ನವದೆಹಲಿ: ಆಯುಷ್ಮಾನ್ ಭಾರತ್ ಯೋಜನೆಯಿಂದಾಗಿ ಕಳೆದ ಒಂದೂವರೆ ತಿಂಗಳಲ್ಲಿ 3 ಲಕ್ಷ ಜನರಿಗೆ ಪ್ರಯೋಜನವಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ನವದೆಹಲಿಯಲ್ಲಿ ಜರುಗಿದ ‘ಮೇಕಿಂಗ್ ಆಫ್ ನ್ಯೂ ಇಂಡಿಯಾ ಟ್ರಾನ್ಸ್ಫಾರ್ಮೇಶನ್’ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಎನ್ಡಿಎ ಉದ್ಯಮ ಸ್ನೇಹಿ ಮತ್ತು ಬಡವರ ಸ್ನೇಹಿ ಸರ್ಕಾರವಾಗಿದೆ. ಬಡತನ ನಿರ್ಮೂಲನಾ ಯೋಜನೆಗಳಿಗಾಗಿ ನಮ್ಮ ದೇಶಕ್ಕೆ ಸಾಕಷ್ಟು ಅನುದಾನ ಸಂಪನ್ಮೂಲಗಳ ಅಗತ್ಯವಿದೆ ಎಂದರು.
ಮುಂದಿನ ಎರಡು ಮೂರು ದಶಕಗಳ ಕಾಲ ಭಾರತ ಇತರ ದೇಶಗಳಿಗಿಂತ ತ್ವರಿತವಾಗಿ ಪ್ರಗತಿ ಹೊಂದುವ ಅಗತ್ಯವಿದೆ, ಆಗ ಮಾತ್ರ ಗ್ರಾಮೀಣ ವಲಯಗಳ ಕೊಡುಗೆಯಲ್ಲಿ ಏರಿಕೆ ಕಾಣಲಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.