರ್ವಜನಿಕ ಖಾಸಗಿ ಪಾಲುದಾರಿಕೆಯ ಮಾದರಿಯಲ್ಲಿ ಇಲ್ಲಿ ಅಳವಡಿಸಿಕೊಳ್ಳುವುದು ಉತ್ತಮವಾಗಿರುತ್ತದೆ.
ಖಾಸಗಿ ವಲಯದ ಭಾಗಿಯಿಂದ ಹಣಕಾಸು ಮತ್ತು ಕ್ಯಾಪಿಟಲ್ ಮಾರ್ಕೆಟ್ನ ಲಭ್ಯತೆಯೂ ವೃದ್ಧಿಯಾಗಲಿದೆ. ಕಡಿಮೆ ಖರ್ಚಾಗಲಿದೆ.
ಅದೇನೆಯಿದ್ದರೂ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು ದೇಶದ ಪ್ರತಿಯೊಬ್ಬ ನಾಗರಿಕನಿಗೂ ವಸತಿ ಸಿಗುವಂತೆ ಮಾಡಲು ಮೋದಿ ನೇತೃತ್ವದ ಸರ್ಕಾರ ಬದ್ಧತೆಯನ್ನು ಪ್ರದರ್ಶಿಸುತ್ತಿದೆ.
source: www.opindia.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.