ಭಾರತದ ಸಂಸ್ಕೃತಿ, ಪರಂಪರೆಗೆ ಸಾವಿರಾರು ವರ್ಷಗಳ ಶ್ರೇಷ್ಠ ಇತಿಹಾಸವಿದೆ, ಇಡೀ ಜಗತ್ತು ಅಜ್ಞಾನದ ಕತ್ತಲಲ್ಲಿದ್ದ ಸಂದರ್ಭದಲ್ಲೂ ನಾವೂ ತಕ್ಷಶಿಲಾ, ನಳಂದಾದಂತಹ ವಿಶ್ವವಿದ್ಯಾಲಯಗಳನ್ನು ಹೊಂದಿದ್ದೆವು. ನಮ್ಮ ದೇಶದ ಶ್ರೀಮಂತಿಕೆ ಅನಾಗರಿಕ ವಿದೇಶಿಗರ ಕಣ್ಣನ್ನು ಕುಕ್ಕಿದ್ದವು. ಹಲವಾರು ಬಾರಿ ದಂಡೆತ್ತಿ ಬಂದು ನಮ್ಮ ಮೇಲೆ ಆಕ್ರಮಣವನ್ನೂ ಮಾಡಿದರು. ಬ್ರಿಟಿಷರು ನಮ್ಮ ಒತ್ತೆಯಾಳುಗಳನ್ನಾಗಿ ಮಾಡಿದರು. ನಮ್ಮ ಹಿರಿಯರು ನಿರಂತರ ಹೋರಾಡಿದ ಫಲವಾಗಿ ೧೯೪೭ರಲ್ಲಿ ಸ್ವಾತಂತ್ರ್ಯ ನಮಗೆ ಲಭಿಸಿತು. ಸ್ವಾತಂತ್ರ್ಯ ಸಿಕ್ಕ ಆ ರಾತ್ರ್ರಿ, ವಾರದ ಒಂದು ದಿನವನ್ನು ದೇಶ ನಿರ್ಮಾಣದಲ್ಲಿ ಭಾಗಿಯಾಗಲು ಮೀಸಲಿಡಿ, ಬಡ ಮಕ್ಕಳಿಗೆ ಉಚಿತ ವಿದ್ಯೆ ಕೊಡಲು, ರೈತರ ಸನಿಹಕ್ಕೆ ತೆರಳಲು ಬಳಸಿ ಎಂದು ಕರೆ ನೀಡಿದ್ದರೆ ಇಂದು ದೇಶದ ಪರಿಸ್ಥಿತಿಯೇ ಬದಲಾಗುತ್ತಿತ್ತೇನೋ. ಆ ಕಾಲದಲ್ಲಿ ರೇಡಿಯೋ, ಟಿ.ವಿ.ಗಳು ಕೆಲವರ ಅಧೀನದಲ್ಲಿದ್ದ ಕಾರಣ ಸ್ವಾತಂತ್ರ್ಯ ಹೋರಾಟಗಾರರ, ಮಹಾನ್ ನಾಯಕರ ಕಥೆಗಳೂ ನಮ್ಮವರೆಗೆ ತಲುಪುವುದು ಕಷ್ಟವಾಗಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ನಮ್ಮ ಬೆರಳ ತುದಿಯಲ್ಲಿ ಸೋಶಿಯಲ್ ಮೀಡಿಯಾ ಎಂಬ ಅಸ್ತ್ರ ಇದೆ. ಅದನ್ನು ಬಳಸಿ ನಾವು ಸಾವಿರಾರು ಜನರನ್ನು ತಲುಪಬಹುದು.
ಭಾರತದಲ್ಲಿ ಈಗಲೂ ಸಾಕಷ್ಟು ಸಮಸ್ಯೆಗಳಿಗೆ. ೪೫ ನಿಮಿಷಗಳಿಗೊಮ್ಮೆ ದೇಶದ ಯಾವುದೋ ಮೂಲೆಯಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಲವ್ ಜಿಹಾದ್, ನಕ್ಸಲಿಸಂ, ಅರ್ಬನ್ ನಕ್ಸಲಿಸಂ, ಗೋಹತ್ಯೆ, ಭ್ರಷ್ಟಾಚಾರ ಹೀಗೆ ಹತ್ತು ಹಲವು ಸಮಸ್ಯೆಗಳಿವೆ. ಇದನ್ನು ಬದಲಾಯಿಸಲು ನಮಗೆ ಸಾಧ್ಯವಿಲ್ಲವೇ? ಸಾಧ್ಯವಿದೆ. ಇಂದು ನಮಗೆ ದೇಶಕ್ಕಾಗಿ ಸಾಯುವ ಪರಿಸ್ಥಿತಿಯಿಲ್ಲ, ದೇಶದ ಶ್ರೇಷ್ಠತೆಗಾಗಿ ನಾವು ಬದುಕಬೇಕಾಗಿದೆ.
ಕೋಟ್ಯಾಂತರ ಜನರು ಇಂದು ಸೋಶಿಯಲ್ ಮೀಡಿಯಾ ಬಳಸುತ್ತಿದ್ದಾರೆ. ಇದರಲ್ಲಿ ಕೆಲವೇ ಜನರನ್ನು ತಲುಪಲು ನಾವು ಯಶಸ್ವಿಯಾದರೂ ಅದ್ಭುತವನ್ನೇ ಸೃಷ್ಟಿಸಬಹುದಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ:
ನಿರ್ದಿಷ್ಟ ಹ್ಯಾಶ್ಟ್ಯಾಗ್ ಬಳಸಿ ಹಲವಾರು ಜನರು ಟ್ವೀಟ್ ಮಾಡಿದಾಗ, ಆ ಹ್ಯಾಶ್ಟ್ಯಾಗ್ನಲ್ಲಿನ ವಿಷಯ ಟ್ರೆಂಡ್ ಸೃಷ್ಟಿಸುತ್ತದೆ. ಸೋಶಿಯಲ್ ಮೀಡಿಯಾ ಕ್ಯಾಂಪೇನ್ ಅತ್ಯಂತ ವಿಭಿನ್ನವಾಗಿರುತ್ತದೆ. ಇಲ್ಲಿ ಹಲವು ದಿನ ಅಥವಾ ವಾರಗಟ್ಟಲೆ ಒಂದು ವಿಷಯವನ್ನು ಪ್ರಚಾರಪಡಿಸಿದರೆ, ಹಲವಾರು ಜನರು ಇದರೊಂದಿಗೆ ಬೆರೆತು ಪರಿವರ್ತನೆ ತರಲು ಸಹಾಯಮಾಡಬಲ್ಲರು.
ಸೋಶಿಯಲ್ ಮೀಡಿಯಾ ಬಳಸಿ ಸಾಮಾಜಿಕ ಪರಿವರ್ತನೆಗಾಗಿ ಶ್ರಮಿಸುತ್ತಿರುವ ಗ್ರೂಪ್ಗಳಲ್ಲಿ ನಾವು ಕೂಡ ಸೇರಿದ್ದೇವೆ.
ನಾವು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕೆಲವೊಂದು ಕಾರ್ಯಗಳು ಇಲ್ಲಿವೆ:
#GiveUpAMeal – ಎಪ್ರಿಲ್ 2017 : ಕರ್ನಾಟಕದ ಎಂಎಂ ಹಿಲ್ಸ್ನಲ್ಲಿ ಬರ ಮತ್ತು ಮೇವಿನ ಅಭಾವದಿಂದ ಲಕ್ಷಾಂತರ ಗೋವುಗಳು ಹಸಿವೆಯಲ್ಲಿ ದಿನ ಕಳೆಯುತ್ತಿದ್ದವು. ಈ ವೇಳೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವುಗಳ ಸಹಾಯಕ್ಕೆ ಧಾವಿಸಿದ್ದರು. ಅವರೊಂದಿಗೆ ಕೈಜೋಡಿಸಿದ ನಾವುಗಳು, #GiveUpAMeal ಎಂಬ ಸೋಶಿಯಲ್ ಮೀಡಿಯಾ ಅಭಿಯಾನ ಆರಂಭಿಸಿದೆವು. ಸೋಮವಾರ ಮಧ್ಯಾಹ್ನದ ಊಟವನ್ನು ತ್ಯಜಿಸಿ ಅದರಿಂದ ಉಳಿತಾಯವಾಗುವ ಹಣವನ್ನು ಗೋವುಗಳ ಆಹಾರಕ್ಕೆ ನೀಡಬೇಕು ಎಂಬುದು ನಮ್ಮ ಅಭಿಯಾನವಾಗಿತ್ತು. ದೇಶದಾದ್ಯಂತದ ಮತ್ತು ವಿದೇಶಗಳ ಹಲವಾರು ಮಂದಿ ಸೋಮವಾರ ಮಧ್ಯಾಹ್ನ ಉಪವಾಸ ಕುಳಿತು ಹಣ ಕಳುಹಿಸಿಕೊಟ್ಟರು. 3 ತಿಂಗಳ ಅಭಿಯಾನದಲ್ಲಿ 20 ಸಾವಿರ ದೇಸಿ ಹಸುಗಳ ಪ್ರಾಣ ಉಳಿಯಿತು ಮತ್ತು ಅದನ್ನೇ ಅವಲಂಬಿಸಿದ್ದ ನೂರಾರು ರೈತರ ಬದಕೂ ಉಳಿಯಿತು.
#SaveRachel – ಜುಲೈ 2018 : ಮಣಿಪುರದ 10 ತಿಂಗಳ ರಚೆಲ್ ಎಂಬ ಮಗುವಿಗೆ ತುರ್ತು ಸರ್ಜರಿಯ ಅವಶ್ಯಕತೆಯಿತ್ತು. ಆಕೆಯ ತಾಯಿ ಬಡವಳು, ಅನಾಥೆ ಮತ್ತು ಆಕೆ ಬೆಂಗಳೂರಿಗೆ ಯಾರ ಸಹಾಯವೂ ಇಲ್ಲದೆ ಬಂದಿದ್ದಳು. ಆಕೆಯ ಸುದ್ದಿ ಕಿವಿಗೆ ಬಿದ್ದ ತಕ್ಷಣ ಆಕೆಯ ಸಹಾಯಕ್ಕೆ ನಾವು ಧಾವಿಸಿದೆವು. ಸೋಶಿಯಲ್ ಮೀಡಿಯಾ ಅಭಿಯಾನ ಆರಂಭಿಸಿದೆವು, ಮಿಲಾಪ್ ಎಂಬ ಕ್ರೌಡ್ ಫಂಡಿಂಗ್ ಸೈಟ್ ಬಳಸಿ ದಾನಿಗಳಿಂದ ಹಣ ಸಂಗ್ರಹಕ್ಕೆ ಮುಂದಾದೆವು. 24 ಗಂಟೆಗಳಲ್ಲಿ ಸಾಕಷ್ಟು ಹಣ ಸಂಗ್ರಹವಾಯಿತು. ಸರ್ಜರಿ ನೆರವೇರಿತು, ಮಗು ಗುಣಮುಖವಾಯಿತು. ನಮ್ಮ ಅಭಿಯಾನದ ಬಗ್ಗೆ ತಿಳಿದುಕೊಂಡ ಮಣಿಪುರ ಸಿಎಂ ನಮ್ಮನ್ನು ಶ್ಲಾಘಿಸಿದರು, ಅಲ್ಲದೇ ಮಗುವಿನ ಕುಟುಂಬಕ್ಕೆ ಹೆಚ್ಚಿನ ನೆರವು ನೀಡುವ ಭರವಸೆ ನಿಡಿದರು.
#SOSKerala and #SOSKodagu – ಆಗಸ್ಟ್ 2018 : ಅತೀವೃಷ್ಟಿಯಿಂದಾಗಿ ಕೊಡುಗು ಮತ್ತು ಕೇರಳ ದುಃಸ್ಥಿತಿಗೆ ದೂಡಲ್ಪಟ್ಟಾಗ ಅಲ್ಲಿನ ಜನರ ನೆರವಿಗೂ, ಸೋಶಿಯಲ್ ಮೀಡಿಯಾದ ಶಕ್ತಿಯನ್ನು ಬಳಸಿ ನಾವು ಧಾವಿಸಿದ್ದೇವೆ. ನೆರೆ ಪೀಡಿತರು ಮತ್ತು ಅವರ ಸಂಬಂಧಿಕರು ಅವಶೇಷದಡಿ ಸಿಲುಕಿಕೊಂಡ, ಅಪಾಯದಲ್ಲಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಈ ಪೋಸ್ಟ್ಗಳು ಸಾಕಷ್ಟು ಹರಿದಾಡಿತೇ ಹೊರತು ನೆರೆ ಪೀಡಿತರಿಗೆ ಇದರಿಂದ ಸಹಾಯವಾಗಲಿಲ್ಲ, ನಾವು ತಕ್ಷಣವೇ ವಾಟ್ಸಾಪ್ನಲ್ಲಿ ವಿಶ್ವದಾದ್ಯಂತದ 32 ಜನರ ತಂಡವನ್ನು ರಚನೆ ಮಾಡಿ, ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿಯನ್ನು ನೀಡಿ, ಅಪಾಯದಲ್ಲಿದ್ದವರ ಮಾಹಿತಿಯನ್ನು ನಿರಂತರ ಪಡೆದೆವು. ಬಳಿಕ ಅವರು ಸ್ವಯಂಸೇವಕರ, ಯೋಧರ ಸಂಪರ್ಕಕ್ಕೆ ಬರುವಂತೆ ಮಾಡಿದೆವು. ಶಿಪ್ಗೆ ಲೈಟ್ಹೌಸ್ ಗೈಡ್ ಮಾಡುವಂತೆ, ದೂರದಲ್ಲೇ ಇದ್ದು ನಾವು ನೆರೆ ಪೀಡಿತರನ್ನು ರಕ್ಷಕರ ಸಂಪರ್ಕಕ್ಕೆ ತಂದೆವು.
ಇನ್ನೂ ಸಾಕಷ್ಟು ಸೋಶಿಯಲ್ ಮೀಡಿಯಾ ಕ್ಯಾಂಪೇನ್ನನ್ನು ನಾವು ಮಾಡಿದ್ದೇವೆ. ಗೋವಿನ ಜಾಗೃತಿ ಅಭಿಯಾನ, #ProtectWithPen, ಹಲವಾರು ಕ್ರೌಡ್ ಫಂಡಿಂಗ್ ಅಭಿಯಾನ, #HelpArjun ಇತ್ಯಾದಿಗಳನ್ನು ನಾವು ಮಾಡಿದ್ದೇವೆ. ವಾಟ್ಸಾಪ್ನಲ್ಲಿ ಸಾಕಷ್ಟು ಉದ್ಯೋಗ ಸಂಬಂಧಿತ ಗ್ರೂಪ್ಗಳನ್ನೂ ಮಾಡಿದ್ದೇವೆ. ಉದ್ಯೋಗ ಆಕಾಂಕ್ಷಿಗಳನ್ನು ಮತ್ತು ಉದ್ಯೋಗ ನೀಡುವವರನ್ನು ಪರಸ್ಪರ ಸಂಪರ್ಕಕ್ಕೆ ಬರುವಂತೆ ಮಾಡಿದ್ದೇವೆ. ಕಳೆದ 3-4 ವರ್ಷಗಳಲ್ಲಿ ನೂರಾರು ಪದವೀಧರರು ಇಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ.
ಟೀಮ್ @BharatSpandan ನ ಆರಂಭ
‘ನಮಗೆ ತಿಳಿದಿದೆ ಅಲ್ಲಿ ಅಂಧಕಾರವಿದೆ ಮತ್ತು ಅದು ಕೆಟ್ಟದೆಂದು. ಆದರೆ ಅಲ್ಲಿ ದೀಪ ಹೊತ್ತಿಸುವ ಹಕ್ಕನ್ನು ಕಿತ್ತುಕೊಂಡವರಾರು?’ ಎಂಬ ನಮ್ಮ ಪ್ರಧಾನಿಗಳ ಮಾತನ್ನು ಇಲ್ಲಿ ನಾವು ಸ್ಮರಿಸುತ್ತೇವೆ. ನಮ್ಮ ಪ್ರತಿ ಟ್ವೀಟ್, ನಮ್ಮ ಪ್ರತಿ ಫೇಸ್ಬುಕ್ ಮೆಸೇಜ್ ಕತ್ತಲನ್ನು ಓಡಿಸುವ, ಭಾರತವನ್ನು ವಿಶ್ವಗುರುವಾಗಿ ರೂಪಿಸುವ ಬೆಳಕಾಗಿದೆ.
ಸೋಶಿಯಲ್ ಮೀಡಿಯಾ ಬಳಸಿ ದೇಶ ಸೇವೆ ಮಾಡುವ ನಮ್ಮ ಪ್ರಯತ್ನಕ್ಕೆ ಒಂದು ಉತ್ತಮ ಆಕಾರವನ್ನು ಅಧಿಕೃತವಾಗಿ ನೀಡುತ್ತಿದ್ದೇವೆ. ನಮ್ಮ ತಂಡ @BharatSpandanನನ್ನು ಸೋಶಿಯಲ್ ಮೀಡಿಯಾದಲ್ಲಿ ಆರಂಭಿಸಿದ್ದೇವೆ.
ಬನ್ನಿ, ಭಾರತ ಪರಿವರ್ತನೆಗಾಗಿ ನಮ್ಮೊಂದಿಗೆ ಕೈಜೋಡಿಸಿ
ವಿಷಯದ ಬಗ್ಗೆ ನೀವು ಆಸಕ್ತರಾಗಿದ್ದಾರೆ, ನಮ್ಮೊಂದಿಗೆ ಸೇರಿ, ಬನ್ನಿ ಒಳಿತನ್ನು ಮಾಡೋಣ. ಅದಕ್ಕಾಗಿ ಈ ಕೆಳಗಿನ ಗೂಗಲ್ ಫಾರಂನ್ನು ತುಂಬಿ.
https://docs.google.com/forms/d/1rdHVZP1kNJBI8dpdrf91b2whaVAL9pmUV-BXPUv96BE/edit
ಟೀಮ್ @BharatSpandanನಲ್ಲಿ ನಾವು ಮೊದಲನೇಯದಾಗಿ ಮಾಡುತ್ತಿರುವ ಅಭಿಯಾನ ಮತದಾನಕ್ಕೆ ಸಂಬಂಧಿಸಿದ್ದಾಗಿದೆ. ಎಲ್ಲರೂ ವೋಟರ್ ಐಡಿ ಹೊಂದಲಿ ಮತ್ತು ಪ್ರಜಾಪ್ರಭುತ್ವದ ಸಂರಕ್ಷಣೆಗಾಗಿ ಮತದಾನದಲ್ಲಿ ಎಲ್ಲರೂ ಭಾಗವಾಗಲಿ ಎಂಬ ಆಶಯದೊಂದಿಗೆ ಈ ಅಭಿಯಾನ ಆರಂಭಿಸಿದ್ದೇವೆ.
ವಾಟ್ಸಾಪ್ ಗ್ರೂಪ್ಗೆ join ಆಗಲು https://chat.whatsapp.com/GRT8r6zRtZTAOxCZhdV6No.
ಬನ್ನಿ, ದೇಶವನ್ನು ಬದಲಾಯಿಸಲು ಎಲ್ಲರೂ ಶ್ರಮಿಸೋಣ. ಭಾರತವನ್ನು ಮತ್ತೊಮ್ಮೆ ವಿಶ್ವಗುರುವನ್ನಾಗಿಸಲು ಅಂಧಕಾರದಿಂದ ಬೆಳಕಿನತ್ತ ಸಾಗೋಣ. ಇದು ನಮ್ಮ ದೇಶ, ನಾವಲ್ಲದಿದ್ದರೆ ಬೇರಾರು ಇದಕ್ಕಾಗಿ ಶ್ರಮಿಸಲು ಸಾಧ್ಯ?
Article by: Girish Alva
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.